ಇತ್ತೀಚಿನ ಸುದ್ದಿ
ಬೀರೂರು: ರಥ ಟರ್ನ್ ಆಗಲು ಜಾಗದ ವಿವಾದ ತಣ್ಣಗಾಗುತ್ತಿದ್ದಂತೆ ಹೊತ್ತಿ ಉರಿದ ಟ್ರ್ಯಾಕ್ಟರ್, ಹುಲ್ಲಿನ ಬವಣೆ
11/02/2025, 13:22
![](https://reporterkarnataka.com/wp-content/uploads/2025/02/IMG-20250211-WA0010.jpg)
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಡೂರು ತಾಲೂಕಿನ ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದ ದೇವಸ್ಥಾನದ ಜಾತ್ರ್ಯೋತ್ಸವ ರಥ ಟರ್ನ್ ಆಗಲು ಜಾಗದ ಉದ್ಭವಿಸಿದ ವಿವಾದ ತಣ್ಣಗಾಗುತ್ತಿದ್ದಂತೆ ಟ್ರ್ಯಾಕ್ಟರ್ ಹಾಗೂ ಹುಲ್ಲಿನ ಬವಣೆ ಹೊತ್ತಿ ಉರಿದ ಘಟನೆ ನಡೆದಿದೆ.
ವಿವಾದ ತಣ್ಣಗಾದ ಬಳಿಕವೂ ಟ್ರ್ಯಾಕ್ಟರ್ ಹಾಗೂ ಹುಲ್ಲಿನ ಬವಣೆ ಹೊತ್ತಿ ಉರಿಯಿತು.
ಕಿಡಿಗೇಡಿಗಳು ಬೆಂಕಿ ಹಾಕಿದ್ರೋ ಅಥವಾ ಅಚಾನಕ್ಕಾಗಿ ಬೆಂಕಿ ಹತ್ತಿದ್ಯೋ ಎನ್ನುವ ಮಾಹಿತಿ ಲಭ್ಯವಾಗಲಿಲ್ಲ. ಶೆಡ್ ನಲ್ಲಿ ನಿಂತಿದ್ದ ಟ್ರ್ಯಾಕ್ಟರ್, ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮುಂದಿನ ತಿಂಗಳು ದೊಡ್ಡಘಟ್ಟ ಗ್ರಾಮದಲ್ಲಿ ಜಾತ್ರೆ ಇತ್ತು. ರೋಡ್ ಸೈಡ್ ದೇವಸ್ಥಾನವಾದ ಕಾರಣ ರಥ ತಿರುಗಲು (ಟರ್ನ್) ಆಗಲು ಜಾಗದ ಸಮಸ್ಯೆ ಇತ್ತು.
ದೇವಸ್ಥಾನದ ಎದುರಿನ ಮನೆಯವರಿಗೆ ದೇವಸ್ಥಾನಕ್ಕೆ ಸ್ವಲ್ಪ ಜಾಗ ಬಿಡುವಂತೆ ಊರಿನ ಜನರು ಕೇಳಿದ್ದರು.
ಅವರು ದೇವಸ್ಥಾನಕ್ಕೆ ಶಾಶ್ವತವಾಗಿ ಜಾಗ ಬಿಡಲು ನಿರಾಕರಿಸಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ
ಗ್ರಾಮಸ್ಥರ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿತ್ತು.
ಬೀರೂರು ಠಾಣೆಯಲ್ಲಿ ಎರಡೂ ಕಡೆಯಿಂದ ದೂರು-ಪ್ರತಿದೂರು ದಾಖಲಾಗಿತ್ತು. ಸ್ಥಳಕ್ಕೆ ಬೀರೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.