ಇತ್ತೀಚಿನ ಸುದ್ದಿ
ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: 12ರಲ್ಲಿ 12 ಸ್ಥಾನಗಳಲ್ಲಿಯೂ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು
06/01/2025, 20:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಗೆದ್ದ ಅಭ್ಯರ್ಥಿಗಳನ್ನ ಕಾರ್ಯಕರ್ತರು ಬಣಕಲ್ ಪಟ್ಟಣ ಹಾಗೂ ಕೊಟ್ಟಿಗೆಹಾರ ದಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ನಂತರ ಕಾರ್ಯಕರ್ತರನ್ನು ಹಾಗೂ ರೈತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರಾದ ಬಿ.ಎಂ. ಭರತ್, ಸಹಕಾರ ಸಂಘದ ಅಭಿವೃದ್ಧಿ ನೋಡಿ ರೈತರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಈ ಗೆಲುವು ಕಾರ್ಯಕರ್ತರ ಹಾಗೂ ರೈತರ ಗೆಲುವಾಗಿದೆ ಎಂದರು.
ದೀಪಕ್ ದೊಡ್ಡಯ್ಯ ಮಾತನಾಡಿ, ಎಲ್ಲಾ ರಂಗಗಳಲ್ಲೂ ಬಿಜೆಪಿ ಪಕ್ಷವನ್ನು ಸೋಲಿಸಲು ಬಿಜೆಪಿ ಪಕ್ಷದಿಂದ ಮಾತ್ರವೇ ಸಾಧ್ಯವೇ ಹೊರತು ಬೇರೆ ಪಕ್ಷಗಳಿಂದ ಸೋಲಿಸಲು ಅಸಾಧ್ಯ ಎಂದರು.
ಮೆರವಣಿಗೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಹಾಜರಿದ್ದರು.
*ಗೆದ್ದ ಅಭ್ಯರ್ಥಿಗಳ ಮತಗಳು:*
ಭರತ್ ಬಿ. ಎಂ.ಬಾಳೂರು1043, ಕಲ್ಲೇಶ್ ಬಾಳೂರು 957, ವಿಕ್ರಂ ಗೌಡ 949,ಅಭಿಲಾಶ್ 914, ಗಜೇಂದ್ರ ಗೌಡ 890, ನಾರಾಯಣ ಗೌಡ 806, ರವೀಂದ್ರ.805, ಲಕ್ಷ್ಮಿ801, ರಂಗನಾಥ್ 798, ಮಮತಾ 770,ಶರತ್ 736,(ಸಾಲಗಾರ ಅಲ್ಲದ ಕ್ಷೇತ್ರ ಯತೀಶ್ ಗೌಡ:100)ಮತಗಳನ್ನು ಪಡೆದು ಜಯಶೀಲರಾದ ಅಭ್ಯರ್ಥಿಗಳು.