1:40 PM Monday14 - April 2025
ಬ್ರೇಕಿಂಗ್ ನ್ಯೂಸ್
Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ…

ಇತ್ತೀಚಿನ ಸುದ್ದಿ

JDS | ‘ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ’; ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

12/04/2025, 21:11

ಬೆಂಗಳೂರು(reporterkarnataka.com): ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ಜೆಡಿಎಸ್ ಪಕ್ಷದ ಸ್ಲೋಗನ್ ಅಲ್ಲ. ರಾಜ್ಯದ ಏಳೂವರೆ ಕೋಟಿ ಜನರ ಮನದಾಳದ ಮಾತನ್ನ ನಾವು ಹೇಳಿದ್ದೇವೆ. ನಮ್ಮ ಈ ಹೋರಾಟ ಒಂದು ದಿನದ ಅಭಿಯಾನ ಅಲ್ಲ. ಈ ಹೋರಾಟ ಕಾಂಗ್ರೆಸ್ ಅಧಿಕಾರ ಇರುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರವನ್ನ ಯುವ ಜನತಾದಳ ಅಧ್ಯಕ್ಷ
ನಿಖಿಲ್ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಸಾಕಪ್ಪ ಸಾಕು ಎಂಬ ಘೋಷವಾಕ್ಯ ದೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡು ಶೂನ್ಯವಾಗಿದೆ. ಕಾಂಗ್ರೆಸ್ ಎರಡು ವರ್ಷಗಳ ಅಧಿಕಾರದಲ್ಲಿ ರಾಜ್ಯದ ಜನತೆಗೆ ಸಂಕಷ್ಟದ ದಿನಗಳನ್ನ ತಂದೊಡ್ಡಿದೆ. ಬರ್ತ್ ಸರ್ಟಿಫಿಕೇಟ್ ನಿಂದ ಡೆತ್ ಸರ್ಟಿಫಿಕೇಟ್ ವರೆಗೂ ದರ ಹೆಚ್ಚಳ ಮಾಡಿದ್ದಾರೆ. ಬಸ್, ಮೆಟ್ರೋ, ಆಸ್ಪತ್ರೆ ಶುಲ್ಕ ಎಲ್ಲದರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಸರ್ಕಾರದಲ್ಲಿ ನಾವು ತೆಗೆದುಕೊಳ್ಳುವ ಗಾಳಿ ಒಂದು ಬಿಟ್ಟು ಇನ್ನೆಲ್ಲ‌ದರ ಬೆಲೆ ಏರಿಕೆ ಮಾಡಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರೇ ಕರ್ನಾಟಕದಲ್ಲಿ ಭ್ರಷ್ಟಾಚಾರ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಸತ್ಯವಾದ ಮಾತನ್ನ ಹೇಳಿದ್ದಾರೆ, ಬಸವರಾಜ ರಾಯರೆಡ್ಡಿ ಅವರೇ ನಮಗೊಂದು ಅವಕಾಶ ಕೊಡಿ ಕಮೀಷನ್ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಮಾಡ್ತೀವಿ. ಸ್ವ ಪಕ್ಷದ ಸಚಿವರ ಕುಟುಂಬಸ್ಥರು ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದರು.
*ರಾಜ್ಯದಲ್ಲಿ ಆರ್ಥಿಕ ಸುನಾಮಿ ದಿನ ಹತ್ತಿರ ಬಂದಿದೆ:*
ಈ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿರುವವರು ಜೆಡಿಎಸ್ ಪಕ್ಷದಲ್ಲಿ ತುಂಬಾ ಜನ ಇದ್ದಾರೆ. ಮುಂದಿನ ಚುನಾವಣೆಗೆ ಅವರುಗಳು ಹೇಗೆ ಜನಗಳ ಬಳಿ ಹೋಗಿ ಮತಯಾಚನೆ ಮಾಡ್ಬೇಕು. ಹಿಮಾಚಲದಲ್ಲಿ ನಿಮ್ಮದೆ ಪಕ್ಷದವರು ಗ್ಯಾರಂಟಿ ಕೊಡ್ತೀವಿ ಎಂದು ಹೇಳಿ ಆರ್ಥಿಕ ಸುನಾಮಿ ಮಾಡಿದ್ದಾರೆ. ಕಾಂಗ್ರೆಸ್ ಎರಡೇ ವರ್ಷಕ್ಕೆ ಎರಡು ಲಕ್ಷ ಕೋಟಿ ಸಾಲ ಮಾಡಿದ್ದೀರಿ ರಾಜ್ಯದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.

*ಎರಡು ವರ್ಷದಲ್ಲಿ ಎರಡು ಲಕ್ಷ ಕೋಟಿ ಸಾಲ:*
ಈ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ 16ನೇ ಬಜೆಟ್ ಮಂಡಿಸಿದ್ದಾರೆ. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಎರಡು ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಐದು ಗ್ಯಾರಂಟಿ ಕೊಡ್ತೀವಿ ಅಂದರ ಈಗ ಪರಿಸ್ಥಿತಿ ಏನಾಗಿದೆ. ಜನರೇ ಗ್ಯಾರಂಟಿ ಬೇಡ ಅಂತ ಹೇಳ್ತಿದ್ದಾರೆ. ತೆಲಂಗಾಣದಲ್ಲಿ ಸಿಎಂ ರೇವಂತರೆಡ್ಡಿ ಗ್ಯಾರಂಟಿ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಅಂತ ಹೇಳಿದ್ದಾರೆ ಎಂದು ಕಿಡಿಕಾರಿದರು.
*ಹನಿ ಟ್ರಾಪ್, ಮನಿ ಟ್ರಾಪ್, ತೆರಿಗೆ ಟ್ರಾಪ್, ಕಮೀಷನ್ ಟ್ರಾಪ್:*
ಸದನದ ಒಳಗೆ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿಷಯಾಧಾರಿತ ಚರ್ಚೆ ಆಗಬೇಕು ಅಂತ ನಿರೀಕ್ಷೆ ಇತ್ತು.
ನಮ್ಮಂತಹಾ ಯುವಕರು ಸದನದ ಬಗ್ಗೆ ಗೌರವಯುತ ಭಾವನೆ ಇಟ್ಟು ಕೊಂಡಿರುತ್ತೇವೆ,
ಅದರೆ ಮಿನಿಸ್ಟರ್‌ಗಳಿಗೆ ಹನಿ ಟ್ರಾಪ್, ಹೈಕಮಾಂಡ್‌ಗೆ ಮನಿ ಟ್ರಾಪ್, ಜನರಿಗೆ ತೆರಿಗೆ ಟ್ರಾಪ್, ಕಂಟ್ರಾಕ್ಟರ್‌ಗಳಿಗೆ ಕಮೀಷನ್ ಟ್ರಾಪ್ ಬಗ್ಗೆ ಚರ್ಚೆಮಾಡ್ತಾರೆ.ಅಭಿವೃದ್ಧಿ ಬಿಟ್ಟು, ಬೇರೆಲ್ಲಾ ಚರ್ಚೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಯುದ್ಧಕ್ಕೆ ಜನತಾದಳ ಪಕ್ಷ ಸಿದ್ದ:* ಒಂದು ಲಕ್ಷ ಕೋಟಿ ಅಭಿವೃದ್ಧಿಗೆ ಮಾಡ್ತೀರಾ.? ವೇತನ ಕೊಡ್ತೀರಾ.? ಇಲ್ಲ ಗ್ಯಾರಂಟಿ ಕೊಡ್ತೀರಾ.? ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ, ಪ್ರತಿನಿತ್ಯ ಕುಮಾರಸ್ವಾಮಿ ಅವರಿಗೆ ನೋವನ್ನ ಕೊಟ್ಟರು. ನೋವನ್ನ ಮೆಟ್ಟಿ, ಸಾಲ ಮನ್ನ ಮಾಡಿದ್ರು.ಎಷ್ಟು ಬಾರಿ ಕುಮಾರಣ್ಣ ಅವರಿಗೆ ಅಪಮಾನ ಮಾಡಿದ್ರಿ ಈಗ ಹೋರಾಟಕ್ಕೆ ಕಾಲಿಟ್ಟಿದ್ದೇವೆ.ಯುದ್ಧಕ್ಕೆ ಜನತಾದಳ ಪಕ್ಷ ಸಿದ್ದವಿದೆ ಎಂದರು
*ಕಾಂಗ್ರೆಸ್ ಜನ ಸಾಮಾನ್ಯರಿಗೆ ವಿಷ ಬೀಜ ಬಿತ್ತುತ್ತಿದೆ:*
ಕಳೆದ ಎರಡು ವರ್ಷಗಳಿಂದ SIT, ಲೋಕಾಯುಕ್ತ ಇಂಡಿಪೆಂಡೆಂಟ್ ಬಾಡಿ ಇದೆ.ಅದರ ಮೇಲೆ ನನಗೆ ಗೌರವ ಇದೆ.ಆದರೆ ಅವುಗಳ ದುರ್ಬಳಕೆ ಮಾಡಿಕೊಳ್ತಿದ್ದೀರಿ.
ಇಂದು ಕಾಂಗ್ರೆಸ್ ಜನ ಸಾಮಾನ್ಯರಿಗೆ ವಿಷ ಬೀಜ ಬಿತ್ತುತ್ತಿದೆ.ಈಗ ನೀವು ಏನು ಮಾಡ್ತಿದ್ದೀರಿ.? ಕಾಲ ಚಕ್ರ ಉರುಳಲಿದೆ.ಮತ್ತೆ ನಮ್ಮ ಕಡೆ ಕಾಲಚಕ್ರ ಬರಲಿದೆ ಎಂದು ಕಿಡಿಕಾರಿದರು.
*2028ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ:*
ದೇವೇಗೌಡರು ಹೋರಾಟದ ಮೂಲಕ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ.ಪ್ರಾದೇಶಿಕ ಪಕ್ಷವನ್ನ ನಿಷ್ಠಾವಂತ ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ.ನನಗೆ ಒಂದೇ ಕನಸು.ಏನೂ ನಿರೀಕ್ಷೆ, ಬಯಕೆ ಇಲ್ಲದೆ ಕಾರ್ಯಕರ್ತರು ಪಕ್ಷ ಬೆಳೆಸಿದ್ದೀರಿ.ಅವರನ್ನು ಗುರುತಿಸಿ ಮೇಲೆ ತರಬೇಕಿದೆ. ಮುಂದೆ ಜನ ಪಕ್ಷವನ್ನ ಸ್ವತಂತ್ರವಾಗಿ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು