11:14 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ನವೀನ್ಸ್ ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿ ಮೊದಲ ಯೋಜನೆಗೆ ಚಾಲನೆ

07/10/2024, 21:42

ಬೆಂಗಳೂರು(reporterkarnataka.com): ಚೆನ್ನೈನ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್ ಆಗಿ ಬುದ್ಧಿವಂತಿಕೆಯ ಪರಂಪರೆಯೊಂದಿಗೆ, ನವೀನ್ಸ್ ಈಗ ತನ್ನ ಆಂಥಿಯಾ ಪೊಯಟ್ರಿಯೊಂದಿಗೆ ಬೆಂಗಳೂರಿನ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗೆ ತನ್ನ ಪರಿಣಿತಿಯನ್ನು ವಿಸ್ತರಿಸುತ್ತಿದೆ. ಬನ್ನೇರುಘಟ್ಟದ ಡಾಲರ್ಸ್ ಕಾಲೋನಿಯಲ್ಲಿರುವ ಜೆ. ಪಿ. ನಗರದ ಹೃದಯಭಾಗದಲ್ಲಿ, ಈ ಹೆಗ್ಗುರುತಾಗಿರುವ ಯೋಜನೆಯ ಸೊಗಸಾದ, ಐಷಾರಾಮಿ ಕಾಂಡೋಗಳನ್ನು ನೀಡುತ್ತಿದೆ. ಈ ನಿರ್ಮಾಣವು ಬೇಸ್‍ಮೆಂಟ್ (ನೆಲಮಾಳಿಗೆ) ಮತ್ತು ನೆಲದ +10 ಭವ್ಯವಾದ ಅಂತಸ್ತುಗಳನ್ನು ಒಳಗೊಂಡಿದೆ, 2, 3, 3.5 ಮತ್ತು 4 ಬಿ ಹೆಚ್ ಕೆ ವರೆಗಿನ 42 ವಿಶೇಷವಾದ ಕಾಂಡೋಮಿನಿಯಮ್ ಗಳನ್ನು ಒಳಗೊಂಡಿದೆ, ಐಷಾರಾಮಿ ಜೀವನಶೈಲಿಯನ್ನು ಬಯಸುವ ವಿವೇಚನಾಶೀಲ ಗ್ರಾಹಕರಿಗೆ ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಕಳೆದ 35 ವರ್ಷಗಳಲ್ಲಿ, ನಾವು ಚೆನ್ನೈನಲ್ಲಿ 125ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ, ನಮ್ಮ ಗ್ರಾಹಕರ ನಂಬಿಕೆ ಮತ್ತು ಮೆಚ್ಚುಗೆಯನ್ನು ಗಳಿಸಿದ್ದೇವೆ. ನಾವು ಬೆಂಗಳೂರಿಗೆ ವಿಸ್ತರಿಸುತ್ತಿದ್ದಂತೆ, ನಮ್ಮ ಸೊಗಸಾದ ಕ್ರಿಯಾತ್ಮಕ ರಚನೆಗಳೊಂದಿಗೆ ನಗರದ ದೃಶ್ಯವನ್ನು ಹೆಚ್ಚುಸುವ ಗುರಿಯೊಂದಿಗೆ ನಾವು ಅದೇ ಅಚಲವಾದ ಬದ್ಧತೆಯನ್ನು ಬೆಂಗಳೂರಿಗೆ ತರುತ್ತೇವೆ. ನವೀನ್ಸ್ʼ ನ ಆಂಥಿಯಾ ಪೊಯಟ್ರಿ ಐಷಾರಾಮಿ ವಾಸದ ಸ್ಥಳಗಳು, ಸಾಕಷ್ಟು ಬಾಲ್ಕನಿಗಳ ಜೊತೆ ಅಸಾಧಾರಣ ರೂಫ್ ಟಾಪ್ ರಿಟ್ರೀಟ್ಸ್ ಇದಕ್ಕೆ ಪೂರಕವಾಗಿದೆ. ಅತ್ಯುತ್ತಮ ದರ್ಜೆಯ ನಿರ್ಮಾಣವನ್ನು ನೀಡುವುದು ನಮ್ಮ ಗುರಿಯಾಗಿದೆ ಮತ್ತು ನಾವು ಸ್ಪರ್ಶಿಸುವ ಪ್ರತಿಯೊಂದು ನಗರದಲ್ಲಿ ಅತ್ಯಂತ ವಿಶ್ವಾಸಾರ್ಹ ಬಿಲ್ಡರ್ ಆಗಲು ನಾವು ಸಮರ್ಪಿತರಾಗಿದ್ದೇವೆ.” ಎಂದು ನವೀನ್ಸ್ʼ ನ ವ್ಯವಸ್ಥಾಪಕ ನಿರ್ದೇಶಕರಾದ
ನವೀನ್ ಕುಮಾರ್, ಹೇಳುತ್ತಾರೆ.
ನವೀನ್ಸ್ʼ ರವರ ಆಂಥಿಯಾ ಪೊಯಟ್ರಿ ಅದರ ನಿವಾಸಿಗಳಿಗೆ ಆಧುನಿಕ ವಿನ್ಯಾಸದಿಂದ ವ್ಯಾಖ್ಯಾನಿಸಲಾದ ಪ್ರೀಮಿಯಂ ಜೀವನಶೈಲಿಯನ್ನು ನೀಡುತ್ತದೆ ಮತ್ತು ಪ್ರಕೃತಿ ಪ್ರೇಮವನ್ನು ಬೆಳೆಸುವ ಬಾಲ್ಕನಿಗಳು ಇದರಲ್ಲಿ ಹೇರಳವಾಗಿವೆ. ಸೌಲಭ್ಯಗಳಲ್ಲಿ ಗ್ರ್ಯಾಂಡ್ ಎಂಟ್ರೆನ್ಸ್ ಪೋರ್ಟಲ್, ಡಬಲ್ ಸೀಲಿಂಗ್ ಹೈಟ್ ಲಾಬಿ ಜೊತೆಗೆ ಲೌಂಚ್, ಮಲ್ಟಿಪರ್ಪಸ್ ಹಾಲ್, ಜಿಮ್, ಮಕ್ಕಳ ಆಟದ ಪ್ರದೇಶ ಮತ್ತು ವಿಶಾಲವಾದ ಕಾರ್ ಪಾರ್ಕ್ ಸೇರಿವೆ. ಟೆರಸ್ (ತಾರಸಿ) ಅನುಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸುತ್ತದೆ, ತಾಪಮಾನ-ನಿಯಂತ್ರಿತ ಈಜುಕೊಳ, ಮಕ್ಕಳಿಗಾಗಿ ಮೀಸಲಾದ ಪೂಲ್, ಸುಂದರವಾಗಿ ಮಾಡಿದ ಲ್ಯಾಂಡ್‍ಸ್ಕೇಪ್‍ಡ್ ಉದ್ಯಾನವನಗಳು ಮತ್ತು ರಿಫ್ಲೆಕ್ಸಾಲಜಿ ಮಾರ್ಗವನ್ನು ನೀಡುತ್ತದೆ. ಸಾಮಾಜಿಕ ಕೂಟಗಳನ್ನು ಬಾರ್ಬೆಕ್ಯೂ ಕೌಂಟರ್‍ನಲ್ಲಿ ಆಯೋಜಿಸಬಹುದು, ಸ್ಟೀಮ್ ಬಾತ್, ಜಕುಝಿ, ಕ್ಯಾಬನಾಸ್ ಮತ್ತು ಐಲ್ಯಾಂಡ್ ಸೀಟಿಂಗ್ ಗಳಲ್ಲಿ ವಿಶ್ರಾಂತಿಯನ್ನು ಪಡೆಯಬಹುದು. ಹೆಚ್ಚುವರಿಯಾಗಿ, ವರ್ಕ್ ಪಾಡ್ ಗಳು ಉತ್ಪಾದಕ ಸ್ಥಳವನ್ನು ಒದಗಿಸುತ್ತವೆ, ನಿವಾಸಿಗಳು ಕೆಲಸ ಮತ್ತು ವಿರಾಮವನ್ನು ಸಲೀಸಾಗಿ ಸಮತೋಲನ ಮಾಡಲು ಅನುವು ಮಾಡಿಕೊಡುತ್ತದೆ.
ನವೀನ್ಸ್ʼ ಅವರ ಆಂಥಿಯಾ ಪೊಯಟ್ರಿ ಕೇವಲ ಸೌಕರ್ಯ ಮತ್ತು ಸೊಬಗು ಮಾತ್ರವಲ್ಲದೆ ಸುಸ್ಥಿರತೆಯನ್ನೂ ಹೊಂದಿದೆ. ಯೋಜನೆಯು ಇವಿ ಚಾಜಿರ್ಂಗ್ ಪಾಯಿಂಟ್‍ಗಳು, ಸಾಮಾನ್ಯ ಪ್ರದೇಶದ ದೀಪಗಳಿಗಾಗಿ ಸೌರಶಕ್ತಿ, ಶಕ್ರಿಯ ದಕ್ಷತೆಗಾಗಿ ಲೈಟಿಂಗ್ ಸೆನ್ಸರ್ಸ್, ಮಳೆ ನೀರು ಕೊಯ್ಲು ವ್ಯವಸ್ಥೆಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ವಿವಿಧ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಚೆನ್ನೈನಲ್ಲಿ ಗ್ರೀನ್ ಚಾಂಪಿಯನ್ ಎಂದು ಕರೆಯಲ್ಪಡುವ ನವೀನ್ಸ್ʼ ತನ್ನ ಆಂಥಿಯಾ ಪೊಯಟ್ರಿಗಾಗಿ ಐಜಿಬಿಸಿ ಚಿನ್ನದ ಪ್ರಮಾಣೀಕರದ ಅನ್ವೇಷಣೆಯೊಂದಿಗೆ ಸುಸ್ಥಿರತೆಗಾಗಿ ತನ್ನ ಬದ್ಧತೆಯನ್ನು ಮುಂದುವರೆಸಿದೆ, ಇದು ಐಜಿಬಿಸಿ ಗೋಲ್ಡ್ ರೇಟಿಂಗ್ ಅನ್ನು ಹೆಮ್ಮೆಯಿಂದ ಹೊಂದಿರುವ ಯೋಜನೆಗಳ ಪರಂಪರೆಗೆ ಸೇರಿಸುತ್ತದೆ.
ಪ್ರವರ್ಧಮಾನಕ್ಕೆ ಬರುತ್ತಿರುವ ನೆರೆಹೊರೆಯಲ್ಲಿ ನೆಲೆಗೊಂಡಿರುವ ನವೀನ್ಸ್ʼ ರವರ ಆಂಥಿಯಾ ಪೊಯಟ್ರಿಯು ಸೊಗಸಾದ ನಿವಾಸಗಳನ್ನು ಮಾತ್ರವಲ್ಲದೆ ಪ್ರಕೃತಿ ಮತ್ತು ಆಧುನಿಕ ಜೀವನಶೈಲಿಯ ತಡೆರಹಿತ ಸಂಯೋಜನೆಯನ್ನು ನೀಡುತ್ತದೆ. ಬನ್ನೇರುಘಟ್ಟ ರಸ್ತೆಯು ನಗರ ಸೌಕರ್ಯ ಮತ್ತು ನೈಸರ್ಗಿಕ ನೆಮ್ಮದಿಯನ್ನು ಸಲೀಸಾಗಿ ಸಂಯೋಜಿಸುತ್ತದೆ. ಶಾಪಿಂಗ್ ಮಾಲ್‍ಗಳು, ರೆಸ್ಟೊರೆಂಟ್‍ಗಳು, ಐಟಿ ಪಾರ್ಕ್ ಗಳು, ಪ್ರತಿಷ್ಠಿತ ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಒಳಗೊಂಡಂತೆ, ಈ ಕ್ರಿಯಾತ್ಮಕ ನೆರೆಹೊರೆಯು ವಿವಿಧ ಜೀವನಶೈಲಿಯನ್ನು ಪೂರೈಸುತ್ತದೆ, ಇದು ವಾಸಿಸಲು, ಕೆಲಸ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಪರಿಪೂರ್ಣ ಸ್ಥಳವಾಗಿದೆ. ಉತ್ತಮ ಗುಣಮಟ್ಟದ ನಿರ್ಮಾಣ, ಉತ್ಕøಷ್ಟ ಪೂರ್ಣಗೊಳಿಸುವಿಕೆ ಮತ್ತು ಕ್ರಿಯಾತ್ಮಕ ವಿನ್ಯಾಸದೊಂದಿಗೆ, ನವೀನ್ಸ್ʼ ರವರ ಆಂಥಿಯಾ ಪೊಯಟ್ರಿಯು ಸೊಬಗು, ಐಷಾರಾಮಿ, ಸುಸ್ಥಿರತೆ ಮತ್ತು ಆಧುನಿಕ ಅನುಕೂಲತೆಯನ್ನು ಸಂಯೋಜಿಸುವ ಜೀವನ ಮಟ್ಟದ ಬಗ್ಗೆ ಭರವಸೆ ನೀಡುತ್ತದೆ.
ಪ್ರಾಜೆಕ್ಟ್ ಗಾಗಿ ಬುಕಿಂಗ್‍ಗಳು ಪ್ರಾರಂಭವಾಗಿವೆ ಮತ್ತು ಯೋಜನೆಯು 2028 ರ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು