7:54 PM Sunday16 - March 2025
ಬ್ರೇಕಿಂಗ್ ನ್ಯೂಸ್
ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು: ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ… ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶ ಶಂಖನಾದದೊಂದಿಗೆ ಆರಂಭ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಭೇಟಿ: ವಿಶೇಷ… Govt Land Encroachment | ಬೆಂಗಳೂರು ನಗರದ ವಿವಿಧೆಡೆ 59.63 ಕೋಟಿ ಮೌಲ್ಯದ… PWD Minister | ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ:… Home Minister | ರಾಜ್ಯದ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ: ಗೃಹ… Forest Minister | ಬೇಲೂರು ಬಳಿ ಕಾಡಾನೆ ದಾಳಿಗೆ ಮಹಿಳೆ ಸಾವು; 3… ಗುಣಮಟ್ಟದ ಕಾನೂನು ಶಿಕ್ಷಣ ಅಗತ್ಯ: ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಪ್ರತಿಪಾದನೆ ತೀರ್ಥಹಳ್ಳಿ: ಮಸೀದಿ ಬಳಿ ನಿಲ್ಲಿಸಿದ್ದ ವಾಹನ ಅಪಹರಿಸಿದ ಖದೀಮರು; 30 ಲಕ್ಷ ರೂ.… ವಿಧಾನ ಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಅಪಘಾತ: ದೂರವಾಣಿ ಕರೆ ಮಾಡಿ…

ಇತ್ತೀಚಿನ ಸುದ್ದಿ

Mango | ವಿಶ್ವದಲ್ಲೇ ಅತಿ ಹೆಚ್ಚು ಮಾವು ಬೆಳೆಸುವ ಶ್ರೀನಿವಾಸಪುರಕ್ಕಿಲ್ಲ ಸುಸಜ್ಜಿತ ಎಪಿಎಂಸಿ ಮಾರ್ಕೆಟ್!: ಹೈಟೆಕ್ ಮಾರುಕಟ್ಟೆಗಾಗಿ ರೈತರ ಒತ್ತಾಯ

16/03/2025, 16:24

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಪ್ರಪಂಚದಲ್ಲೇ ಅತಿ ಹೆಚ್ಚು ಮಾವು ಉತ್ಪಾದಿಸುವ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆಯಲ್ಲಿ ಪ್ರಮುಖ ಕೃಷಿ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ಸುಮಾರು 70% ರೈತರು ಹಾಗೂ ವ್ಯಾಪಾರಸ್ಥರು ಮಾವಿನ ಬೆಳೆಗಾರಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಸುಮಾರು 56 ಸಾವಿರ ಹೆಕ್ಟರ್ ಪ್ರದೇಶದಲ್ಲಿ ವಿವಿಧ ವೆರಿಟಿಗಳ ಮಾವಿನ ತೋಟಗಳು ಹರಡಿಕೊಂಡಿದ್ದು, ಪ್ರತಿ ದಿನ ಲಕ್ಷಾಂತರ ಟನ್ ಮಾವು ದೇಶದ ವಿವಿಧ ರಾಜ್ಯಗಳಲ್ಲದೇ ವಿದೇಶಗಳಿಗೂ ರಫ್ತು ಆಗುತ್ತದೆ.


ಮಾವು ಸುಗ್ಗಿ ಮೇ ತಿಂಗಳಿನಿಂದ ಆರಂಭವಾಗುವಿದ್ದು, ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು, ಕೂಲಿ ಕಾರ್ಮಿಕರಿಗೆ
ಮತ್ತು ಮಾವು ಖರೀದಿ ಮಾಡೋ ಸಂಸ್ಥೆಗಳು ಶ್ರೀನಿವಾಸಪುರಕ್ಕೆ ಆಗಮಿಸುತ್ತವೆ. ಆದರೆ, ಸುಮಾರು 19 ಎಕರೆಯಲ್ಲಿ ನಿರ್ಮಾಣಗೊಂಡಿರುವ ಎಪಿಎಂಸಿ ಮಾರುಕಟ್ಟೆ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿದೆ. ಶುದ್ಧ ಕುಡಿಯುವ ನೀರಿನ ಕೊರತೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯಗಳ ಕೊರತೆ, ವಸತಿ ವ್ಯವಸ್ಥೆಯ ವಾಣಿಜ್ಯ ಸೇವೆಗಳ ಅಭಾವ ಇವೆಲ್ಲವೂ ಮಾರುಕಟ್ಟೆಯಲ್ಲಿನ ಪ್ರಮುಖ ಸಮಸ್ಯೆಗಳಾಗಿವೆ.
*ಮಾರುಕಟ್ಟೆಯ ಸಮಸ್ಯೆಗಳು ಮತ್ತು ವ್ಯಾಪಾರಸ್ಥರ ಸಂಕಷ್ಟ:*
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯು ಪ್ರತಿ ದಿನ ಲಕ್ಷಾಂತರ ಟನ್ , ಕೋಟ್ಯಾಂತರ ರೂ. ಮೌಲ್ಯದ ಮಾವು ವ್ಯಾಪಾರ ನಡೆಯುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಸುಮಾರು ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಆರ್‌ಎಂಸಿ ತೆರಿಗೆ (RMC Tax) ಸಂಗ್ರಹವಾಗುತ್ತದೆ, ಆದರೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲದಿರುವುದರಿಂದ ವ್ಯಾಪಾರಸ್ಥರು ಮಾವು ಬೆಳೆಗಾರರಿಗೆ ಮತ್ತು ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಬೇರೆ ರಾಜ್ಯಗಳಿಂದ ಬರುವ ವ್ಯಾಪಾರಸ್ಥರು
ಉತ್ತರ ಪ್ರದೇಶ, ಜಮ್ಮು ಕಾಶ್ಮೀರ್, ಹರಿಯಾಣ, ರಾಜಸ್ಥಾನ್, ಮಧ್ಯ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ವ್ಯಾಪಾರಸ್ಥರು ಶ್ರೀನಿವಾಸಪುರಕ್ಕೆ ಆಗಮಿಸುತ್ತಾರೆ. ಸುಮಾರು ಮೂರು ತಿಂಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಿ ವ್ಯಾಪಾರ ನಡೆಸುವ ಈ ವ್ಯಾಪಾರಸ್ಥರಿಗೆ ವಸತಿ, ಶೌಚಾಲಯ, ಶುದ್ಧ ಕುಡಿಯುವ ನೀರು, ಎಟಿಎಂ ವ್ಯವಸ್ಥೆ, ಎಪಿಎಂಸಿ ಮಾರ್ಕೆಟ್ ನಲ್ಲಿ ಬ್ಯಾಂಕ್ ಸೇವೆ, ಈ ಎಲ್ಲ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರ ಸಂಕಟ ಉಂಟುಮಾಡುತ್ತಿದೆ.
ರೈತರ ಒತ್ತಾಯ ಹೈಟೆಕ್ ಮಾರುಕಟ್ಟೆ ನಿರ್ಮಾಣ ಅಗತ್ಯ ಸ್ಥಳೀಯ ಮಾವು ಬೆಳೆಗಾರರು, ಕೃಷಿಕ ಸಂಘಗಳು ಮತ್ತು ಸಾರ್ವಜನಿಕರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ ಎಪಿಎಂಸಿ ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯಾಗಿ ಪರಿವರ್ತಿಸಬೇಕು. ಮಾರುಕಟ್ಟೆಯೊಳಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಮತ್ತು ರೈತರಿಗೆ ವಿಶ್ರಾಂತಿ ಕಟ್ಟಡ , ವಸತಿ ಗೃಹ ಮತ್ತು ಶೌಚಾಲಯಗಳು ನಿರ್ಮಿಸಬೇಕು. ಬೇರೆ ರಾಜ್ಯಗಳಿಂದ ಬರುವ ವ್ಯಾಪಾರಸ್ಥರು ಅನುಕೂಲವಾಗುವಂತೆ ಎಟಿಎಂ, ಎಪಿಎಂಸಿ ಮಾರ್ಕೆಟ್ ನಲ್ಲಿ ಬ್ಯಾಂಕ್ ಸೇವೆಗಳನ್ನು ಸುಗಮಗೊಳಿಸಬೇಕು. ಮೌಲ್ಯವರ್ಧಿತ ಸೇವೆಗಳನ್ನು ಕಲ್ಪಿಸಲು ಸರ್ಕಾರ ಜ್ಯೂಸ್ ಫ್ಯಾಕ್ಟರಿ, ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು.
*ಮಾವು ಮಾರುಕಟ್ಟೆಯ ಆರ್ಥಿಕ ಮಹತ್ವ:*
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ರಾಜ್ಯದ ಪ್ರಮುಖ ಕೃಷಿ ಆಧಾರಿತ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷ, ಇಲ್ಲಿನ ಮಾವು ದೇಶದ ಬೇರೆ ರಾಜ್ಯಗಳಾದ ಉತ್ತರ ಪ್ರದೇಶ, ಜಮ್ಮು ಕಾಶ್ಮೀರ್, ಹರಿಯಾಣ, ರಾಜಸ್ಥಾನ್, ಮಧ್ಯ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಷ್ಟೇ ಅಲ್ಲ, ಇಲ್ಲಿನ ಮಾವು ವಿದೇಶಗಳಾದ ದುಬೈ , ಸೌದಿ ಅರೇಬಿಯಾ, ಸಿಂಗಾಪುರ್ ಹಾಗೂ ಇತ್ಯಾದಿ ರಾಷ್ಟ್ರಗಳಿಗೂ ರಫ್ತು ಆಗುತ್ತದೆ. ಆದರೆ ಸಮರ್ಪಕ ಮೂಲಸೌಕರ್ಯಗಳ ಕೊರತೆಯಿಂದ ರೈತರು ತಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಮ್ಮ ಉತ್ಪನ್ನಕ್ಕೆ ಸೂಕ್ತ ಮೌಲ್ಯ ಸಿಗಬೇಕಾದರೆ, ಉತ್ತಮ ಮಾರ್ಕೆಟ್ ವ್ಯವಸ್ಥೆ, ಸಂಗ್ರಹ ಕೇಂದ್ರ, ಸರಿಯಾದ ಮೂಲಸೌಕರ್ಯ ಬೇಕು. ಹೀಗಾಗಿ, ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು,” ಎಂದು ಬಿ ಎ ಸೈಯದ್ ಫಾರೂಕ್ (ಜಿಲ್ಲಾ ಸಂಚಾಲಕರು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ) ಒತ್ತಾಯಿಸುತ್ತಾರೆ.

*ಸರ್ಕಾರದ ತ್ವರಿತ ಕ್ರಮದ ನಿರೀಕ್ಷೆ:*
ಶ್ರೀನಿವಾಸಪುರದ ಎಪಿಎಂಸಿ ಮಾರುಕಟ್ಟೆ ಕೃಷಿಕರು ಹಾಗೂ ವ್ಯಾಪಾರಸ್ಥರ ಆಧಾರ ಸ್ತಂಭವಾಗಿದೆ. ಹೀಗಾಗಿ, ಈ ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯಾಗಿ ಪರಿವರ್ತಿಸಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ, ರಾಜ್ಯದ ಕೃಷಿಕಾಂಗಕ್ಕೂ ಹಾಗೂ ವ್ಯಾಪಾರ ವಲಯಕ್ಕೂ ಒಳ್ಳೆಯ ಪ್ರಯೋಜನ ತರಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ.
“ಶ್ರೀನಿವಾಸಪುರ ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯಾಗಿ ನಿರ್ಮಿಸಿ, ಬೃಹತ್ ಮಾವು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿದರೆ, ದೇಶದಾದ್ಯಂತ ಇದು ಮಾದರಿ ಮಾರುಕಟ್ಟೆಯಾಗಿ ಗುರುತಿಸಿಕೊಳ್ಳಲಿದೆ,” ಎಂಬುದು ಸ್ಥಳೀಯರ ಒತ್ತಾಯ.
ರೈತರು, ವ್ಯಾಪಾರಸ್ಥರು, ಹಾಗೂ ಸಾರ್ವಜನಿಕರು ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಅಧಿಕಾರಿಗಳು ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಂಡರೆ, ಶ್ರೀನಿವಾಸಪುರ ಮಾತ್ರವಲ್ಲ, ಇಡೀ ರಾಜ್ಯದ ಕೃಷಿಕರಿಗೆ ಮತ್ತು ವ್ಯಾಪಾರಿಗಳಿಗೆ ಇದರಿಂದ ಬಹಳಷ್ಟು ಲಾಭವಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು