ಇತ್ತೀಚಿನ ಸುದ್ದಿ
ದಸರಾ ಹುಲಿ: ಅ.12ರಂದು ಕಾಳಿಚರಣ್ ಫ್ರೆಂಡ್ಸ್ ಊದು ಪೂಜೆ
03/10/2024, 22:57
ಮಂಗಳೂರು(reporterkarnataka.com): ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆ ಹುಲಿವೇಷ. ಹುಲಿವೇಷದಲ್ಲಿ ಅಗಾಧ ಖ್ಯಾತಿಯನ್ನು ಗಳಿಸಿ ಕಳೆದ 39 ವರ್ಷಗಳಿಂದ ಹುಲಿವೇಷದಲ್ಲಿ ತನ್ನದೇ ಛಾಪು ಮೂಡಿಸಿದ ಬೋಳೂರು ನೇಶನಲ್‌ನ ಕಾಳಿಚರಣ್ ಫ್ರೆಂಡ್ಸ್ ಹುಲಿವೇಷ ತಂಡದ ಊದು ಪೂಜೆ ಅ.12ರಂದು ಸಂಜೆ 7ಕ್ಕೆ ಬೊಕ್ಕಪಟ್ಣ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಲಿದೆ.
ಅ.13ರಂದು ದಸರಾ ಹುಲಿ ಹೊರಡಲಿದೆ. ಕೇಂದ್ರ
ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಗಳೂರು ದಸರಾವೆಂದೆ ಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಟ್ಯಾಬ್ಲೋ ಮೆರವಣಿಗೆಯಲ್ಲಿ ಕಳೆದ ಬಾರಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರದಲ್ಲಿ ಪ್ರದರ್ಶನ ನೀಡಿ ಪ್ರಸಿದ್ಧಿ ಪಡೆದಿದೆ.