ಇತ್ತೀಚಿನ ಸುದ್ದಿ
New Delhi | ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ: ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ
10/05/2025, 20:12

ನವದೆಹಲಿ( reporterkarnataka.com): ಅಮೆರಿಕದ ಮಧ್ಯಸ್ಥಿಕೆಯ ನಂತರ ಭಾರತ ಮತ್ತು ಪಾಕಿಸ್ತಾನವು “ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮ”ಕ್ಕೆ ಒಪ್ಪಿಕೊಂಡಿವೆ.
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಈ ವಿಷಯ ತಿಳಿಸಿದ್ದಾರೆ. ಟ್ರಂಪ್ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಇದು ಉಭಯ ದೇಶಗಳ ನಡುವಿನ
ಮೂರು ದಿನಗಳ ಭಾರೀ ಗುಂಡಿನ ವಿನಿಮಯವನ್ನು ನಿಲ್ಲಿಸಿದೆ.
ಕದನ ವಿರಾಮವನ್ನು ದೃಢೀಕರಿಸಿದ ಭಾರತ, ಪಾಕಿಸ್ತಾನದ DGMO ತನ್ನ ಭಾರತೀಯ ಸಹವರ್ತಿಯನ್ನು ಕರೆದು ಸಂಜೆ 5 ರಿಂದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದೆ.
ಸಶಸ್ತ್ರ ಪಡೆಗಳು ನೆರೆಯ ದೇಶದಲ್ಲಿ ಆರು ವಾಯುನೆಲೆಗಳನ್ನು ಧ್ವಂಸಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.