ಇತ್ತೀಚಿನ ಸುದ್ದಿ
Chikkamagaluru | ಮಿತಿ ಮೀರಿದ ಭ್ರಷ್ಟಾಚಾರ: ಅನ್ನದಾತನಿಂದ ಲಂಚ ಸ್ವೀಕರಿಸುತ್ತಿದ್ದ ತಾಪಂ ಸಿಬ್ಬಂದಿ ಲೋಕಾಯುಕ್ತ ಬಲೆಗೆ
13/05/2025, 09:30

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಎಚ್ಚರಿಕೆಯ ಘಟನೆಯು ಬೆಳಕಿಗೆ ಬಂದಿದೆ. ಅಜ್ಜಂಪುರ ತಾ.ಪಂನಲ್ಲಿ ತಾಂತ್ರಿಕ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಿಬಾಯಿ, ಕೃಷಿ ಹೊಂಡ ಕೊರೆಸುವ ಸಲುವಾಗಿ ರೈತನೊಬ್ಬನಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತವಾಗಿದೆ.
ನಾಗವಂಗಲದ ಕೃಷಿಕನೊಬ್ಬರಿಂದ 5500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ತಾವು ಪೂರ್ವ ಪ್ರಣಾಳಿಕೆಯಂತೆ ನಡೆಸಿದ ಕಾರ್ಯಾಚರಣೆಯಲ್ಲಿ ವೆಂಕಿಬಾಯಿಯನ್ನು ಸೆರೆಹಿಡಿದಿದ್ದಾರೆ. ತಾಪಂ ಕಚೇರಿಯೊಳಗೇ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ವೆಂಕಿಬಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ಜೆ.ಜೆ ತಿರುಮಲೇಶ್ ಅವರ ನೇತೃತ್ವದಲ್ಲಿ ಸ್ಥಳೀಯ ತಂಡ ನಡೆಸಿತ್ತು.