ಇತ್ತೀಚಿನ ಸುದ್ದಿ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ ಇರಲಿ: ಹೆಣ್ಮಕ್ಕಳಿಗೆ ಎಸಿಪಿ ಗೀತಾ ಕುಲಕರ್ಣಿ ಕಿವಿಮಾತು
11/02/2025, 10:38
![](https://reporterkarnataka.com/wp-content/uploads/2025/02/DSC_6379-1_hn0g2sXx7J-1024x744.jpeg)
ಮಂಗಳೂರು(reporterkarnataka.com): ನಗರದ ಬೆಸೆಂಟ್ ಮಹಿಳಾ ಕಾಲೇಜಿನ ವತಿಯಿಂದ ಅಬ್ಬೆಟ್ಟು ಸರಕಾರಿ ಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರದಲ್ಲಿ ಸೈಬರ್
ಕ್ರೈಂ ಬಗ್ಗೆ ಸಿಸಿಆರ್ ಬಿ ಎಸಿಪಿ ಗೀತಾ ಕುಲಕರ್ಣಿ ಸಂಪನ್ಮೂಲ ವ್ಯಕ್ತಿ ಯಾಗಿ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ನೈಜ್ಯ ಪ್ರಕರಣ ಉದಾಹರಣೆ ಮೂಲಕ ಸೈಬರ್ ವಂಚನೆ ಅರಿವು ಮೂಡಿಸಿದರು.
ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಕಾಮೆಂಟ್ ಗಳಿಗಾಗಿ ಫೋಟೋ ಅಪ್ಲೋಡ್ ಮಾಡಿ ಕಿಡಿಗೇಡಿಗಳ ಮೋಸದ ಜಾಲಕ್ಕೆ ಬಿದ್ದು ಬಲಿಯಾಗದೆ, ಹಣದ ಬ್ಲಾಕ್ ಮೇಲ್ ಗಳಿಗೆ ಸೋತು ಹೋಗದೆ. ಅಪರಿಚಿತರ ವಿಡಿಯೋ ಕಾಲ್ ಗಳಿಗೆ ಸ್ಪಂದಿಸದೆ. ಅಲರ್ಟ್ ಆಗಿರುವಂತೆ, ಸಾಮಾಜಿಕ ಜಾಲತಾಣಗಳಿಂದ ದೂರ ಇರುವಂತೆ, ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರವಿ ಪ್ರಭ, ಶಾಲಾ ಶಿಕ್ಷಕರು ಹಾಗು ಸಹ ಯೋಜನಾಧಿಕಾರಿಗಳು. ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.