7:27 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ನವ ಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಕ್ರೂಸ್ ಹಡಗು ಆಗಮನ: ಸಾಂಪ್ರದಾಯಿಕ ಸ್ವಾಗತ

27/12/2024, 21:48

ಮಂಗಳೂರು(reporterkarnataka.com):ಸುಮಾರು 650 ಮಂದಿ ಪ್ರವಾಸಿಗರನ್ನು ಹೊತ್ತಸೆವೆನ್ ಸೀಸ್ ವಾಯೇಜರ್ ಕ್ರೂಸ್ ಹಡಗು ಶುಕ್ರವಾರ ನವ ಮಂಗಳೂರು ಬಂದರಿಗೆ ಆಗಮಿಸಿತು.
ಪ್ರಸಕ್ತ ಋತುವಿನ ಎರಡನೇ ಕ್ರೂಸ್ ಹಡಗು ಇದಾಗಿದೆ. ನವ ಮಂಗಳೂರು ಬಂದರು ಪ್ರಾಧಿಕಾರವು ಐಷಾರಾಮಿ ಬಹಮಿಯನ್ ಕ್ರೂಸ್ ಹಡಗು ಸೆವೆನ್ ಸೀಸ್ ವಾಯೇಜರ್ ಅನ್ನು ಹೆಮ್ಮೆಯಿಂದ ಸ್ವಾಗತಿಸಿತು.


ಕರಾವಳಿಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಭಾರತೀಯ ಆತಿಥ್ಯದೊಂದಿಗೆ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಪ್ರವಾಸಿಗರಿಗೆ ಕಾರ್ಕಳ ಗೋಮಟೇಶ್ವರ ಬಸದಿ, ಸಾವಿರ ಕಂಬದ ಬಸದಿ,ಸೋನ್ಸ್ ಫಾರ್ಮ್, ಕಲಭಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಮತ್ತು ಸ್ಥಳೀಯ ಮಾರುಕಟ್ಟೆಗೆ
ಭೇಟಿ ನೀಡಲು ವ್ಯವಸ್ಥೆ ಮಾಡಲಾಯಿತು.
ಜಾಗತಿಕ ಕ್ರೂಸ್ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದ ಹೆಸರಾಂತ ನಾರ್ವೇಜಿಯನ್ ಕ್ರೂಸ್ ಲೈನ್‌ನ ಭಾಗವಾಗಿರುವ ನೌಕೆಯು ನವ ಮಂಗಳೂರಿ ಬಂದರಿಗೆ ಬೆಳಗ್ಗೆ 6:30ಕ್ಕೆ ಆಗಮಿಸಿ ಸಂಜೆ 5:30 ಕ್ಕೆ ನಿರ್ಗಮಿಸಿತು. 650 ಪ್ರಯಾಣಿಕರು ಮತ್ತು 450 ಸಿಬ್ಬಂದಿ ಹಡಗಿನಲ್ಲಿದ್ದರು. ಸೆವೆನ್ ಸೀಸ್ ವಾಯೇಜರ್ ಐಶ್ವರ್ಯ ಮತ್ತು ವಿಶ್ವ ದರ್ಜೆಯ ಪ್ರಯಾಣವನ್ನು ಒಳಗೊಂಡಿದೆ.
206.5 ಮೀಟರ್ ಉದ್ದದ ಕ್ರೂಸ್ ಹಡಗು, ಫುಜೈರಾದಿಂದ ಕೊಲಂಬೊಗೆ ಮುಂಬೈ, ಗೋವಾ, ನವ ಮಂಗಳೂರು ಮತ್ತು ಕೊಚ್ಚಿನ್ ಮೂಲಕ ತನ್ನ ಪ್ರಯಾಣದ ಭಾಗವಾಗಿ ಅರಬ್ಬಿ ಸಮುದ್ರವನ್ನು ನ್ಯಾವಿಗೇಟ್ ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು