ಇತ್ತೀಚಿನ ಸುದ್ದಿ
ನಾನು ಯಾವುದೇ ರೇಸ್ ನಲ್ಲಿ ಇಲ್ಲ, ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ: ಮಂಗಳೂರಿನಲ್ಲಿ ಬಿ.ಕೆ. ಹರಿಪ್ರಸಾದ್
03/09/2024, 14:39
ಮಂಗಳೂರು(reporterkarnataka.com): ನಾನು ಯಾವುದೇ ರೇಸ್ ನಲ್ಲಿ ಇಲ್ಲ,ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ,ಕತ್ತೆಯೂ ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ರೇಸ್ ಆರಂಭವಾಗಿದೆ ಎಂಬ ಪ್ರಶ್ನೆಗೆ ಹರಿಪ್ರಸಾದ್ ಅವರು ಮಂಗಳೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದರು.
ಮಾಧ್ಯಮದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,
ನಮ್ಮ ನಾಯಕರು ಉತ್ತರಗಳನ್ನ ಕೊಡ್ತಿದ್ದಾರೆ.
ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ ಅವೆಲ್ಲ ತೀರ್ಮಾನ ಆಗೋದು. ಸಿದ್ದರಾಮನವರ ಈ ಪ್ರಕರಣ ಏನಾಗುತ್ತೆ ನೋಡೋಣ ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ, ತೀರ್ಪು ಬರೋತ್ತೋ, ಇಲ್ವಾ ಗೊತ್ತಿಲ್ಲ ಎಂದರು.
ಇದು ಕಾನೂನಿನ ಹೋರಾಟ, ಕಾನೂನು ಹೋರಾಟ ನಡೆಯುವ ವೇಳೆ ಏನೇ ಮಾತನಾಡಿದರೂ ನ್ಯಾಯಾಂಗ ನಿಂದನೆ ಆಗುತ್ತದೆ. 135 ಜನ ಶಾಸಕರಿದ್ದಾರೆ, ಇಂಗ್ಲೀಷಲ್ಲಿ ವನ್ ಎಮಾಂಗ್ ಈಕ್ವಲ್ಸ್ ಅಂತಾರೆ. ಹೀಗಾಗಿ ಅವರ ಅವರ ಅನಿಸಿಕೆ ಅವರವರು ಹೇಳ್ತಾರೆ ಎಂದು ಹರಿಪ್ರಸಾದ್ ನುಡಿದರು.
ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಅಸ್ಪದ ಇದೆ. ಅದನ್ನ ಹೇಳ್ತಾ ಇದ್ದಾರೆ. ನಾನು ಯಾವುದೇ ರೇಸ್ ನಲ್ಲಿ ಇಲ್ಲ,ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ,ಕತ್ತೆಯೂ ಅಲ್ಲ ಎಂದು ಅವರು ಹೇಳಿದರು.
ಕೋವಿಡ್ ಹಗರಣದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ವಿಚಾರ ಮಾತನಾಡಿದ ಅವರು,
ಸುಧಾಕರ್ ಅವರು ಆರೋಗ್ಯ ಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ.
ವ್ಯಾಕ್ಸಿನ್ ಅವ್ಯವಸ್ಥೆ ಹೇಗಿತ್ತು ಅನ್ನೋದನ್ನ ಜನ ನೋಡಿದ್ದಾರೆ. ಕೋವಿಡ್ ಬಂದಾಗ ಒಳ್ಳೆಯ ಹೋಟೇಲ್ ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ದನ್ನು ನೋಡಿದ್ದೀವಿ. ಅದರ ಬಗ್ಗೆ ಅವರು ಮಾತನಾಡದೇ ಇರೋದು ಒಳ್ಳೆಯದು.
ವರದಿ ಏನು ಬಂದಿದೆ ಅದರಲ್ಲಿ ಏನ್ ಸತ್ಯ ಇದೆ, ಅದು ಹೊರಗಡೆ ಬರಲಿ. ತಪ್ಪಾಗಿದ್ರೆ ಅವರು ಶಿಕ್ಷೆ ಅನುಭವಿಸಲು ಮುಂದಾಗಲಿ ಎಂದು ರಾಜ್ಯಸಭಾ ಮಾಜಿ ಸದಸ್ಯರೂ ಆದ ಬಿ.ಕೆ.ಹರಿ ಪ್ರಸಾದ್ ನುಡಿದರು.