6:21 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

Bangalore |”ಒಳಕೋವೆ” ಕೃತಿ ಬಿಡುಗಡೆ: 5 ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ

14/05/2025, 23:35

ಬೆಂಗಳೂರು(reporterkarnataka.com): ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.‌


ಕಾವೇರಿ ನಿವಾಸದಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ “ಒಳಕೋವೆ” ಕೃತಿ ಬಿಡುಗಡೆಗೊಳಿಸಿ, ಐದು ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು. ಇವತ್ತಿನ‌ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು, ಮಾತಾಡುವವರು ಬಹಳ ಮಂದಿ ಸಿಗ್ತಾರೆ. ಆದರೆ ಬದ್ಧತೆ ಇರುವವರು ಕಡಿಮೆ ಎಂದರು.
ಇವತ್ತಿನ‌ ವ್ಯವಸ್ಥೆ ಸುಧಾರಣೆಗೆ ವಿರುದ್ಧವಾದದ್ದು. ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಏನಾಗತ್ತೆ, ರಾಜಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವ ಅರಿವು ನನಗೆ ಇದೆ ಎಂದರು. ಈ ಅರಿವು ಎಲ್ಲರಿಗೂ ಇರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗ ವ್ಯವಸ್ಥೆಗೆ ಚಲನೆ ಇದೆ. ಅದಕ್ಕೇ ಬುದ್ದ, ಬಸವ ಅಂಬೇಡ್ಕರ್ ಎಷ್ಟು ಹೋರಾಡಿದರೂ ಜಾತಿ ಹೋಗಿಲ್ಲ. ಜಾತಿ ಎನ್ನುವುದು ಸಾಮಾಜಿಕ‌ ವಾಸ್ತವ. ಸಾಮಾಜಿಕ‌ ನ್ಯಾಯದ ಪರವಾದ ನಿಜವಾದ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವವರು ಹೆಚ್ಚೆಚ್ಚು ಬರಬೇಕು ಎಂದು ಅವರು ನುಡಿದರು.
ಡಾ.ಎಂ.ಎಸ್.ಮಣಿ ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆ ಉಳ್ಳವರು. ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳ ಐದು ಮಂದಿ ಸಾಧಕರಿಗೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಐವತ್ತು ವರ್ಷಗಳ‌ ಕಾಲ ಪತ್ರಿಕಾ ವೃತ್ತಿಯ ಕುರಿತಾದ ನಾನಾ ಕ್ಷೇತ್ರಗಳಲ್ಲಿ ಶ್ರಮಿಸಿದ ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ ಬಿ.ಕೆ.ರವಿ ಅವರ ಪತ್ರಿಕಾ ವೃತ್ತಿಯ 50 ಸಂಭ್ರಮದ ಹಿನ್ನಲೆ ಜೀವಮಾನದ ಸಾಧನೆಗಾಗಿ ಮುಖ್ಯಮಂತ್ರಿಗಳು ಸನ್ಮಾನಿಸಿದರು.

*ವಿ.ಪಿ.ಸಿಂಗ್ ಪ್ರಶಸ್ತಿ ಪುರಸ್ಕೃತರು:*

1.ಡಾ.ಷರೀಫಾ, ಲೇಖಕಿ ಸಾಹಿತಿ.

2.ಡಾ.ನಳಿನಾಕ್ಷಿ ಸಣ್ಣಪ್ಪ ಸಮಾಜ ಸೇವಕರು.ಲೇಖಕಿ.

3. ನಾಗವೇಣಿ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತರು.

4. ಸಂಗಮ್ ದೇವ್, ಹಿರಿಯ ಪತ್ರಕರ್ತರು.

5. ಶಿವಲಿಂಗಪ್ಪ
ಸಂಪಾದಕರು,ಕರ್ನಾಟಕ ಸಂದ್ಯಾಕಾಲ.

ಇತ್ತೀಚಿನ ಸುದ್ದಿ

ಜಾಹೀರಾತು