10:34 PM Thursday19 - February 2026
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ…

ಇತ್ತೀಚಿನ ಸುದ್ದಿ

Karnataka Lokayukta | ಪುತ್ತೂರು: ಏಪ್ರಿಲ್ 24ರಂದು ಲೋಕಾಯುಕ್ತ ಜನಸಂಪರ್ಕ ಸಭೆ

17/04/2025, 22:43

ಮಂಗಳೂರು(reporterkarnataka.com): ಪುತ್ತೂರು ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಏಪ್ರಿಲ್ 24 ರಂದು ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದೆ.
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೆÇಲೀಸ್ ನಿರೀಕ್ಷಕರು ನಮೂದಿಸಿದ ದಿನದಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ. ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: ಪೊಲೀಸ್ ಅಧೀಕ್ಷಕರ ಕಛೇರಿ : 0824–2950997, 9364062517, ಪೊಲೀಸ್ ಉಪಾಧೀಕ್ಷಕರು-1 ಕಛೇರಿ: 0824-2453420, 9364062579, ಪೊಲೀಸ್ ಉಪಾಧೀಕ್ಷಕರು-2 ಕಛೇರಿ: 0824 – 2453420, 9364062580, ಪೊಲೀಸ್ ನಿರೀೀಕ್ಷಕರು-1 ಕಛೇರಿ: 0824 – 2427237, 9364062691, ಪೊಲೀಸ್ ನಿರೀೀಕ್ಷಕರು-3 ಕಛೇರಿ: 0824 – 2427237, 9364062693.
ಅರ್ಜಿದಾರರು ನಮೂನೆ I & II ರಲ್ಲಿ ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಚೇರಿಗೆ ಅಥವಾ ನೇರವಾಗಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ/ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಅವರಿಗೆ ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು