2:03 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಕರ್ನಾಟಕದ ಕೌಶಲ್ಯಪೂರ್ಣ ಕಾರ್ಯಪಡೆಯತ್ತ ಜಪಾನ್‌ ಕಣ್ಣು: ಕಾನ್ಸುಲ್‌ ಜನರಲ್‌ ಜತೆಗೆ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಚರ್ಚೆ

14/05/2025, 20:48

ಬೆಂಗಳೂರು(reporterkarnataka.com): ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ವೃತ್ತಿಪರರರು, ನರ್ಸ್ ಗಳ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್ ಸ್ಟಮೊ ಸ್ಪಷ್ಟಪಡಿಸಿದ್ದು, ಕರ್ನಾಟಕದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಬುಧವಾರ ವಿಕಾಸ ಸೌಧದಲ್ಲಿ ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್-ಜನರಲ್ ನಕೇನ್‌ ಸ್ಟಮೊ ಅವರೊಂದಿಗೆ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಸಭೆ ನಡೆಸಿದ ನಂತರ ಮಾಹಿತಿ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ಕೌಶಲ್ಯಪೂರ್ಣ ವೃತ್ತಿಪರರ ಅಗತ್ಯವಿದೆ ಎಂದು ಜಪಾನ್‌ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಜಪಾನ್ ಜೊತೆ ಸಹಕಾರಕ್ಕೆ ಬದ್ಧ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ತಾಂತ್ರಿಕ ಮತ್ತು ವಿಶೇಷ ಕೋರ್ಸ್ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.
ನಮ್ಮ ಸರ್ಕಾರವು ಈಗಾಗಲೇ ಕೇಂದ್ರೀಕೃತ ಕೌಶಲ್ಯವರ್ಧನೆಯ ಮೂಲಕ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿದೆ. ಜಾಗತಿಕ ಉದ್ಯೋಗ ಅವಕಾಶಗಳ ಮೇಲೆ ಒತ್ತು ನೀಡುವ ಮೂಲಕ ಜಪಾನೀಸ್, ಜರ್ಮನ್ ಮತ್ತು ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷಾ ತರಬೇತಿಯನ್ನು ಪರಿಚಯಿಸುವ ಯೋಜನೆಯನ್ನು ಘೋಷಿಸಿದೆ ಎಂದರು.
ಇಲಾಖೆಯ ನಿಯೋಗವು ಶೀಘ್ರದಲ್ಲೇ ಜಪಾನ್‌ಗೆ ಭೇಟಿ ನೀಡಿ ಅದರ ಕಾರ್ಯಪಡೆಯ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದು ಸಚಿವ ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು.
ಇದೇ ಸಂದರ್ಭದಲ್ಲಿ ನಕೇನ್‌ ಸ್ಟಮೊ ಮಾತನಾಡಿ, ಜಪಾನ್‌ನಲ್ಲಿ ಕಾರ್ಯಪಡೆಯ ಕೊರತೆ ಇದೆ. ವಿಶೇಷವಾಗಿ ಆರೋಗ್ಯ ರಕ್ಷಣೆ, ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೌಶಲ್ಯಗಾರರ ಅಗತ್ಯವಿದೆ. ರಾಜ್ಯದಿಂದ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ ಎಂದು ತಿಳಿಸಿದರು.
ಜಪಾನಲ್ಲಿ ಈಗ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ಕ್ಷೀಣಿಸುತ್ತಿದೆ. 2030 ರ ವೇಳೆಗೆ, ಐಟಿ ವಲಯಲ್ಲಿ 7,90,000 ವೃತ್ತಿಪರರ ಕೊರತೆಯನ್ನು ಎದುರಾಗುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.
ವೈಟ್-ಕಾಲರ್ ತಜ್ಞರ ಜೊತೆಗೆ, ಕೌಶಲ್ಯಪೂರ್ಣ ತಂತ್ರಜ್ಞರ ಅಗತ್ಯವಿದೆ. ದಾದಿಯರ ಅಗತ್ಯ ಹೆಚ್ಚುತ್ತಿದೆ ಎಂದು ಸ್ಟಮೊ ಹೇಳಿದರು.
ಬೆಂಗಳೂರಿನಲ್ಲಿ ಜಪಾನಿನ ಕಂಪನಿಗಳು ಸ್ಥಳೀಯ ನರ್ಸಿಂಗ್ ಪದವೀಧರರ ಸುಗಮ ಉದ್ಯೋಗಕ್ಕೆ ಅನುಕೂಲವಾಗುವಂತೆ ಸಿಎಸ್‌ಆರ್ ಉಪಕ್ರಮಗಳ ಅಡಿಯಲ್ಲಿ ಜಪಾನೀಸ್ ಭಾಷೆ ಮತ್ತು ಕೌಶಲ್ಯ ತರಬೇತಿಯನ್ನು ನೀಡಲು ಸಿದ್ಧವಾಗಿವೆ ಎಂದು ಸ್ಟಮೊ ಸ್ಟಷ್ಟಪಡಿಸಿದರು.
ಕೈಗಾರಿಕಾ ಉತ್ಪಾದನೆ, ನಿರ್ಮಾಣ, ಹಡಗು ನಿರ್ಮಾಣ, ಯಂತ್ರೋಪಕರಣಗಳ ನಿರ್ವಹಣೆ, ಆಟೋ ದುರಸ್ತಿ, ವಾಯುಯಾನ, ಆತಿಥ್ಯ, ಸಾರಿಗೆ, ರೈಲ್ವೆ, ಕೃಷಿ, ಮೀನುಗಾರಿಕೆ, ಜಲಚರ ಸಾಕಣೆ, ಆಹಾರ ಸೇವೆಗಳು, ಅರಣ್ಯ ಮತ್ತು ಮರ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಬೇಡಿಕೆ ಇದೆ ಎಂದು ಕಾನ್ಸುಲ್-ಜನರಲ್ ವಿವರಿಸಿದರು.
ಈ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಜಪಾನ್ ಸಹಕರಿಸಲು ಸಿದ್ಧವಾಗಿದೆ. ಕಾರ್ಯಪಡೆಯ ಅಭಿವೃದ್ಧಿಯಲ್ಲಿ ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುವುದು ಎಂದು ನಕೇನ್‌ ಸ್ಟಮೊ ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು