ಇತ್ತೀಚಿನ ಸುದ್ದಿ
ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ: ಉಭಯ ರಾಜ್ಯಗಳ ಬಸ್ ಸಂಚಾರ ರದ್ದು; ಪ್ರಯಾಣಿಕರ ಪರದಾಟ
23/02/2025, 23:04

ಬೆಳಗಾವಿ(reporterkarnataka.com): ಕೆಎಸ್ಸಾರ್ಟಿಸಿ ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಪರದಾಡುವಂತಾಗಿದೆ.
ಬೆಳಗಾವಿ ಭಾಗದಲ್ಲಿ ಕರವೇ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರಕ್ಕೆ ತೆರಳುವ ಎಲ್ಲ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ನಿಪ್ಪಾಣಿ,ಚಿಕ್ಕೋಡಿ,ಬೆಳಗಾವಿ ಮಾರ್ಗವಾಗಿ ತೆರಳುವ ಬಸ್ ಗಳ ಸಂಚಾರ ರದ್ದುಗೊಂಡಿದೆ.
ಈ ಮಾರ್ಗವಾಗಿ ಪ್ರತಿದಿನ ದುಮಾರು 100ಕ್ಕೂ ಅಧಿಕ ಬಸ್ ಗಳು ಸಂಚಾರಿಸುತ್ತಿದ್ದವು.ಮಹಾರಾಷ್ಟ್ರದಿಂದಲೂ ಯಾವುದೇ ಬಸ್ ಗಳು ಕರ್ನಾಟಕದ ಕಡೆ ಬರುತ್ತಿಲ್ಲ.ಬಸ್ ಸಂಚಾರವನ್ನು ಮಹಾ ಸರ್ಕಾರ ಬಂದ್ ಮಾಡಿದೆ ಎಂದು ತಿಳಿದು ಬಂದಿದೆ.