9:53 PM Friday10 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ…

ಇತ್ತೀಚಿನ ಸುದ್ದಿ

ಬಾಯಿ ಮಾತಲ್ಲಿ ಕನ್ನಡ ಏನ್ನಬೇಡಿ, ಹೃದಯದಿಂದ ಕನ್ನಡ ಎಂದು ಮಾತನಾಡಿ: ನಿರ್ದೇಶಕ ಓಂ ಸಾಯಿಪ್ರಕಾಶ್

10/01/2025, 21:37

ಬೆಂಗಳೂರು(reporterkarnataka.com): ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಾಗೂ
ನೂತನ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರಾದ ಸಿ.ಮಂಜಪ್ಪ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಚಿತ್ರ ನಿರ್ದೇಶಕರಾದ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ, ನಟಿ ಸಂಜನಾ ಗಲ್ರಾನಿ, ಚಿತ್ರ ಸಂಗೀತ ನಿರ್ದಶಕ ರಾಜೇಶ್ ರಾಮನಾಥ್, ನಟಿ ಮೋಕ್ಷಾ ಕುಶಾಲ್ ಅವರು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ.
ಎ.ಸೋಮಶೇಖರ್ ಅವರು ಉದ್ಘಾಟನೆ ನೇರವೆರಿಸಿದರು.
ನಿರ್ದೇಶಕ ಓಂಪ್ರಕಾಶ್ ಅವರು ಮಾತನಾಡಿ ಚಲನಚಿತ್ರ ರಂಗಕ್ಕೆ ಸಾಯಿಬಾಬರ ಆಶೀರ್ವಾದ ಇರಲಿ, ಪ್ರೀತಿ ಎಲ್ಲಿ ಇರುತ್ತದೆ ಅಲ್ಲಿ ನಾವು ಇರುತ್ತೇವೆ. ಆಂಧ್ರ ಹುಟ್ಟಿ ನಂತರ ಕರ್ನಾಟಕದಲ್ಲಿ ಬಂದು ನೆಲಸಿದೆ. ಕನ್ನಡಿಗರ ಪ್ರೀತಿ ನಾನು ಮನಸೋತೆ.
ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ 24 ವಿವಿಧ ಕೆಲಸಗಳಲ್ಲಿ ಚಿತ್ರನಿರ್ಮಾಣ ಕಾರ್ಯದಲ್ಲಿ ತೊಡಗಿರುತ್ತಾರೆ, ಅವರಿಗೆ ಅನ್ನ ಹಾಕುವವರು ನಿರ್ಮಾಪಕರು.


ನಿರ್ಮಾಪಕರು ಅನ್ನದಾತರು ಎಂದು ಡಾ. ರಾಜ್ ಕುಮಾರ್ ಅವರು ಹೇಳಿದ್ದರು. ಚಿತ್ರರಂಗದಲ್ಲಿರುವ ನಾವೆಲ್ಲರು ಒಂದೇ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಅಚರಣೆ ಮಾಡುವುದಿಲ್ಲ. ಅದರೆ ಕರ್ನಾಟಕದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಅಚರಣೆ ಮಾಡಲಾಗುತ್ತದೆ.
ನನ್ನ ಕೊನೆ ಉಸಿರು ಇರುವರಗೆ ನಾನು ತಾಯಿ ಭುವನೇಶ್ವರಿಯ ಸೇವೆ ಮಾಡುತ್ತೇನೆ, ಬಾಯಿ ಮಾತಲ್ಲಿ ಕನ್ನಡ ಏನ್ನಬೇಡಿ, ಹೃದಯದಿಂದ ಕನ್ನಡದಲ್ಲಿ ಮಾತಾಡಿ ಎಂದು ಹೇಳಿದರು.
ಮುಖ್ಯ ಅಭಿಯಂತರ ಸಿ.ಮಂಜಪ್ಪ ಅವರು ಮಾತನಾಡಿ, ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು, ನಂತರ ಸರ್ಕಾರಿ ಸೇವೆ ಸೇರಿದೆ. ನಮ್ಮ ಇಲಾಖೆಯಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ವ್ಯವಹಾರ ನಡೆಯುತ್ತಿದೆ. ವಿಧಾನಸೌಧ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಾಧುಕೋಕಿಲ ಅವರು ಮಾತನಾಡಿ, ಕನ್ನಡ ಭಾಷೆ ಉಳಿಯಲು ಕನ್ನಡ ಚಲನಚಿತ್ರಗಳನ್ನು ನೋಡಿ, ಅಂತಾರಾಷ್ಟ್ರೀಯ ಚಲನಚಿತೋತ್ಸವ ಬೆಂಗಳೂರಿನಲ್ಲಿ ನಡೆಯಲಿದೆ. 250ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಡಾ. ಎ.ಸೋಮಶೇಖರ್ ರವರು ಮಾತನಾಡಿ ಕರ್ನಾಟಕ ರಾಜ್ಯ ಲೋಕಪಯೋಗಿ ಇಲಾಖೆಗೆ 169ಗಳ ಇತಿಹಾಸವಿದೆ.
ರಾಜ್ಯದ ಉತ್ತಮ ರಸ್ತೆ ಸಂಪರ್ಕ ಮತ್ತು ಅಭಿವೃದ್ದಿಗಳನ್ನು ಮಾಡುತ್ತಿರುವ ನಮ್ಮ ಇಲಾಖೆ ಅಧಕಾರಿ ಮತ್ತು ನೌಕರರಿಗೆ ಉಪಯೋಗಕ್ಕೆ ಸಮುದಾಯ ಭವನವಿಲ್ಲ.
ಸಚಿವರಾದ ಜಾರಕಿಹೊಳಿ ಅವರಿಗೆ ಮನವಿ ನೀಡಲಾಗಿದೆ 250 ಅಡಿ ಅಗಲ ಮತ್ತು ಉದ್ದವಿರುವ ಸಂಘಕ್ಕೆ ನೀಡಿದರೆ ಸಮುದಾಯ ಭವನ ಮಾಡಲಾಗುವುದು ಎಂದು ಹೇಳಿದರು.
ಕಡಬಗೆರೆ ಮುನಿರಾಜು ತಂಡದವರಿಂದ ಸುಗಮ ಸಂಗೀತ ಮತ್ತು ಗಣ್ಯ ಮಹನೀಯರುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ವಿ.ವಿ.ಶಿವರುದ್ರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಪ್ರಿಯದರ್ಶಿನಿ ಅವರಿಗೆ ರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಧಾನ ಅಭಿಯಂತರಾದ ಪ್ರದೀಪ್ ಮಿತ್ರ ಮಂಜುನಾಥ್, ಮುಖ್ಯ ಯೋಜನಾಧಿಕಾರಿಗಳಾದ ಶಂಕರಗೌಡ ಎಫ್. ಪಾಟೀಲ್, ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್, ಯೋಜನಾ ನಿರ್ದೇಶಕರಾದ ಪುರುಷೋತ್ತಮ್ ದಾಸ್ ಹೆಗ್ಗಡೆ, ಮುಖ್ಯ ಯೋಜನಾಧಿಕಾರಿಗಳಾದ ಜಗನ್ನಾಥ್ ಹಲಿಂಗೆ, ಮುಖ್ಯ ಅಭಿಯಂತರುಗಳಾದ ಪ್ರಕಾಶ್ ಶ್ರೀಹರಿ, ಸಂಜೀವ್ ರೆಡ್ಡಿ ವಿ.ಮರಡ್ಡಿ, ಹೆಚ್.ಸಿ.ರಮೇಂದ್ರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು