ಇತ್ತೀಚಿನ ಸುದ್ದಿ
ಬಡವರ ಸೇವೆಗೆ ಮುಂದಾಗ ಶ್ರೀದೇವಿ ಆರ್. ನಾಯಕ್ ಅವರಿಂದ ಆಹಾರ ಕಿಟ್, ಮಾಸ್ಕ್ , ಹಣ್ಣು ಹಂಪಲು ವಿತರಣೆ
21/05/2021, 10:30
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಗೆರಮಾಗುಂಡ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಮಾಸ್ಕ್ ಮತ್ತು ಹಣ್ಣು ಹಂಪಲಗಳನ್ನು ಕೂಲಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ವಿತರಿಸಿ ಕೂಲಿ ಕಾರ್ಮಿಕರಿಗೆ ಕೊರೊನ ವೈರಸ್ ಬಗ್ಗೆ ಅರಿವು ಮೂಡಿಸಲಾಯಿತು.
ಬಿಸಿಲು ಲೆಕ್ಕಿಸಿದೆ ಬಂಡವರ ಬಂಧು, ದಿನ ದಲಿತರ ನಾಯಕಿ ಶ್ರೀದೇವಿ ಆರ್. ನಾಯಕ ಅವರು ತಾಲ್ಲೂಕಿನ ಹಳ್ಳಿಗಳಿಗೆ ತೆರಳಿ ದೇವದುರ್ಗ ತಾಲ್ಲೂಕಿನ ಜನ ನಾಯಕಿ ಎಂದು ಹೆಸರು ಗಳಿಸಿದ್ದಾಳೆ.
ಮಹಿಳೆಯಾರದರು ಬಡವರ ನೋವುಗಳಿಗೆ ಹಗಲು ರಾತ್ರಿ ಎನ್ನದೇ ಹಳ್ಳಿಗಳಿಗೆ ಬೇಟಿ ನೀಡುತ್ತಿದ್ದಾರೆ ಎಂದು ತಾಲ್ಲೂಕಿನ ಜನತೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ದೇವಿ ನಾಯಕ ಅಭಿಮಾನ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು. ಗೊತ್ತು ಅನ್ನದ ಬೆಲೆ ಎನ್ನುವ ಹಾಗೆ ಮೂಲಭೂತ ಸೌಲಭ್ಯದಿಂದ ಕಂಗಾಲಾದ 23 ವಾರ್ಡನ ಜನತೆಗೆ ಹಾಗೂ ಕೊರೊನಾ ಎಂಬ ಮಾಹಾ ಕಂಠದ ಬಗ್ಗೆ ಎಳ್ಳಷ್ಟು ತಿಳ್ಳುವಳಿಕೆ ಇಲ್ಲದೆ ಮಾಸ್ಕ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಇರುವ ಅಮಾಯಕ ಜನತೆಗೆ ‘ಅರಿವಿನ ದಾರಿ ಕಾಣದೆ ಜನಸಮುದಾಯ ನರಳುತಿರುವಾಗ ಅರಿತು ದಾರಿ ತೋರುವ ಮಾಹಾಮಾತೆಯಾಗಿ ‘ ಅಕಸ್ಮಿಕವಾಗಿ ಭೇಟಿ ನೀಡಿ 23 ವಾರ್ಡಿ ನಲ್ಲೆ ಅತಿಹಿಂದುಳಿದಿರುವಂತ ಕೆ. ಕೂರ್ಲೆರದೊಡ್ಡಿ, ಕೆ. ಗೂಗೇರದೊಡ್ಡಿ, ಆರೇರದೊಡ್ಡಿ ಗಳಿಗೆ ಭೇಟಿ ನೀಡಿ ಸುಮಾರು 300 ಕ್ಕಿಂತ ಹೆಚ್ಚು ಮಾಸ್ಕ ವಿತರಿಸಿದರು. ಸುಮಾರು 70 ರಿಂದ 80 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಸಹಾಯ ಹಸ್ತ ಚಾಚಿದ ಶ್ರೀ ದೇವಿ ಅಕ್ಕನವರಿಗೂ ಹಾಗೂ ಶ್ರೀದೇವಿ ನಾಯಕ ಅಭಿಮಾನಿಗಳ ಬಳಗಕ್ಕೂ 23 ವಾರ್ಡಿನ ಯುತ್ ಗ್ರೂಪ್ ಪರವಾಗಿ ವಂದನೆಗಳನ್ನು ಅರ್ಪಿಸಲಾಗಿದೆ.
ಇಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ವೆಂಕಟೇಶ್ ನಾಯಕ್ ಫೌಂಡೇಶನ್ ಮತ್ತು ಶ್ರೀದೇವಿ ನಾಯಕ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸುಮಾರು 200 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಇವರು ಈಗಾಗಲೇ ದೇವದುರ್ಗ ಕ್ಷೇತ್ರದಲ್ಲಿ ರೈಚೂರ್ ಜಿಲ್ಲೆಯ ನಿರ್ಗತಿಕರಿಗೆ ಬಡ ಕುಟುಂಬದವರಿಗೆ ಕೂಲಿ ಕಾರ್ಮಿಕರಿಗೆ ಸಾಕಷ್ಟು ಸಮಾಜ ಸೇವೆಯನ್ನು ಮಾಡುವುದರ ಮೂಲಕ ಶ್ರೀ ವೆಂಕಟೇಶ್ ನಾಯಕ್ ಫೌಂಡೇಶನ್ ವತಿಯಿಂದ ಕ್ಷೇತ್ರದಲ್ಲಿ ಟ್ರಸ್ಟ್ ವತಿಯಿಂದ ಹೆಣ್ಣುಮಕ್ಕಳಿಗೆ ಬಟ್ಟೆ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು. ಈ ಸಮಾಜ ಸೇವೆ ಮಾಡುವುದನ್ನು ಗುರುತಿಸಿ ಕೆಪಿಸಿಸಿಯ ರಾಜ್ಯಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗ್ಯವತಿ ಮಹಿಳಾ ಟ್ರಸ್ಟ್ ಗೆ ಮತ್ತು ಮಹಿಳಾ ಶ್ರೀದೇವಿ ನಾಯಕ್ ಮಾಡುವ ಕೆಲಸವನ್ನು ಗುರುತಿಸಿ ಜೂನಿಯರ್ ಸೋನಿ ಗಾಂಧಿ ಎಂದು ಬಡವರಿಗಾಗಿ ಅನ್ನದಾನ, ಕಿಟ್ ದಾನ, ಹಣ್ಣು-ಹಂಪಲು ದಾನ ಮಾಡುವ ದೃಷ್ಟಿಯಿಂದ 50000 ಸಾವಿರ ಚೆಕ್ ನೀಡಿದರು. ಸಮಾಜಮುಖಿ ಕೆಲಸ ಮಾಡುವುದರಿಂದ ಮುಂದಿನ 2023ಕ್ಕೆ ಕಾಂಗ್ರೆಸ್ ಪಕ್ಷದಿಂದ ಎಂಎಲ್ಎ ಆಕಾಂಕ್ಷಿ ಆಗಿ ಸ್ಪರ್ಧೆ ಮಾಡುವ ಅಭಿಮಾನಿಗಳ ಆಸೆ ಇದೆ. ಅಲ್ಲದೆ ಮಸ್ಕಿ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಖಚಿತ ಆಧಾರದ ಮೇಲೆ ಅಭಿಮಾನಿಗಳಿಂದ ಧ್ವನಿ ಕೇಳಿಬರುತ್ತದೆ. ಈ ಸಂದರ್ಭದಲ್ಲಿ ರಾಜಶೇಖರ್ ನಾಯಕ್ , ವೆಂಕಟೇಶ್ ಪೂಜಾರಿ , ತಿಮ್ಮಪ ಗೌಡ , ಚೆನ್ನಯ್ಯ ಸ್ವಾಮಿ ಹಿರೇಮತ್ ಹಾಗೂ ಗ್ರಾಮದ ಗಣ್ಯ ವೆಕ್ತಿಗಳು ಉಪಸ್ಥಿತರಿದ್ದರು .