12:15 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಗ್ರೇಸ್ ಮಿನಿಸ್ಟ್ರಿ: ಮಂಗಳೂರು ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ, ಮಂಜೂಷ ಪೆಟ್ಟಿಗೆ ಸ್ಥಾಪನೆ

18/04/2025, 19:36

ಬೆಂಗಳೂರು/ ಮಂಗಳೂರು(reporterkarnataka.com): ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ಎರಡು ದಿನಗಳ ಪಸ್ಕ ಹಬ್ಬ ಹಾಗೂ ಒಡಂಬಡಿಕೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಮಂಗಳೂರಿನ ಹೊರವಲಯದ ವಳಚ್ಚಿಲ್ ಮತ್ತು ಬೆಂಗಳೂರಿನ ಬೂದಿಗೆರೆಯಲ್ಲಿ ನಡೆಯಿತು.
ಪಸ್ಕ ಹಬ್ಬ ಸಂದರ್ಭದಲ್ಲಿ ಗುಡ್ ಫ್ರೈಡೇ ಸಡಗರದ ಜೊತೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಚರ್ಚ್ ಆವರಣದಲ್ಲಿ ಬೈಬಲ್ ಪ್ರೇರಿತ ಒಡಂಬಡಿಕೆ ಮಂಜೂಷ ಪೆಟ್ಟಿಗೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡು 7 ಸುತ್ತುಗಳ ಮೆರವಣಿಗೆಯ ನಂತರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು.
ದೇಶ-ವಿದೇಶಗಳಿಂದ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಸ್ಕ ಹಬ್ಬದಲ್ಲಿ ಪಾಲ್ಗೊಂಡಿದ್ದು, ಬಿಷಪ್ ಡಾ. ಆಂಡ್ರೋ ರಿಚರ್ಡ್ ಅವರು ಪಸ್ಕ ಹಾಗೂ ಮಂಜೂಷ ಪೆಟ್ಟಿಗೆಯ ಮಹತ್ವವನ್ನ ಭಕ್ತರಿಗೆ ಸಾರಿದರು.
ಇದೇ ವೇಳೆ ಗ್ರೇಸ್ ಮಿನಿಸ್ಟ್ರಿ ನಿರ್ದೇಶಕರು ಹಾಗೂ ಸಂಸ್ಥಾಪಕರಾದ ಡಾ.ಆಂಡ್ರ್ಯೂ ರಿಚರ್ಡ್ ಅವರು ಮಾತನಾಡಿ, ಈ ವರ್ಷ ಪಸ್ಕ ಹಬ್ಬದ ಜೊತೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಮಾಡಿರುವ ಸಂಸ್ಥೆ ಎಂದು ಹೇಳುವುದಕ್ಕೆ ಸಂತೋಷಪಡುತ್ತೇನೆ ಎಂದರು.
ಹಬ್ಬದ ಪ್ರಯುಕ್ತ ಬಡ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮುದಾಯದ ಮಕ್ಕಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು 2024ರ ಪಸ್ಕ ಹಬ್ಬ ಆಚರಿಸಿದ ಸಂದರ್ಭ ಬಡ ಚರ್ಚ್ ಒಂದು ಹಣಕಾಸಿನ ತೊಂದರೆಯಿಂದಾಗಿ ಅರ್ಧದಲ್ಲಿ ನಿಂತು ಹೋಗಿತ್ತು, ಗ್ರೇಸ್ ಮಿನಿಸ್ಟ್ರಿ ಸಂಸ್ಥೆಯಿಂದ 8 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಆ ಚರ್ಚಿನ ಸಂಪೂರ್ಣ ನಿರ್ಮಾಣಕ್ಕೆ ಸಂಸ್ಥೆ ದಾರಿ ಮಾಡಿಕೊಟ್ಟಿದೆ ಎಂದರು.
ಪ್ರತಿ ವರ್ಷ ಪಸ್ಕ ಹಬ್ಬ ಆಯೋಜಿಸಲಾಗುತ್ತಿದ್ದು, ಆಮೂಲಕ ಬಡವರು, ಅನಾಥರು, ಬಡ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.


ಇನ್ನು ಒಡಂಬಡಿಕೆ ಮಂಜೂಷ ಪೆಟ್ಟಿಗೆ ಸ್ಥಾಪನೆಯ ನಂತರ ಸಾವಿರಾರು ಭಕ್ತಾದಿಗಳು ಸಾಲು ಸಾಲಿನಲ್ಲಿ ನಿಂತು ತಮ್ಮ ಪ್ರಾರ್ಥನ ಮನವಿಗಳನ್ನು ಸಲ್ಲಿಸಿ ದೇವರ ದರ್ಶನವನ್ನ ಪಡೆದುಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು