2:48 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಗ್ರಾಪಂ ಸದಸ್ಯೆ ಪತಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ; ಬಿಜೆಪಿ ಮುಖಂಡ ಧನರಾಜ್ ಭೂಲಾ ಅಂದರ್

25/10/2024, 18:38

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಹೆಡೆಮುರಿ ಕಟ್ಟಿ ಬಂಧಿಸಲಾಗಿದೆ.
ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನ ಬಂಧಿಸಿದ ಪೊಲೀಸರು ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 5ಕ್ಕೆ ಏರಿದೆ.
ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ.ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ. ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಧನರಾಜ್ ಭೋಲಾ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ದೇವರಸನ ಹಳ್ಳಿ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಸದಸ್ಯೆ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯ ಅವರಿಗೆ ಅಧಿಕಾರ ನೀಡಬೇಕಿತ್ತು.


ಆದರೆ ಈ ವಿಚಾರದಲ್ಲಿ ಸುಮತಿ ಸಂಬಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ. ಅಕ್ಟೋಬರ್ 6 ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ. ಗೋವರ್ಧನ್ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ. ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ. ಮರುದಿನ ದೇವರಸನಹಳ್ಳಿ ಮತ್ತು ಕೆಬ್ಬೆಪುರ ಮುಖ್ಯ ರಸ್ತೆಯ ಕೆಸರು ಗದ್ದೆಯೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದಾರೆ.
ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೋವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕಿ ತಪ್ಪಿಸುವಂತೆ ಮಾಡಿದ್ದ. ಆದ್ರೆ ಸಂಚಾರಿ ಠಾಣೆ ಪೊಲೀಸರು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅನುಮಾನದ ಹುತ್ತ ದಟ್ಟವಾಗಿ ಕಾಣಿಸಿತ್ತು. ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡು ತೆನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ಮತ್ತು ಸಹಚಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು. ಕೂಡಲೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್, ಮಣಿಕಂಠ ಹಾಗೂ ಮಹೇಂದ್ರ ಸೇರಿದಂತೆ ನಾಲ್ವರನ್ನ ಬಂಧಿಸಿದ್ದರು. ಇದೀಗ 5 ನೇ ಆರೋಪಿ ಧನರಾಜ್ ಭೂಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಷ್ಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಸಾಧ್ಯತೆ ಹೆಚ್ಚಳವಾಗಿದೆ ಎನ್ನುತ್ತಾರೆ ನಂಜನಗೂಡು ಪೊಲೀಸರು. ಕೊನೆಗೆ ಪ್ರಮುಖ ರಾಜಕೀಯ ಮುಖಂಡರ ಪಾತ್ರವಿದೆ ಎಂದು ಆರೋಪಿಸಿ ಜನಾಂಗದ ಪ್ರಮುಖ ಮುಖಂಡರಿಂದ ನಂಜುಂಡೇಶ್ವರನ ದೇವಾಲಯದ ಸಮೀಪವಿರುವ ಉಪ್ಪಾರ ಸಮುದಾಯ ಭವನದಲ್ಲಿ ಪ್ರತಿಭಟನೆಗಾಗಿ ತಯಾರಿ ಕೂಡ ನಡೆಸಲಾಗುತ್ತಿದೆ .
ಮೃತರ ಪತ್ನಿ ಸೌಭಾಗ್ಯ ಮಾತನಾಡಿ ಇದೊಂದು ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆಯಾಗಿದೆ ಇದರ ಹಿಂದೆ ಇನ್ನೂ ಹಲವಾರು ಮಂದಿ ಇದ್ದಾರೆ. ಪೊಲೀಸರು ಇದರ ವಿರುದ್ಧ ಪರಿಶೀಲನೆ ನಡೆಸಿ ತಪ್ಪಿತಸ್ಥರಿಗೆ ಸರಿಯಾದ ಕಾನೂನು ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು