ಇತ್ತೀಚಿನ ಸುದ್ದಿ
ಮಂಗಳೂರಿನ ಫಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ 11 ಮಕ್ಕಳಿಂದ ಪ್ರಥಮ ಪರಮ ಪವಿತ್ರ ಪ್ರಸಾದ ಸ್ವೀಕಾರ
04/05/2025, 21:34

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಪ್ರಥಮ ಪರಮ ಪವಿತ್ರ ಪ್ರಸಾದ ಸಮಾರಂಭ ಭಾನುವಾರ ನಡೆಯಿತು.
ಎಲ್ ರೊಯ್ ನೊರೊನ್ಹಾ, ವೀರಾ ರೇಚಲ್ ಡಿ ಸೋಜಾ, ಸ್ವಿಜಲ್ ಸಿಯಾ ಫೆರ್ನಾಂಡಿಸ್, ಅರ್ನಾಲ್ಡ್ ಜೋಸ್ಪಾ ಡಿ ಸಿಲ್ವಾ, ಕೆವಿನ್ ಡಿ ಸೋಜಾ, ರೊಸ್ವಿನ್ ಡಿ ಸೋಜಾ, ಈವಾ ಮೈರಾ ಡಿ ಮೆಲ್ಲೊ, ಜಿಯಾ ನಿಶಿತಾ ವೇಗಸ್, ನತಾಲಿಯಾ ಸಾರಾ ಕ್ರಾಸ್ತಾ, ನಿವಿಲ್ ನೀಲ್ ಡಿ ಸೋಜಾ, ಜೆಸೆಲ್ ವಿಯಾ ಕ್ರಾಸ್ತಾ ಎಂಬ 11 ಜನ ಮಕ್ಕಳು ಪ್ರಥಮವಾಗಿ ಪರಮ ಪವಿತ್ರ ಪ್ರಸಾದ ಸ್ವೀಕರಿಸಿದರು.
ಚರ್ಚಿನ ಪ್ರಧಾನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ ಮತ್ತು ಬೆಳ್ಳೂರಿನ ಫಾ. ಸಿರಿಲ್ ವಾಲ್ಡರ್ ಅವರ ಉಪಸ್ಥಿತಿಯಲ್ಲಿ ಸಂಭ್ರಮದ ಬಲಿ ಪೂಜೆ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಚಾಲಕಿ ಲಿಝಿ ಫೆರ್ನಾಂಡಿಸ್, ಶಿಕ್ಷಕಿ ರೆನಿಟಾ ಟೆಲ್ಲಿಸ್ ಉಪಸ್ಥಿತರಿದ್ದರು.