9:22 PM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ವಿಶ್ರಾಂತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರ ಅವರ ‘ಸದ್ಧರ್ಮಗೀತ’ ನಾಲ್ಕು ಕಾವ್ಯ ಕಥನಗಳ ಗುಚ್ಛ ಕೃತಿ ಲೋಕಾರ್ಪಣೆ

03/01/2025, 23:50

ಬೆಂಗಳೂರು( reporterkarnataka.com):ಹಿರಿಯ ಐಎಎಸ್ ಅಧಿಕಾರಿ ರಾಜ್ಯ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರ ಅವರ ನೂತನ ಕೃತಿ ‘ಸದ್ಧರ್ಮಗೀತ ‘ ನಾಲ್ಕು ಕಾವ್ಯಕಥನಗಳ ಗುಚ್ಛ ಲೋಕಾರ್ಪಣೆ ಸಮಾರಂಭವನ್ನು ನಗರದ ಇನ್ಫೆಂಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಆಯೋಜಿಸಲಾಗಿತ್ತು.
ಸೆಂಟರ್ ಫಾರ್ ಸಸ್ಟೈನೆಬಲ್ ಡೆವಲಪ್ಮೆಂಟ್ ಮತ್ತು ಐಎಎಸ್ ಅಧಿಕಾರಿಗಳ ಸಂಘ ಸಹಯೋಗದಲ್ಲಿ ಏರ್ಪಡಿಸಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಶಿವರಾಜ ವಿ. ಪಾಟೀಲ್ ವಹಿಸಿ ಕೃ ತಿ ಲೋಕಾರ್ಪಣೆ ಮಾಡಿ ಮಾತನಾಡುತ್ತ ಕಾವ್ಯಕ್ಕೆ ಚುಂಬಕ ಶಕ್ತಿ ಉಂಟು. ಅದು ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ. ಭಾವಯತ್ರಿ ಪ್ರತಿಭೆವುಳ್ಳವರು ಕೂಡ ಕಾವ್ಯ ರಚನೆಗೆ ಕೈ ಹಾಕಿದವರುಂಟು, ಅಂತಹವರು ಕಾರಯಿತ್ರಿಯ ಕೈಯನ್ನು ಹಿಡಿಯುತ್ತಾರೆ. ಡಾ.ಎ ರವೀಂದ್ರರವರು ಈ ಸಾಲಿಗೆ ಸೇರಿದವರು . ಲೌಕಿಕ ಜ್ಞಾನ ಭಾಷೆ ಇಂಗ್ಲಿಷ್, ಮಾತೃಭಾಷೆ ತೆಲುಗು, ಹೃದಯದ ಭಾಷೆಯಾಗಿ ಕನ್ನಡದಲ್ಲಿ ಕಾವ್ಯ ಸಂವೇದನೆ ಇರುವ ವೈಚಾರಿಕ ಕಾವ್ಯ ‘ಸದ್ಧರ್ಮ ಗೀತ’ ನಮ್ಮ ಮುಂದೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶರವರು ಕೃತಿ ಕುರಿತು ಇದು ಭಗವದ್ಗೀತೆಯಲ್ಲ ಬದಲಾಗಿ ಜೀವನದ ಆಕೃತಿಯ ಧರ್ಮ ವಿಚಾರಕ್ಕೆ ಸಂಬಂಧಿಸಿದ್ದು. ಇಲ್ಲಿ ಬುದ್ಧ ಧರ್ಮ, ಬಸವ ಧರ್ಮ ಮತ್ತು ಅಂಬೇಡ್ಕರ್ ಧರ್ಮ ಒಂದಲ್ಲೊಂದು ತಳಕು ಹಾಕಿಕೊಂಡಿದೆ. ಸರಳವೂ ಅರ್ಥ ಗುಂಫನವು ಆದ ಗಪದ್ಯವೆಂಬ ಕಥನದಲ್ಲಿ ತಮ್ಮ ಕಾವ್ಯ ರಚನೆಯನ್ನು ಹೆಣೆದಿದ್ದಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು