6:45 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ದೇಶದಲ್ಲಿ ಎರಡು ಮನಸ್ಥಿತಿಗಳ ನಡುವೆ ಯುದ್ದ ನಡೆಯುತ್ತಿದೆ: ಸಂತ ಮದರ್ ತೆರೇಸಾ 27ನೇ ಸಂಸ್ಮರಣಾ ಸಮಾರಂಭದಲ್ಲಿ ಸಸಿಕಾಂತ್ ಸೆಂಥಿಲ್

03/09/2024, 19:06

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಎರಡು ಮನಸ್ಥಿತಿಗಳ ನಡುವೆ ದೇಶದಲ್ಲಿ ದೊಡ್ಡ ಯುದ್ದ ನಡೆಯುತ್ತಿದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದು, ಮತ್ತೊಂದು ಮೇಲು- ಕೀಳು ಭಾವನೆಯಿಂದ ನೋಡುವುದು. ಗಾಂಧೀಜಿಯವರು ಸಮಾನತೆಗಾಗಿ ಹೋರಾಟ ನಡೆಸಿದವರು. ನಮ್ಮ ದೇಶದ ರೈತರಲ್ಲಿ ಬಟ್ಟೆ ಇಲ್ಲ ಎಂಬ ಕಾರಣಕ್ಕೆ ಅವರು ಧೋತಿ ಮಾತ್ರ ಹಾಕಿಕೊಂಡರು ಎಂದು ದ.ಕ. ಜಿಲ್ಲಾಧಿಕಾರಿ ಆಗಿದ್ದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.
ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಹಾಗೂ ಸಾಮರಸ್ಯ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷ ವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ 27ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ ಎಂಬ ವಿಷಯದಲ್ಲಿ ದ.ಕ‌.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ನಾನು ಕೆಲಸ ಬಿಟ್ಟು ಹೋಗಿದ್ದೆ. ಕೆಲಸ ಕಂಪ್ಲೀಟ್ ಆಗಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ. ಆದರೆ ಮಂಗಳೂರು ಜೊತೆಗೆ ಬಿಡಲಾರದ ನೆಂಟು ಇಟ್ಟುಕೊಂಡಿದ್ದೇನೆ. ಮಂಗಳೂರು ಸ್ಟೇಟ್ ಆಫ್ ಇಂಡಿಯಾ ಮೊದಲ ಸಿಟಿ ಎಂದರು.
ಮಂಗಳೂರಿನಲ್ಲಿ ಇರುವಷ್ಟು ವೈವಿಧ್ಯ ಬೇರೆ ಕಡೆ ಇಲ್ಲ. ಇದು ಮಿನಿ ಇಂಡಿಯಾ. ವಿಭಿನ್ನತೆಯ ಆಚರಣೆ ಮಾಡಲು ನಾವು ಕಲಿಯಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಎರಡು ಮನಸ್ಥಿತಿ ಇದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದು, ಮತ್ತೊಂದು ಮೇಲು ಕೀಳು ಭಾವನೆಯನ್ನು ಹೊಂದಿದ್ದು. ತುಂಬ ವರ್ಷಗಳಿಂದ ಈ ಮನಸ್ಥಿತಿಗಳ ನಡುವೆ ಯುದ್ಧ ಆಗ್ತಾನೇ ಇದೆ. ಈಗಲೂ ವರ್ಚಸ್ಸು ಮತ್ತು ಸಮಾನತೆಯ ಯುದ್ಧ ಇದೆ. ನಮ್ಮ ಸ್ವಾತಂತ್ರ ಹೋರಾಟ ಕೇಳಿದರೆ ಬ್ರಿಟಿಷ್ ವಿರುದ್ಧದ ಹೋರಾಟ ಅಂತ ಹೇಳ್ತಾರೆ. ಆದರೆ 70℅ ಸಮಾನತೆಗಾಗಿ ಹೋರಾಟ ಮಾಡಿರುವುದು. ನನ್ನ ದೇಶದ ರೈತರಲ್ಲಿ ಬಟ್ಟೆ ಇಲ್ಲ ಎಂದು ಗೊತ್ತಿದ್ದೇ ಗಾಂಧೀಜಿಯವರು ಧೋತಿ ಮಾತ್ರ ಹಾಕಿಕೊಂಡರು. ಗಾಂಧೀಜಿ ಮಾಡಿದ್ದು ಸಮಾನತೆಗಾಗಿ ಹೋರಾಟ, ಬ್ರಿಟಿಷರ ವಿರುದ್ಧ ಅಲ್ಲ ಎಂದು ಅವರು ನುಡಿದರು.
ಸಂವಿಧಾನದಲ್ಲಿ ಸಮಾನತೆಗಾಗಿ ಕಾನೂನು ಮಾಡಿದ್ದೇವೆ. ಇದನ್ನು ಬಹಳ ಜನ ಒಪ್ಪಲಿಲ್ಲ. ಈಗಲು ಒಪ್ಪುವುದಿಲ್ಲ. ನಾನು ತಮಿಳುನಾಡಿನಲ್ಲಿ ಹುಟ್ಟಿದ್ದು. 30 ವರ್ಷ ಅಲ್ಲೇ ಇದ್ದೆ. ಈಗ ಕನ್ನಡ, ಹಿಂದಿ ಕಲಿತಿದ್ದೇನೆ. ನಾವೆಲ್ಲ ಬೇರೆ ಬೇರೆ ಜಾತಿ, ಭಾವನೆಯವರು. ಆದರೆ, ಬ್ರಿಟಿಷರ ವಿರುಧ್ಧ ಒಗ್ಗಟ್ಟಿನ ಹೋರಾಟ ಮಾಡಿದ್ದೇವೆ ಎಂದರು.
ನಮ್ಮಲ್ಲಿ ಸಹಾನುಭೂತಿಯ ಭಿನ್ನತೆ ಇಲ್ಲ. ಸೆಲಬ್ರೇಟೆಡ್ ಭಿನ್ನತೆ ಇದೆ. ದಿವಾಳಿ, ರಂಜಾನ್ ಜೊತೆಯಾಗಿ ಆಚರಣೆ ಮಾಡುತ್ತೇವೆ. ಇದು ಐಡಿಯಾ ಆಫ್ ಇಂಡಿಯಾ. ವಿಭಿನ್ನತೆ ಇದ್ದರೂ ಸಮಾನತೆಯನ್ನು ತೋರಿಸುತ್ತಿದ್ದೇವೆ. ಸಂವಿಧಾನದ ಕಾರಣ ನಾವೆಲ್ಲ ಜೊತೆಗಿದ್ದೇವೆ. ದೇವರು ಬೇರೆ ಬೇರೆ ರೂಪದಲ್ಲಿ ಇರೋದಲ್ಲ. ನಮಗೆ ಸಂವಿಧಾನದ ರೂಪದಲ್ಲಿ ದೇವರು ಇದ್ದಾನೆ.
ಸಂಸತ್ತಿನಲ್ಲಿ ಪ್ರತಿಜ್ಞೆ ಸ್ವೀಕರಿಸುವಾಗ ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಅವರು ನುಡಿದರು.
ಪಾಲಿಟಿಕ್ಸ್ ಮಕ್ಕಳಿಗೆ ಏನು ಒಳ್ಳೆದು ಬೇಕು ಅದನ್ನು ಮಾಡಬೇಕು. ಶಾಂತಿ, ಸೌಹಾರ್ದತೆ, ನೆಮ್ಮದಿ ಅಷ್ಟೇ ನಮಗೆ ಬೇಕು. ಅದನ್ನು ನೋಡಿಕೊಂಡು ಪಾಲಿಟಿಕ್ಸ್ ಮಾಡಬೇಕು. ಮುಖ್ಯ ವಾಹಿನಿಯ ಪಾಲಿಟಿಕ್ಸ್ ಇಲ್ಲಾಂದ್ರೆ ನಮಗೆ ಭವಿಷ್ಯ ಇರಲ್ಲ ಎಂದರು.
ಸ್ಪರ್ಧೆ ಯಾಕೆ ಬೇಕು, ನಾವು ಸಹಕಾರ ಮಾಡಿಕೊಳ್ಳಬೇಕು. ಬುಡಕಟ್ಟು ಸಂಸ್ಕೃತಿಯಲ್ಲಿ ಸ್ಪರ್ಧೆ ಇಲ್ಲ. ಮಕ್ಕಳಲ್ಲಿ ನಾವು ಸ್ಪರ್ಧೆ ಭಾವನೆಯನ್ನು ಹೋಗಲಾಡಿಸಬೇಕು. ಸಹಕಾರದ ಭಾವನೆ ಬೆಳೆಸಬೇಕು. ನನ್ನ ಕೆಲಸ ಮುಗಿದಿಲ್ಲ. ಸಾಮರಸ್ಯ, ಸಮಾನತೆಯನ್ನು ನಂಬುವವರು ಈ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.


ನಂಬದೇ ಇರೋರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರೀತಿ ಇರೋರು ಮಂಗಳೂರನ್ನು ಕಟ್ಟಬೇಕು. ನಾವೆಲ್ಲ ದೇಶ, ಸಮಾಜಕ್ಕೆ ಅಲ್ಲ. ಮಕ್ಕಳಿಗೋಸ್ಕರ ಒಳ್ಳೆ ಸಮಾಜ ಕೊಡದೆ ಇದ್ದರೆ ಹೇಗೆ. ನಾವು ಒಟ್ಟಿಗೆ ಸೇರಬೇಕು. ಸಾಮರಸ್ಯದ ಸಂಸ್ಕೃತಿಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಅವರು ನುಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಾಮಾಜಿಕ ಚಿಂತಕಿ ಹಾಗೂ ಸಾಹಿತಿ ಆಯಿಶಾ ಫರ್ಝಾನಾ ಯು.ಟಿ., ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ,
ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ಸಂತ ಮದರ್ ತೆರೇಸಾ ವಿಚಾರ ವೇದಿಕೆ ಖಜಾಂಚಿ ಡೋಲ್ಫಿ ಡಿಸೋಜ, ಮಾಧ್ಯಮ ಸಮಿತಿ ಸಂಚಾಲಕ ಸ್ಟಾನಿ ಡಿಕುನ್ನಾ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಉಪಾಧ್ಯಕ್ಷ ಇಲಿಯಾಸ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು