ಇತ್ತೀಚಿನ ಸುದ್ದಿ
ಚಿಕ್ಕಮಗಳೂರು : ಕಾಫಿ ಪಲ್ಪರ್ ನೀರಿನಿಂದ ಆನೆ ಹಳ್ಳದ ನೀರು ಕಲುಷಿತ; ಗ್ರಾಮಸ್ಥರ ಆಕ್ರೋಶ
27/01/2025, 13:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿ ಪಲ್ಪರ್ ನೀರಿನಿಂದ ಹಳ್ಳದ ನೀರು ಕಲುಷಿತಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಆನೆ ಹಳ್ಳದಲ್ಲಿ ನಡೆದಿದೆ.
ಹಳ್ಳದ ನೀರನ್ನು ಹಲವು ಗ್ರಾಮಸ್ಥರು ಬಳಕೆ ಮಾಡುತ್ತಿದ್ದಾರೆ. ಇದೇ
ಆನೆ ಹಳ್ಳದ ನೀರು ಹರಿದು ಭದ್ರಾ ನದಿಗೆ ಸೇರುತ್ತದೆ. ಅದರೆ ಪಲ್ಪರ್ ನೀರು ಹಳ್ಳಕ್ಕೆ ಬಿಡ್ತಿರೋ ಬೆಳೆಗಾರರ ಕ್ರಮಕ್ಕೆ ಅಗ್ರಹ ವ್ಯಕ್ತವಾಗಿದೆ.
ಹಳ್ಳದ ನೀರು ಹಾಗೂ ಭದ್ರಾ ನದಿಯ ನೀರು ಕಲುಷಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಪಲ್ಪರ್ ನೀರು ಹಳ್ಳಕ್ಕೆ ಬಿಟ್ಟವರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.