6:13 AM Friday18 - October 2024
ಬ್ರೇಕಿಂಗ್ ನ್ಯೂಸ್
ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ… ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ: ಹಳಿ ತಪ್ಪಿದ… ತೀರ್ಥಹಳ್ಳಿಯಲ್ಲಿ ಸಂಭ್ರಮ- ಸಡಗರದ ಆಯುಧ ಪೂಜೆ: ಪೊಲೀಸ್ ಠಾಣೆಯಲ್ಲೂ ಬಂದೂಕು, ರಿವಾಲ್ವರ್ ಗಳಿಗೆ… ಸಾಲ ವಾಪಸ್ ಕೇಳಿದಕ್ಕೆ ಕಾರ್ಪೆಂಟರ್ ಅಮಾನುಷ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ… ಮಂಗಳೂರು: ಸರ್ಫಾಸಿ ಕಾಯಿದೆ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಕಾಫಿ ಬೆಳೆಗಾರರ ಪ್ರತಿಭಟನೆ ತೀರ್ಥಹಳ್ಳಿ: ಸಾಲಬಾಧೆಯಿಂದ ಮನನೊಂದು ರೈತ ಅತ್ಮಹತ್ಯೆ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್‌ ತಿಂಗಳ ವಿಜೇತರಾಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಆಯ್ಕೆ

16/10/2024, 14:50

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಅವರು ಆಯ್ಕೆಯಾಗಿದ್ದಾರೆ.


ಪುತ್ತೂರು ನಿವಾಸಿಗಳಾದ ದೀಪಾ ಮತ್ತು ಭಾಸ್ಕರ್ ದಂಪತಿ ಪುತ್ರಿಯಾದ ನಮಸ್ವಿ ಭಾಸ್ಕರ್ ಅವರು ಅತ್ತಾವರದ ಸರೋಜಿನಿ ಮಧುಸೂಧನ್ ಕುಶೆ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತಿದ್ದಾಳೆ. ಹಾಡು, ನೃತ್ಯ, ಚಿತ್ರ ಬಿಡಿಸುದು, ನಿರೂಪಣೆ ಹಾಗೂ ಸ್ವಂತವಾಗಿ ಹಾಡು ಬರೆಯುದು, ಕಥೆ ಬರೆಯುದರಲ್ಲಿ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆ. ಈಕೆ ಹಾಡು, ನೃತ್ಯ, ಛದ್ಮವೇಷ ಮುಂತಾದುವುಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದಿದ್ದಾಳೆ. ಇತೀಚೆಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಭಕ್ತಿ ಗೀತೆ ಹಾಗೂ ಆಶು ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಂದಾಪುರ ಕಲಾವಿದ ಸಾವಿರ ಸಂಚಿಕೆಯ ಸಂಭ್ರಮದಲ್ಲಿ ಪ್ರತಿಭಾರತ್ನ ಎಂಬ ಬಿರುದು ಕೊಟ್ಟು ಗೌರವಿಸಿರುತ್ತಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯವರು ಕಲಾರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದ್ದಾಳೆ.
ಕುಮಾರ್ ನಿಹಾಲ್ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತ ಮೂಡಬಿದಿರೆಯ ಸುಕೇಶ್ ಮತ್ತು ಮಲ್ಲಿಕಾ ದಂಪತಿಯ ಪುತ್ರ. ಈತನ ಹವ್ಯಾಸಗಳು ಯಕ್ಷಗಾನ , ಕೀಬೋರ್ಡ್, ನಾಟಕ , ಸಂಗೀತ ಹಾಗೂ ಕವನ ಬರೆಯುವುದು. ಕೀಬೋರ್ಡ್ ಗುರುಗಳಾದ ಸಂಸ್ಕೃತ ವಿದ್ವಾನ್ ಗಜಾನನ ಮರಾಟೆ ಅವರಿಂದ ಕಲಿಯುತ್ತಿದ್ದಾನೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತುಳಸಿ ಪೇಜತೈ ಅವರಲ್ಲಿ ಅಭ್ಯಾಸಿಸುತ್ತಿದ್ದಾನೆ. ಸುಗಮ ಸಂಗೀತವನ್ನು ವಿದ್ವಾನ್ ಯಶವಂತ್ ಎಂ.ಜಿ. ಅವರಲ್ಲಿ, ಯಕ್ಷಗಾನವನ್ನು ರಕ್ಷಿತ್ ಪಡ್ರೆ ಅವರಲ್ಲಿ ಕಲಿಯುತ್ತಿದ್ದಾನೆ. ನಾಟಕ ಹಾಗೂ ಕವನ ಬರೆಯುವುದನ್ನು ಮೋಹನ್ ಹೋಸ್ಮರ್ ಅವರು ಕಲಿಸುತ್ತಿದ್ದಾರೆ. ಹಾಗೆಯೇ ಇವರು ಇನ್ಸ್ಟ್ರುಮೆಂಟ್ ನ್ನು ನುಡಿಸುವುದನ್ನು ಕಲಿಯುತ್ತಿದ್ದಾನೆ. ಈತನಿಗೆ ದಶಮ ಸಿದ್ಧಿ ಸಂಭ್ರಮದಲ್ಲಿ ಸಿದ್ಧಿ ಅವಾರ್ಡ್ ದೊರಕಿರುತ್ತದೆ.
*ದೊರೆತ ಪ್ರಶಸ್ತಿಗಳು:*
•ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಸಂಶೋಧನಾ ಕೇಂದ್ರದ ವತಿಯಿಂದ ನಡೆಸಲ್ಪಟ್ಟ ಕನಕ ಕೀರ್ತನ ಗಂಗೋತ್ರಿ, ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಫ್ರೌಢಶಾಲೆಯ ವಿಭಾಗದಿಂದ 2023-24 ನೇ ಸಾಲಿನ ಕನಕ ಪುರಸ್ಕಾರ.
•ಮಹಿಳಾ ಮತ್ತು ಮಕ್ಕಳ ಇಲಾಖೆ ಕರ್ನಾಟಕ ಆಯೋಜಿಸಿದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
•ಬೀಚ್ ಉತ್ಸವ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ
•ಅವಿನ್ ಸ್ವರ ಸಂಗಮ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಚಿಕ್ಕಮಗಳೂರಿನಲ್ಲಿ ನಡೆಯಿತು ಇದರಲ್ಲಿ ಮೊದಲನೇ ಸಮಾಧಾನಕರ ಬಹುಮಾನ ಪಡೆದಿರುತ್ತಾನೆ.
•ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
•ಭಾರತ್ ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ ನಡೆಸಿದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
•ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಫ್ರೌಢ ವಿಭಾಗದ ಭಾವಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಹಾಗೂ ಅನೇಕ ಕಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ.
*ಸನ್ಮಾನ:*
* ದಕ್ಷಿಣ ಕನ್ನಡ ಜಿಲ್ಲಾ ಚಪ್ಟೆಗಾರ್ ಸಂಘದಲ್ಲಿ ಸನ್ಮಾನವನ್ನು ಮಾಡಲಾಗಿದೆ.
* ಶಾಲೆಯಲ್ಲಿ ಸನ್ಮಾನವನ್ನು ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು