12:57 PM Wednesday30 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು… ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ‘ಉಡುಗೊರೆ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಇತ್ತೀಚಿನ ಸುದ್ದಿ

ನಾಣ್ಯಾಪುರ: ಸೂಲಗಿತ್ತಿ ಪುರಕಲ್ ದುರುಗಮ್ಮ ಹಾಗೂ ನಾಟಿ ವೈದ್ಯ ಗೊಲ್ಲರ ಚೆನ್ನಜ್ಜರಿಗೆ ವಂದೇ ಮಾತರಂ ಜಾಗೃತಿ ವೇದಿಕೆ ಸನ್ಮಾನ

28/08/2021, 20:13

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿ, ಹಲವು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯರಿಗೆ ವಂದೇ ಮಾತರಂ ಜಾಗೃತಿ ವೇದಿಕೆ ಅವರ ಜೀವಮಾನದ ಸಮಾಜ ಸೇವೆಯನ್ನು

ಪರಿಗಣಿಸಿ, ಅವರನ್ನು ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತನಾಡಿ, 85 ವಸಂತಗಳನ್ನು ಕಂಡಿರುವ ಗ್ರಾಮದ ಹಿರಿಯಜ್ಜಿ ನಾಣ್ಯಾಪುರ ಗ್ರಾಮದ ಪುರಕಲ್ ದುರುಗಮ್ಮ,ತನ್ನ ಆರು ದಶಕಗಳನ್ನು ಉಚಿತವಾಗಿ ಸೂಲಗಿತ್ತಿ ಸೇವಕಿಯಾಗಿ ಸಮಾಜ ಸೇವೆಯಿಂದ ಗರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

65 ವರ್ಷಗಳನ್ನು ಕಂಡಿರುವ ಗೊಲ್ಲರ ಚೆನ್ನಜ್ಜ ಮೂಲತಃ ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿ ಯವರಾಗಿದ್ದು, ಇವರು ಕೆಲ ವರ್ಷಗಳಿಂದ ನಾಣ್ಯಾಪುರ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರು ತಮ್ಮ ಬಹುತೇಕ ಆಯುಷ್ಯವನ್ನು ಉಚಿತ ನಾಟಿ ವೈದ್ಯ ಚಿಕಿತ್ಸೆಗಾಗಿ ಮೀಸಲಿರಿಸಿಕೊಂಡಿದ್ದಾರೆ. ಹತ್ತಾರು  ಗಂಭೀರ ಕಾಯಿಲೆಗಳು ಸೇರಿದಂತೆ ನೂರಾರು ಖಾಯಿಲೆಗಳಿಗೆ ಉಚಿತವಾಗಿ ನಾಟಿ ಔಷಧಿ ನೀಡುತ್ತಿದ್ದಾರೆ. ಇವರಿಬ್ಬರೂ ನಾಣ್ಯಾಪುರ ಗ್ರಾಮದ ಬೆಲೆ ಕಟ್ಟದಂತಹ ಆಸ್ಥಿಯಾಗಿದ್ದಾರೆ ಎಂದು ವೇದಿಕೆ ಅಧ್ಯಕ್ಷ ವಿ.ಜಿ.ವೃಷಭೇಂದ್ರ ನುಡಿದರು.

ಅವರಿಬ್ಬರಿಗೆ ವೇದಿಕೆ ವತಿಯಿಂದ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ವಂದೇ  ಮಾತರಂ ಜಾಗೃತಿ ವೇದಿಕೆ ಮುಖಂಡ ಹಾಗೂ ಗ್ರಾಮದ ವಾಲ್ಮೀಕಿ ಯುವ ಮುಖಂಡ ದಿಬ್ಬದಳ್ಳಿ ಮಲ್ಲಪ್ಪ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಮಹಿಳೆಯರು ವಿವಿದ ಸಂಘ ಸಂಸ್ಥೆ ಮುಖಂಡರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು