10:42 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಸಾರ್ವಜನಿಕ ದೀಪಾವಳಿ‌ ಉತ್ಸವ: ಬೆಳಕಿನ ಮರಕ್ಕೆ ಸಾಮೂಹಿಕವಾಗಿ ಹಣತೆ ಹಚ್ಚಿದ ಮಾತೆಯರು

04/11/2024, 18:43

ಬಂಟ್ವಾಳ(reporterkarnataka.com): ಸೀತಾರಾಮ ನಗರದ ಅಶ್ವಥಡಿ ಪೆರಾಜೆ ಅಂಗನವಾಡಿ ಕೇಂದ್ರದಲ್ಲಿ ಮಾತೆಯರು ಬೆಳಕಿನ ಮರಕ್ಕೆ ಸಾಮೂಹಿಕವಾಗಿ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿ ಉತ್ಸವ ಆಚರಿಸಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಮಧುರಾ ಕಲ್ಲಡ್ಕ ದೀಪಾವಳಿ‌ ಉತ್ಸವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ರಾಜ್ಯವಾಳಿದ ನೆನಪಿನ ಸಂಭ್ರಮದ ಆಚರಣೆಯಾಗಿದೆ. ಬೆಳಕಿನ ಹಬ್ಬ ಮನಸ್ಸಿನ ಕತ್ತಲೆಯನ್ನು‌ ಓಡಿಸಿ ಸುಜ್ಞಾನ ಬೆಳಕು ನೀಡಲಿ.ಸಮಾಜದಲ್ಲಿ‌ ಸಾಮರಸ್ಯ ಜಾಗೃತಗೊಳ್ಳಲಿ ಎಂದು ದೀಪಾವಳಿ ಹಬ್ಬದ ಮಹತ್ವವನ್ನು ತಿಳಿಸಿದರು.
ಅಶೋಕ್ ಕುಮಾರ್ ಬರಿಮಾರು ಪೊಳಲಿ ಶೀನಪ್ಪ ಹೆಗಡೆ ವಿರಚಿತ ತುಳುವಾಲ ಬಲಿಯೇಂದ್ರ ತುಳುಪಾಡ್ದನ ವಾಚನ ಮಾಡಿದರು.
ಅಭಾಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ತುಳುನಾಡಿನ ಹಬ್ಬಗಳ ಬಗ್ಗೆ ತಿಳಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಂದಿಸಿದರು. ನಾರಾಯಣ ಎಂ.ಪಿ.,ರಾಘವ ಏಣಾಜೆ,ಭಾರತಿ ಪೆರಾಜೆ,ಗಿರಿಜಾ ಅಶ್ವತ್ಥಡಿ, ಶಶಿಕಲಾ ಮಾಧವ,ವಿಟ್ಲ ಮೈತ್ರೇಯಿ ಗುರುಕುಲದ ಜಯಂತಿ ಮಾತಾಜಿ,ಭುಜಂಗ ಮಾಣಿ,ಹೊನ್ನಪ್ಪ ಸಾಲ್ಯಾನ್,ಸದಾಶಿವ‌ ಆಚಾರ್ ಮದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು