7:49 AM Monday24 - March 2025
ಬ್ರೇಕಿಂಗ್ ನ್ಯೂಸ್
IndiGo6E | ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಕೇಂದ್ರ ಸಚಿವ ಪ್ರಹ್ಲಾದ್… FIR Against Madhwaraj | ಮಹಿಳೆಯ ಕಟ್ಟಿ ಹಾಕಿ ಹಲ್ಲೆ ಪ್ರಕರಣದ ಸಮರ್ಥನೆ?:… Ugadi | ರಾಜಭವನದದಲ್ಲಿ ಚಿಗುರಿದ ‘ಚಂದನ’ದ ‘ಚೈತ್ರಾಂಜಲಿ’: ಗಾಜಿನ ಮನೆಯಲ್ಲಿ ಮೂಡಿ ಬಂತು… Karnataka Bundh | ಪ್ರತಿಷ್ಠೆಗಾಗಿ ಅನಾವಶ್ಯಕ ಬಂದ್ ಕರೆ ಕೊಡಬಾರದು: ಮಾಜಿ ಗೃಹ… 23.24 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಕರ್ನಾಟಕ ಬಂದ್: ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಮ್ಮದು ಜನಪರ, ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಯ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ BJP MLAS SUSPENDED | ಸ್ಪೀಕರ್ ಪೀಠಕ್ಕೆ ಅಗೌರವ: ಡಾ. ಭರತ್ ಶೆಟ್ಟಿ,… ಹನಿಟ್ರ್ಯಾಪ್ ಪ್ರಕರಣ: ವಿಧಾನ ಸಭೆಯಲ್ಲಿ ಬಿಜೆಪಿ- ಜೆಡಿಎಸ್ ನಿಂದ ಭಾರೀ ಪ್ರತಿಭಟನೆ; ಸ್ಫೀಕರ್… ಅಂಗನವಾಡಿ ಆಹಾರ ಗುಣಮಟ್ಟದ ನಿರ್ಲಕ್ಷ್ಯ ವಹಿಸಿದರೆ ಉಪನಿರ್ದೇಶಕರ ಮೇಲೆ ಕ್ರಮ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

ನಾಳೆ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಕಾರ್ಯಕ್ರಮ

21/03/2025, 09:39

ಪುತ್ತೂರು(reporterkarnataka.com): ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು, ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟಿರುತ್ತದೆ. ಕಾಲೇಜಿಗೆ ದೊರೆತ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ 22ರಂದು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪರಮ ಪೂಜ್ಯ ಡಾ| ಪೀಟರ್ ಪಾವ್ ಸಲ್ಮಾನಾ ಅವರು ವಹಿಸಲಿದ್ದು, ಉದ್ಘಾಟಕರಾಗಿ ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಭಿಷಪ್ ಪರಮ ಪೂಜ್ಯ ಡಾ| ಪೀಟರ್ ಮಚಾದೋ ಅವರು ಆಶೀರ್ವದಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಫರೀದ್ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಸಂಸತ್ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ| ಪಿ. ಎಲ್. ಧರ್ಮ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ| ಕವಿತಾ ಕೆ. ಆರ್., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸುಶ್ರಿ ಸ್ಟೆಲ್ಲಾ ವರ್ಗೀಸ್, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಹಾಗೂ ಕಥೋಲಿಕ್ ಬೋರ್ಡ್ ಆಫ್ ಎಜ್ಯಕೇಶನ್ ನ ನಿಕಟ ಪೂರ್ವ ಕಾರ್ಯದರ್ಶಿಗಳಾದ ವಂ| ಆ್ಯಂಟನಿ ಮೈಕೆಲ್ ಶೆರಾ ಅವರು ಭಾಗವಹಿಸಲಿದ್ದಾರೆ.
ಆರು ದಶಕಗಳಿಗೂ ಹೆಚ್ಚಿನ ಇತಿಹಾಸವುಳ್ಳ ಸಂತ ಫಿಲೋಮಿನಾ ಕಾಲೇಜಿಗೆ ದೊರೆತ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆಗೆ ನಾವೆಲ್ಲ ಉತ್ಸುಕರಾಗಿದ್ದೇವೆ. ಸ್ವಾಯತ್ತತೆಯು ಕಾಲೇಜಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಸ್ಥಾನಮಾನ ದೊರೆಯುವಲ್ಲಿ ಶ್ರಮವಹಿಸಿದ ಪ್ರತಿಯೋರ್ವರನ್ನೂ ಈ ಸಂದರ್ಭದಲ್ಲಿ ಅಭಿನಂದಿಸುತ್ತಿದ್ದೇನೆ. ಸ್ವಾಯತ್ತ ಸ್ಥಾನಮಾನದಿಂದ ಸಂಸ್ಥೆಯು ಇನ್ನಷ್ಟು ಹೆಚ್ಚು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಸ್ವಾಯತ್ತ ಸ್ಥಾನಮಾನವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನಮ್ಮ ಸಂಸ್ಥೆ ತೋರುತ್ತಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸುಕತೆಯಿಂದ ಕಾರ್ಯ ನಿರ್ವಹಿಸಲು ಸ್ವಾಯತ್ತ ಸ್ಥಾನಮಾನವು ಪ್ರೇರಣೆ ನೀಡಿದೆ.

ಕಾಲೇಜಿನಲ್ಲಿ ಈಗಾಗಲೇ ಪದವಿ ವಿಭಾಗದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಬಿಸಿಎ (ಎಐ & ಎಂಎಲ್) ಕೋರ್ಸ್‌ಗಳನ್ನು ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಎಂಎಸ್‌ಡಬ್ಲ್ಯೂ, ಎಂಕಾಂ, ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಎಂಎಸ್ಸಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಸಿಎ ಕೋರ್ಸ್‌ನ್ನು ಪ್ರಾರಂಭಿಸಲಾಗಿದೆ. ಕ್ಷೇಪ್ರಗತಿಯಲ್ಲಿ ಬದಲಾವಣೆ ಹೊಂದುತ್ತಿರುವ ಉದ್ಯೋಗಕ್ಷೇತ್ರದ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಿಬಿಎ (ಬ್ಯುಸಿನೆಸ್ ಅನಲಿಟಿಕ್ಸ್), ಬಿಸಿಎ (ಡೇಟಾ ಅನಲಿಟಿಕ್ಸಕ್ಸ್) ಹಾಗೂ ಬಿಎಸ್ಸಿ (ಡೇಟಾ ಸಯನ್) ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಧೈಯವಾಗಿರಿಸಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ನಮ್ಮ ಪಠ್ಯ ಕ್ರಮವನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ರೂಪುಗೊಳಿಸಿ ವಿದ್ಯಾರ್ಥಿಗಳಿಗೆ ಹಲವು ಐಚ್ಚಿಕ ವಿಷಯಗಳನ್ನು ನೀಡಿ ಕೌಶಲ್ಯಾಧಾರಿತ ಕಲಿಕೆಗೆ ಒತ್ತು ನೀಡಲಾಗುತ್ತದೆ, ಕಾಲೇಜಿನಲ್ಲಿ ವಿದ್ಯಾರ್ಥಿ ಕೇಂದ್ರಿತ, ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು ಸಕಾಲಿಕ ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಕಡೆಗೆ ನಿರಂತರ ಗಮನಹರಿಸಲಾಗುವುದು.
ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಸ್ವೀಕರಿಸಿ ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನಮ್ಮ ಕಾಲೇಜಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅವರ ಪಾಲ್ಗೊಳುವಿಕೆಯು ಅವರು ಸಂಸ್ಥೆಯ ಮೇಲಿಟ್ಟಿರುವ ಅಭಿಮಾನ ಹಾಗೂ ಗೌರವಾದರಗಳಿಗೆ ಸಾಕ್ಷಿಯಾಗಿದೆ. ಕಾಲೇಜಿನ ಪ್ರಾಂಶುಪಾಲರ ದಕ್ಷ ಹಾಗೂ ದೂರದರ್ಶಿತ್ವದ ನಾಯಕತ್ವ ಆಡಳಿತ ಮಂಡಳಿಯ ಅಚಲ ಬೆಂಬಲ, ನಮ್ಮ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಸಮರ್ಪಣಾ ಮನೋಭಾವ ಮತ್ತು ನಮ್ಮ ವಿದ್ಯಾರ್ಥಿಗಳ ಉತ್ಸಾಹದಿಂದ, ಸ್ವಾಯತ್ತ ಸ್ಥಾನಮಾನದ ನೂತನ ಅಧ್ಯಾಯವು ನಮ್ಮ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂಬುದು ನಮ್ಮೆಲ್ಲರ ವಿಶ್ವಾಸ, ನಮ್ಮೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಕೈ ಜೋಡಿಸುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ರಕ್ಷಕ ಶಿಕ್ಷಕ ಸಂಘದ ಸಹಕಾರ ಪ್ರಶಂಸನೀಯ, ನಮ್ಮ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಸಮಗ್ರ ಶಿಕ್ಷಣಕ್ಕೆ ಸದಾ ಬದ್ಧವಾಗಿರುತ್ತದೆ ಎಂಬುದನ್ನು ಪುನರುಚ್ಚರಿಸುತ್ತಿದ್ದೇನೆ ಸ್ವಾಯತ್ತತೆ ಕೇವಲ ಒಂದು ಸವಲತ್ತು ಮಾತ್ರವಲ್ಲದೆ ಅದು ಒಂದು ಮಹತ್ತರ ಜವಾಬ್ದಾರಿಯಾಗಿದೆ, ಕಾಲೇಜಿಗೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ನಾವು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂಬುದು ನಮ್ಮೆಲ್ಲರ ಆಶಯ. ನಮ್ಮ ಸಂಸ್ಥೆಗೆ ಈ ಸ್ಥಾನಮಾನ ದೊರೆಯುವಲ್ಲಿ ಶ್ರಮವಹಿಸಿದ ಪ್ರತಿಯೋರ್ವರಿಗೂ ನಾವು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
ಕಾಲೇಜಿನ ಸಂಚಾಲಕರೂ ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳೂ ಆದ ಅತಿ ವಂದನೀಯ ಫಾ| ಲಾರೆನ್ಸ್ ಮಸ್ಕರೇನಸ್, ಹೇಳಿರುತ್ತಾರೆ.) ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ. ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಎಂ, ರೆಜಿಸ್ಟ್ರಾರ್ ಅಕಾಡೆಮಿಕ್ ಡಾ| ನಾರ್ಬಟ್್ರ ಮಸ್ಕರೇನಸ್, ಪರೀಕ್ಷಾಂಗ ಡಾ|| ವಿನಯಚಂದ್ರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು