11:51 PM Thursday23 - January 2025
ಬ್ರೇಕಿಂಗ್ ನ್ಯೂಸ್
7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ…

ಇತ್ತೀಚಿನ ಸುದ್ದಿ

7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ ಸಚಿವರೇ ಏನು ಮಾಡುತ್ತಿದ್ದೀರಿ?

23/01/2025, 23:48

ಅಮರೇಶ ಗೋಸ್ಲಿ ಲಿಂಗಸಗೂರು ರಾಯಚೂರು

info.reporterkarnataka@gmail.com

ವಿದ್ಯಾರ್ಥಿಗಳ ಉಪಯೋಗಕ್ಕೆ ಎಂದು ನಿರ್ಮಿಸಲಾದ ಶಾಲಾ ಕೊಠಡಿಗಳು 7- 8 ವರ್ಷ ಕಳೆದರೂ ಹಸ್ತಾಂತವಾಗದೆ ಗಿಡಗಂಟಿ ಬೆಳೆದು ಉಪಯೋಗ ಶೂನ್ಯವಾದ ಪ್ರಸಂಗ ಲಿಂಗಸಗೂರು ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ನಡೆದಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತ ಗಮನಹರಿಸುವ ಅಗತ್ಯವಿದೆ.
ಮಿಂಚೇರಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ಅಗತ್ಯಕ್ಕಾಗಿ 2017-18ನೇ ಸಾಲಿನ ಶಿಕ್ಷಣ ಇಲಾಖೆ ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿತ್ತು. ಆದರೆ, ಅವುಗಳನ್ನು ಶಾಲಾ ಸುಪರ್ದಿಗೆ ತೆಗೆದುಕೊಳ್ಳದೆ ನಿರುಪಯುಕ್ತವಾಗಿದೆ. ಹಲವಾರು ಸರಕಾರಿ ಶಾಲೆಗಳಿಗೆ ಕೊಠಡಿಗಳಿಲ್ಲವೆಂದು ವಿದ್ಯಾರ್ಥಿಗಳು ಆಗಾಗ್ಗೆ ದೂರುವುದುಂಟು. ಆದರೆ ಇಲ್ಲಿ ನೂತನ ಶಾಲಾ ಕೊಠಡಿಗಳಿದ್ದರೂ ಅವುಗಳನ್ನು ಶಾಲಾ ಸುಪರ್ದಿಗೆ ತೆಗೆದುಕೊಳ್ಳದೆ ನಿರುಪಯುಕ್ತವಾಗುತ್ತಿರುವುದು ದುರಂತವಾಗಿದೆ.


ಸುಮಾರು ಏಳೆಂಟು ವರ್ಷ ಗತಿಸಿದರು ಇದುವರೆಗೂ ಶಾಲಾ ವ್ಯಾಪ್ತಿಗೆ ತೆಗೆದುಕೊಳ್ಳದೆ ಇರುವುದರಿಂದ ಈ ಕೊಠಡಿಯ ಮುಂದೆ ಗಿಡಗಂಟಿಗಳು ಮುಳ್ಳುಕಂಟಿಗಳು ಬೆಳೆದು ಶಾಲೆ ಇರುವುದು ಕಾಡಿನಲ್ಲಿಯೋ ನಾಡಿನಲ್ಲಿಯೋ ಎನ್ನುವಂತಾಗಿದೆ. ಆದರೆ, ಬಿಇಒ ಅವರಲ್ಲಿ ಈ ಕುರಿತು ಕೇಳಿದರೆ ಮಾಹಿತಿಯೆ ಇಲ್ಲವೆನ್ನುತ್ತಾರೆ.
*ಬಿಸಿಯೂಟ ಕೊಠಡಿ ಶಿಥಿಲ:* ಇಲ್ಲಿರುವ ಬಿಸಿಯೂಟದ ಕೊಠಡಿಯು ಶಿಥಿಲವಾಗಿದ್ದು ಬೇರೊಂದು ಕೋಣೆಯಲ್ಲಿ
ಊಟ ಮಾಡಲಾಗುತ್ತಿದೆ. ಶಾಲಾ ಪಕ್ಕದಲ್ಲಿರುವ ನೀರು ಸಂಗ್ರಹ ತೊಟ್ಟಿಗೆ ನೀರು ಬಾರದೆ ನಿರುಪಯುಕ್ತವಾಗಿದೆ. ಶಾಲೆಯ ಕೆಲವು ಕೊಠಡಿಗಳ ಕಿಟಕಿಗಳು ಕಿತ್ತು ಹೋಗಿವೆ.
*ಎಚ್ ಎಂ ಗೆ ಚಾರ್ಜ ನೀಡಿಲ್ಲ:* ಮತ್ತೊಂದು ಸಂಗತಿ ಎಂದರೆ ಈ ಶಾಲೆಯ ಮುಖ್ಯ ಗುರುಗಳಿಗೆ ಇದುವರೆಗೂ ಚಾರ್ಜ ನೀಡಿಲ್ಲವಂತೆ. ಕಳೆದ ಮೇ ತಿಂಗಳಿನಲ್ಲಿ ಈ ಶಾಲೆಯ ಮುಖ್ಯಗುರುಗಳು ನಿಧನ ಹೊಂದಿದ್ದರು. ನಂತರ ಬಂದ ಮುಖ್ಯ ಗುರುಗಳಿಗೆ ಇದುವರೆಗೂ ಶಾಲೆಯ ಚಾರ್ಜ ನೀಡಿಲ್ಲ. ಅಲ್ಲದೆ ಇಲಾಖೆಯಿಂದ ಅಧಿಕ ಕೆಲಸಗಳ ಒತ್ತಡ ಇರುವುದರಿಂದ ಸರಿಯಾಗಿ ಶಾಲೆಗೆ ಹಾಜರಾಗುವುದು ಅಸಾಧ್ಯವಾಗುತ್ತಿದೆ ಎನ್ನುವ ಮಾತುಗಳನ್ನು ಈಗಿನ ಮುಖ್ಯಗುರುಗಳು ಹೇಳುತ್ತಾರೆ. ಯಾಕೆಂದರೆ ಇವರು ಶಾಲೆಗೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳಿಗೆ ಅವರು ಕೊಡುವ ಉತ್ತರ ಇದಾಗಿದೆ. ಹಾಗೆಯೆ ಇವರು ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್ ತೆಗೆಯುದಿಲ್ಲವಂತೆ. ಕಾಲ್ ಮಾಡಿದವರ ಹೆಸರು ತಮ್ಮಲ್ಲಿ ಸೇವ್ ಆಗಿದ್ದರೆ ಮಾತ್ರ ತೆಗೆಯುತ್ತೇನೆ ಎನ್ನುತ್ತಾರೆ. ಅದಕ್ಕಾಗಿ ಸಹಶಿಕ್ಷಕರ ಫೋನ್ ಮೂಲಕ ಮಾತನಾಡಿ ಮಾಹಿತಿ ಪಡೆಯಲಾಯಿತು.
*ಕಳುವಾಗುತ್ತಿರುವ ಶಾಲೆ:* ಈ ಶಾಲೆಯಲ್ಲಿ ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದ್ದು ಅದನ್ನು ತಪ್ಪಿಸುವುದೇ ಒಂದು ಸಾಹಸವಾಗಿದೆ. ಆಗಾಗ್ಗೆ ಸ್ಟೇಷನ್ ಗೆ ಮಾಹಿತಿಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಇದುವರೆಗೂ ಶಾಲೆಯ ಮುಂದೆ ಒಂದು ಧ್ವಜದ ಕಂಬವನ್ನು ಕಟ್ಟಲಾಗಿಲ್ಲ. ಶಾಲೆಯು ಹಲವಾರು ಕುಂದುಕೊರತೆಗಳ ನಡುವೆ ನಡೆಯುತ್ತಿದ್ದು ಇದರ ಮೇಲಾಧಿಕಾರಿಗಳು ಇತ್ತ ಗಮನಹರಿಸುವುದಾದರು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮಿಂಚೇರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗಳು ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ. ಮುಖ್ಯಗುರುಗಳು ಶಾಲೆಗೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳಿಗೂ ಗಮನಹರಿಸಲಾಗುವುದು

ಹುಂಬಣ್ಣ ರಾಠೋಡ ಬಿಇಓ

ನನಗೆ ಇದುವರೆಗೂ ಮುಖ್ಯಗುರುಗಳ ಚಾರ್ಜ ಕೊಟ್ಟಿರುವುದಿಲ್ಲ. ಶಾಲಾ ಕೊಠಡಿಗಳ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲ. ಸರಕಾರದ ಕೆಲಸದ ಒತ್ತಡದಲ್ಲಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುವುದು ತೊಂದರೆಯಾಗಿದೆ.

ಶಿವಯ್ಯ ಹಿರೇಮಠ, ಮುಖ್ಯಗುರುಗಳು ಮಿಂಚೇರಿ

ಇತ್ತೀಚಿನ ಸುದ್ದಿ

ಜಾಹೀರಾತು