6:41 AM Wednesday10 - September 2025
ಬ್ರೇಕಿಂಗ್ ನ್ಯೂಸ್
Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ…

ಇತ್ತೀಚಿನ ಸುದ್ದಿ

SOTTO Karnataka | ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಯಶಸ್ವಿ “ಹೃದಯ ಕಸಿ”

25/03/2025, 20:41

ಬೆಂಗಳೂರು(reporterkarnataka.com): ಹೃದಯ ವೈಫಲ್ಯಕ್ಕೆ ಒಳಗಾಗುವ ಸ್ಥಿತಿಗೆ ತಲುಪಿದ್ದ 9 ವರ್ಷದ ಬಾಲಕನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡುವ ಮೂಲಕ ಬಾಲಕನಿಗೆ ಮರುಹುಟ್ಟು ನೀಡಲಾಗಿದೆ.
ಯಶವಂತಪುರ ಸ್ಪರ್ಶ್‌ ಆಸ್ಪತ್ರೆಯ ಹೃದಯ ಕಸಿತಜ್ಞ, ಹೃದಯ ರಕ್ತನಾಳಗಳ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್‌ ಶೆಟ್ಟಿ.ಕೆ. ಅವರ ವೈದ್ಯ ತಂಡ ಈ ಯಶಸ್ವಿ ಹೃದಯ ಕಸಿ ನಡೆಸಿದೆ.
ಈ ಕುರಿತು ಮಾತನಾಡಿದ ಡಾ.ರವಿಶಂಕರ್‌ ಶೆಟ್ಟಿ.ಕೆ, 9 ವರ್ಷದ ರಿಯಾಂಶ್‌ ರಾವಲ್‌ ಎಂಬ ಬಾಲಕ ಹುಟ್ಟಿನಿಂದಲೇ ತೀವ್ರತರದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಕ್ರಮೇಣ ಈ ಸಮಸ್ಯೆ ಬಾಲಕನಿಗೆ ಉಸಿರಾಡಲು ಸಹ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಾಲಕ ಬೆಳೆದಂತೆ ಹೃದಯ ಸಮಸ್ಯೆಯೂ ದೊಡ್ಡದಾಗುತ್ತಾ, ಹೃದಯ ವೈಫಲ್ಯದವರೆಗೂ ತಲುಪಿತ್ತು. ಹೃದಯದ ಕಸಿ ಮಾಡುವುದೊಂದೇ ಬಾಲಕನನ್ನು ಬದುಕುಳಿಸುವ ಮಾರ್ಗವಾಗಿತ್ತು. ಆದರೆ, ಸೂಕ್ತ ಸಮಯಕ್ಕೆ ಹೃದಯ ದೊರೆಯುವುದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ನೋಂದಣಿ ಮಾಡುತ್ತಾ ಕಾಯುತ್ತಿದ್ದರು. ಸೂಕ್ತ ಸಮಯಕ್ಕೆ ರಿಯಾಂಶ್‌ಗೆ ಹೊಂದಾಣಿಕೆಯಾಗುವ ಹೃದಯವು ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಸಕ್ರಿಯ ಮತ್ತು ಸಕಾಲಿಕ ಪ್ರಯತ್ನದೊಂದಿಗೆ ದೊರೆಯಿತು.
ನಮ್ಮ ಅರಿವಳಿಕೆ ತಜ್ಞರು, ತುರ್ತು ಚಿಕಿತ್ಸಾ ವಿಭಾಗದ ನುರಿತರ ನಿರಂತರ ನಿಗಾ, ದಾದಿಯರು ಹಾಗೂ ಹೃದಯ ಕಸಿ ನಂತರದ ಚಿಕಿತ್ಸಾ ವಿಭಾಗದ ತಜ್ಞರಿಂದ ಹೃದಯವೂ ಸೇರಿದಂತೆ ಉಳಿದ ಅಂಗಾಂಗಗಳಿಗೆ ಸೂಕ್ತವಾದ ರಕ್ತ ಸಂಚಲನ ಪ್ರಕ್ರಿಯೆ ನಡೆಸುವ ತಂಡದ ಆರೈಕೆಯಿಂದಾಗಿ ರಿಯಾಂಶ್‌ಗೆ ಯಶಸ್ವಿಯಾಗಿ ಹೃದಯ ಕಸಿ ನೆರವೇರಿದ್ದು, ರಿಯಾಂಶ್‌ ಇದೀಗ ಎಲ್ಲಾ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು