12:35 PM Tuesday7 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ

ಇತ್ತೀಚಿನ ಸುದ್ದಿ

ಭೂ ಸಂತ್ರಸ್ತರ ಪರ ಜ.9ರಂದು ಸಂಡೂರು ಶಾಸಕರ ಮನೆ ಮುಂದೆ ಬೃಹತ್ ಹೋರಾಟ

03/01/2025, 20:37

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಜಿಲ್ಲೆಯ ಸಂಡೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ತಾಲ್ಲೂಕಿನ ಕುಡುತಿನಿ ಗ್ರಾಮದ ಹೊರ ವಲಯದಲ್ಲಿ 748
ದಿನಗಳಿಂದ ನಿರಂತವಾಗಿ ಅನಿರ್ಧಿಷ್ಠಾವಧಿ
ಧರಣಿ ಸತ್ಯಾಗ್ರಹವನ್ನು ನಡೆಸುತ್ತಿರುವ ಕುಡುತಿನಿ
ಮತ್ತು ಮತ್ತಿತರೆ ಗ್ರಾಮಗಳ ರೈತರ ಸಮಸ್ಯೆಗಳನ್ನು
ಜ.8ರೊಳಗೆ ರಾಜ್ಯ ಸರ್ಕಾರ ಪರಿಹರಿಸದೇ ಇದ್ದಲ್ಲಿ ಜ.9ರಂದು ಸಂಡೂರು ಶಾಸಕರ ಮನೆ ಮುಂದೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು
ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಹೋರಾಟಗಾರರಾದ ಯು. ಬಸವರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ರೈತ ಪರ ಚಿಂತಕ,ಯು. ಬಸವರಾಜ್ ಅವರು
ಕರ್ನಾಟಕ ಪ್ರಾಂತ ರೈತ ಸಂಘ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ , ಭೂ ಸಂತಸ್ತ್ರ ಹೋರಾಟ ಸಮಿತಿ,
ಕನ್ನಡ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ
ಕುಡಿತಿನಿ ಭಾಗದಲ್ಲಿ ಆರ್ಷಲ್ ಮಿತ್ತಲ್ ಫೇರೋಸ್ ಲಿಮಿಟೆಡ್, ಉತ್ತಮ್ ಗಾಲ್ವಾ.ಏನ್‍ಎಂಡಿಸಿ ಗಾಗಿ ಕೆಐಡಿಬಿ ಮುಖಾಂತರ
ರಾಜ್ಯ ಸರ್ಕಾರ 12500 ಎಕರೆ ಭೂಮಿಯನ್ನು
14 ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದು,
ಭೂಮಿಯನ್ನು ಕಳೆದುಕೊಂಡ ರೈತರಿಗೆ ನ್ಯಾಯವಾದ ಭೂ ಬೆಲೆಗಾಗಿ
ಕಾರ್ಖಾನೆಗಳನ್ನು
ಕೂಡಲೇ ಪ್ರಾರಂಭ ಮಾಡಬೇಕು, ಅಥವಾ ನಮ್ಮ ಭೂಮಿಯನ್ನು ನಮ್ಮಗೆ ವಾಪಸ್ಸು ಕೊಡಬೇಕೆಂದು ಕಳೆದ 748 ದಿನಗಳಿಂದಲೂ
ಯಶಸ್ವಿ ಹೋರಾಟವನ್ನು ಮಾಡಲಾಗುತ್ತಿದೆ ಎಂದು ಹೇಳಿದ ಬಸವರಾಜ್ ಅವರು ಭೂಮಿಯನ್ನು ಕಳೆದುಕೊಂಡ ರೈತರ
ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಮನವಿ ಮಾಡಿಕೊಂಡಾಗ ಸಿಎಂ ಹಾಗೂ ಸಂಡೂರು
ಶಾಸಕರು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು. ಅಲ್ಲದೆ ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ
ಆಶ್ವಾಸನೆಯನ್ನು ನೀಡಿದ್ದರು. ಆದರೆ ವಿಧಾನ
ಸಭೆಯ ಬೆಳಗಾವಿ ಅಧಿವೇಶನದಲ್ಲಿ ಜಂಟಿ
ಸಭೆ ಮಾಡಿ ರೈತರ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದ್ದರು.
ಆದರೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಲು ಸಾಧ್ಯ ವಾಗದೆ ಜನವರಿ ಮೊದಲನೇಯ ವಾರದಲ್ಲಿ ಜಂಟಿ ಸಭೆ ಮಾಡಲು ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸಲು ಜನವರಿ 8ರ ಒಳಗೆ ಸಭೆಯನ್ನು ಕರೆಯದಿದ್ದರೆ ಕಾಲಹರಣ ಮಾಡಲು ಮುಂದಾದರೆ ಜನವರಿ 9ರಂದು ಸಂಡೂರು ಶಾಸಕರ ಮನೆ ಮುಂದೆ ಹೋರಾಟ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಯು.ಬಸವರಾಜ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಜೆ ಸತ್ಯಬಾಬು, ಎಂ
ತಿಪ್ಪೇಸ್ವಾಮಿ, ಶೇಖರ್, ಶಿವರಾಮ ರೆಡ್ಡಿ, ಅಂಜಿನಪ್ಪ ಕುಡಿತೀನಿ, ರಮೇಶ್ ಜಂಗ್ಲಿ ಸಾಬ್ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು