7:00 PM Thursday26 - December 2024
ಬ್ರೇಕಿಂಗ್ ನ್ಯೂಸ್
ಕೂಡ್ಲಿಗಿ ತಲುಪಿದ ಸನ್ನತಿ ಪಂಚಶೀಲ ಬೌದ್ಧ ಪಾದಯಾತ್ರಿಕರು: ಸನ್ನತಿಯಿಂದ ಬೆಂಗಳೂರಿಗೆ 27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇಗುಲದಲ್ಲಿ ಈ ಬಾರಿ ಬಿಕಾಂ ಜಾತ್ರೆ!: ಹಾಗಂದ್ರೆ ಏನು… ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸಿನ ವ್ಯಕ್ತಿತ್ವ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ… ಶಸ್ತ್ರ ಚಿಕಿತ್ಸೆಗೊಳಗಾಗಿರುವ ಕನ್ನಡದ ಪ್ರಸಿದ್ಧ ನಟ ಡಾ. ಶಿವರಾಜ್‌ ಕುಮಾರ್ ಚೇತರಿಕೆ; ಆರೋಗ್ಯ… ಸಿ.ಟಿ. ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ; ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ನಾಯಕ… ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ?: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಸಿ.ಟಿ.ರವಿ ವಿರುದ್ಧ ಕಾನೂನು ಸಮರ; ಪ್ರಧಾನಿ, ರಾಷ್ಟ್ರಪತಿಗೂ ದೂರು ನೀಡುವೆ: ಸಚಿವೆ ಲಕ್ಷ್ಮೀ… ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಜನವರಿ 17-23 ಕರ್ನಾಟಕ ಕ್ರೀಡಾಕೂಟ-2025: ವ್ಯವಸ್ಥಿತವಾಗಿ ನಡೆಸಲು ಸಿಎಂ…

ಇತ್ತೀಚಿನ ಸುದ್ದಿ

ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ ಬಸವರಾಜ್ ಹೊರಟ್ಟಿ

25/12/2024, 16:58

ಹುಬ್ಬಳ್ಳಿ(reporterkarnataka.com): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಈಗಾಗಲೇ 7 ಪೇಜ್ ಗಳ ಪತ್ರವನ್ನು ಬರೆದಿದ್ದಾರೆ. ಆದರೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರಿಂದ ಇದುವರೆಗೆ ಯಾವುದೇ ಪತ್ರ ಬಂದಿಲ್ಲ‌ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಈ ಕುರಿತು ನಗರದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷತ್ ಸದಸ್ಯರಾದ ಸಿ.ಟಿ. ರವಿಯವರು ಪತ್ರದಲ್ಲಿ ಪೊಲೀಸರು ನಡೆಸಿಕೊಂಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿ.ಟಿ. ರವಿಯವರು ಸ್ಟ್ರೈಕ್ ಮಾಡುವ ವೇಳೆ ಸಂಜೆ 6 ಗಂಟೆಗೆ ಪೊಲೀಸರ ವಶಕ್ಕೆ ಪಡೆದಿರುವುದು ಹೇಳಿಕೊಂಡಿದ್ದಾರೆ.‌ ರವಿಯವರು ನಮ್ಮ ಸದನದ ಸದಸ್ಯರಾಗಿದ್ದು, ಹಾಗಾಗಿ‌ ಅವರ ಹಕ್ಕುಚ್ಯುತಿ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಜತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಇನ್ನೂ
ಬಂದಿಲ್ಲ. ಘಟನಾ ದಿನ ಲಕ್ಷ್ಮೀ ‌ಅವರು ನೋವಿನಲ್ಲಿದ್ದರು, ಇತ್ತೀಚಿನ ಎರಡು ದಿನಗಳಿಂದ ಮಾಧ್ಯಮಗಳಲ್ಲಿ‌ ಅವರ ಹೇಳಿಕೆ ಗಮನಿಸಿದ್ದೇವೆ. ಅವರ ಹೇಳಿಕೆ ನೋಡಿದ್ದಾಗ‌ ಅವರು ನೊಂದಿರುವುದು ಗೊತ್ತಾಗುತ್ತೆ. ಕಾನೂನು ತನಿಖೆ ಹೊರತುಪಡಿಸಿ ಹೆಣ್ಮಕ್ಕಳಿಗೆ‌ ಗೌರವ ನೀಡುವುದು ನಮ್ಮ‌ ಧರ್ಮ. ನಮ್ಮಗೂ ಹೆಣ್ಮಕ್ಕಳು ಇದ್ದಾರೆ. ಲಕ್ಷ್ಮೀ ಅವರು ನಮ್ಮಗೆ ಮಗಳೆ ಅಂತಾ ತಿಳ್ಕೊಂಡಿದ್ದೇವೆ.‌ ಸಿಎಂ ಅವರೊಂದಿಗೆ ಮಾತಾಡಿ ಸದ್ಯ ಈ ವಾತಾವರಣ ತಿಳಿ ಮಾಡೋ ಪ್ರಯತ್ನದಲ್ಲಿದ್ದೇನಿ. ನನ್ನ ತೀರ್ಮಾನ ತೆಗೆದುಕೊಂಡಿದ್ದೇನೆ, ಅದಕ್ಕೆ ಬಹುತೇಕರು ಒಳ್ಳೆಯ ತೀರ್ಮಾನ ಅಂತಿದ್ದಾರೆ.‌ ಯಾರಿಗೂ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಿದ್ದೇನಿ. ಪರಿಷತ್ ಸದನದ ಘಟನೆಯ ಕುರಿತು ರಾಜ್ಯಪಾಲರ ಮಾಹಿತಿ ಕೇಳಿರುವ ವಿಚಾರ ಮಾತನಾಡಿ, ರಾಜ್ಯಪಾಲರು ಮಾಹಿತಿ ಕೇಳಿರುವುದು ನಿಜ. 19 ದಿನಾಂಕದಂದು ಆಗಿರುವ ಘಟನೆ ವಿವರಣೆ ಕೇಳಿದರು, ರಾಜ್ಯಪಾಲರಿಗೆ ವಿವರಣೆ ನೀಡಿದ್ದೇನಿ. ಡಿಸೆಂಬರ್ 27 ರಂದು ಬೆಳಗಾವಿಗೆ ತೆರಳಲಿದ್ದೇನಿ ಸಿಕ್ಕರೆ ಮಾತಾಡುತ್ತೇನೆ, ಇಲ್ವಾದಲ್ಲಿ ಬೆಂಗಳೂರಿನಲ್ಲಿ ಮಾತಾಡುತ್ತೇನೆ. ಈ ಪ್ರಕರಣ ಸಾಮಾಧಾನ ಮಾಡೋ ಜವಾಬ್ದಾರಿ ಎಲ್ಲರ ಮೇಲೂ ಇದೆ, ಸಮಾಧಾನ ಮಾಡೋವುದು ಎಲ್ಲರಿಗೂ ಒಳ್ಳೆಯದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು