ಇತ್ತೀಚಿನ ಸುದ್ದಿ
ಜಾಗತಿಕ ಹೂಡಿಕೆದಾರರ ಸಮಾವೇಶ: 16 ದೇಶಗಳ ರಾಯಭಾರಿಗಳು ಭಾಗಿ; ಸಚಿವರ, ಉದ್ಯಮಿಗಳ ದಂಡು
11/02/2025, 21:19
![](https://reporterkarnataka.com/wp-content/uploads/2025/02/IMG-20250211-WA0047.jpg)
ಬೆಂಗಳೂರು(reporterkarnataka.com):ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳಲ್ಲದೆ, ಹಲವು ದೇಶಗಳ ರಾಯಭಾರಿಗಳು ಕೂಡ ಭಾಗವಹಿಸಿದ್ದಾರೆ.
ಇವರಲ್ಲಿ ಬಹ್ರೇನ್ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ.ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದ್ದಾರೆ.
*ಸಚಿವರ, ಉದ್ಯಮಿಗಳ ದಂಡು:* ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥಸಿಂಗ್, ಪ್ರಹ್ಲಾದ್ ಜೋಶಿ, ರಾಜ್ಯ ಸಂಪುಟದ ಸಚಿವರಾದ ಜಿ.ಪರಮೇಶ್ವರ, ಕೆ ಜೆ ಜಾರ್ಜ್, ಪ್ರಿಯಾಂಕ ಖರ್ಗೆ, ಡಾ. ಎಂ ಸಿ ಸುಧಾಕರ್ ಎಚ್ ಸಿ ಮಹದೇವಪ್ಪ, ಕೆ ಎಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಡಾ.ಶರಣ ಪ್ರಕಾಶ ಪಾಟೀಲ, ಶಿವಾನಂದ ಪಾಟೀಲ ಕೂಡ ಹಾಜರಿದ್ದರು.
ಗಣ್ಯ ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಕಿರಣ್ ಮಜುಂದಾರ್ ಷಾ, ಗೀತಾಂಜಲಿ ಕಿರ್ಲೋಸ್ಕರ್, ರಾಹುಲ್ ಬಜಾಜ್, ಶೇಷ ವರದರಾಜನ್, ಪ್ರಶಾಂತ್ ಪ್ರಕಾಶ್ ಮುಂತಾದವರು ಕೂಡ ಪಾಲ್ಗೊಂಡಿದ್ದರು. ಇವರನ್ನೆಲ್ಲ ಸಚಿವ ಎಂ. ಬಿ. ಪಾಟೀಲ್ ಅವರು ಶಾಲು ಹೊದಿಸಿ, ಕಾಣಿಕೆ ನೀಡಿ, ರಾಜ್ಯದ ಪರವಾಗಿ ಬರಮಾಡಿಕೊಂಡರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಸೇರಿದಂತೆ ಇತರರು ಇದ್ದರು.