8:25 AM Wednesday25 - December 2024
ಬ್ರೇಕಿಂಗ್ ನ್ಯೂಸ್
ಸಿ.ಟಿ. ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ; ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ನಾಯಕ… ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ?: ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಸಿ.ಟಿ.ರವಿ ವಿರುದ್ಧ ಕಾನೂನು ಸಮರ; ಪ್ರಧಾನಿ, ರಾಷ್ಟ್ರಪತಿಗೂ ದೂರು ನೀಡುವೆ: ಸಚಿವೆ ಲಕ್ಷ್ಮೀ… ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಜನವರಿ 17-23 ಕರ್ನಾಟಕ ಕ್ರೀಡಾಕೂಟ-2025: ವ್ಯವಸ್ಥಿತವಾಗಿ ನಡೆಸಲು ಸಿಎಂ… ಸರಕಾರ ರೈತರ ಪರವಾಗಿದೆ: ಚನ್ನರಾಯಪಟ್ಟಣ ರೈತ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ

ಇತ್ತೀಚಿನ ಸುದ್ದಿ

ಇಂಡಿಯಾನ ಆಸ್ಪತ್ರೆ ಹಾಗೂ ಹೃದಯ ಚಿಕಿತ್ಸಾ ಕೇಂದ್ರದಲ್ಲಿ ‘ಇಂಡಿಯಾನಾ ಕ್ಯಾನ್ಸರ್ ಸೆಂಟರ್’ ಉದ್ಘಾಟನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ

30/08/2024, 21:53

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಇಂಡಿಯಾನಾ ಆಸ್ಪತ್ರೆಯು ಲಾಭಗಳಿಸುವ ಉದ್ದೇಶ ಮತ್ತು ಯೋಚನೆಯಿಲ್ಲದೆ ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.


ನಗರದ ಪಂಪ್‌ವೆಲ್‌ ಬಳಿಯ ಇಂಡಿಯಾನ ಆಸ್ಪತ್ರೆ ಹಾಗೂ ಹೃದಯ ಚಿಕಿತ್ಸಾ ಕೇಂದ್ರದಲ್ಲಿ ಶುಕ್ರವಾರ ‘‘ಇಂಡಿಯಾನಾ ಕ್ಯಾನ್ಸರ್ ಸೆಂಟರ್’’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಒಳ್ಳೆಯ ಆಸ್ಪತ್ರೆಗಳ ಅವಶ್ಯಕತೆ ಯಾವಾಗಲೂ ಇದ್ದು, 13 ವರ್ಷದಿಂದ ಇಂಡಿಯಾನಾ ಆಸ್ಪತ್ರೆಯು ಸೇವಾ ಮನೋಭಾವದ ಮೂಲಕ ಅತ್ಯುನ್ನತ ಸೇವೆಯನ್ನು ಜನರಿಗೆ ನೀಡುತ್ತಿದೆ ಎಂದು ಸಚಿವರು ಶ್ಲಾಘಿಸಿದರು.
ಕೇವಲ ದಕ್ಷಿಣ ಕನ್ನಡ ಜನತೆ ಮಾತ್ರವಲ್ಲದೆ ಎಲ್ಲರೂ ಇಂಡಿಯಾನಾ ಆಸ್ಪತ್ರೆಯ ಉಪಯೋಗ ಪಡೆಯುವಂತಾಗುತ್ತದೆ. ಉತ್ಕೃಷ್ಟ ಮಟ್ಟದ ಚಿಕಿತ್ಸೆಗಾಗಿ ಜನರು ಹುಡುಕಾಡುತ್ತಾರೆ. ಅದನ್ನು ಒದಗಿಸಲು ಇಂಡಿಯಾನಾ ಸಿದ್ದವಾಗಿದೆ. ಚಿತ್ರದುರ್ಗದಂತಹ ರಿಮೋಟ್ ಏರಿಯಾದಲ್ಲಿ ಆಸ್ಪತ್ರೆ ನಿರ್ಮಿಸುವ ಮೂಲಕ ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶವನ್ನು ನಾವು ಗಮನಿಸಬಹುದು. ಇಂಡಿಯಾನದ ಯೂಸುಫ್ ಕುಂಬ್ಳೆಯವರ ಇಡೀ ಕುಟುಂಬ ವೈದ್ಯರಾಗಿರುವುದ್ದರಿಂದ ಇದೊಂದು ಕುಟುಂಬ ನಡೆಸುತ್ತಿರುವ ಆಸ್ಪತ್ರೆಯಾಗಿದೆ. ಅಂತಹ ಸಂದರ್ಭದಲ್ಲಿ ಜನರಿಗೆ ಇನ್ನು ಹತ್ತಿರವಾಗಲು ಸಾಧ್ಯವಾಗುವ ಜತೆಗೆ ಕಾರ್ಪೋರೇಟ್ ಸಂಸ್ಥೆ ರೀತಿ ಬಿಸಿನೆಸ್ ಬಗ್ಗೆ ಚಿಂತಿಸದೆ ಜನರ ನೋವಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಇಂಡಿಯಾನ ಆಸ್ಪತ್ರೆ ಎಂದರೆ ನಂಬಿಕೆ ಎಂಬುವುದು ಜನರ ಮನಸ್ಸಲ್ಲಿದೆ. ಇಲ್ಲಿಗೆ ಬಂದರೆ ನಮಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವ ನಂಬಿಕೆಯಿದೆ. ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ ಕೇರ್ ಕಿಮೋ ಸೆಂಟರ್‌ಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಉದ್ಘಾಟಿಸಲಿದ್ದಾರೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಯವರು ಒಟ್ಟಿಗೆ ಸೇರಿ ಜನರಿಗೆ ಅಗತ್ಯವಾದ ಚಿಕಿತ್ಸೆಯನ್ನು ನೀಡುವಂತಹ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದರು.


ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 13 ವರ್ಷಗಳ ಹಿಂದೆ ಸಣ್ಣದಾಗಿ ಆರಂಭವಾದ ಇಂಡಿಯಾನ ಆಸ್ಪತ್ರೆ ಇಂದು ಆರೋಗ್ಯ ಸೇವೆಯಲ್ಲಿ ಉತ್ತಮ ಆಸ್ಪತ್ರೆಯಾಗಿ ಬೆಳೆದಿದೆ. ಇದೀಗ ಕರಾವಳಿಯ ಜನರಿಗೆ ಕ್ಯಾನ್ಸರ್ ರೋಗಗಳಿಗೆ ಉತ್ಕೃಷ್ಟ ಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡುವ ನಿಟ್ಟಿನಲ್ಲಿ ಸುಧಾರಿತ ಹಾಗೂ ಸುಸಜ್ಜಿತ ಸೇವೆಗಾಗಿ ಕ್ಯಾನ್ಸರ್ ಸೆಂಟರನ್ನು ಆರಂಭಿಸುತ್ತಿದ್ದು, ಇದು ಅತ್ಯಾಧುನಿಕವಾದ ಚಿಕಿತ್ಸೆ ಪದ್ದತಿಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.






ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್. ತಿಮ್ಮಯ್ಯ, ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಫರೀದ್, ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ವೈದ್ಯಕೀಯ ಆಡಳಿತ ನಿರ್ದೇಶಕ ಡಾ. ಆದಿತ್ಯ ಭಾರಧ್ವಜ್, ಸಿಇಒ ವಿಜಯಚಂದ್ರ ಇ.,
ಗೈನಕಾಲಜಿಸ್ಟ್ ಡಾ. ಸಂಗೀತಾ ಕೆ. ಶುಭಹಾರೈಸಿದರು.



ವೈದ್ಯಕೀಯ ನಿರ್ದೇಶಕ ಡಾ. ಅಪೂರ್ವ, ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಅಜಯ್ ಕುಮಾರ್, ರೇಡಿಯೇಷನ್ ಆಂಕಾಲಜಿಸ್ಟ್ ಡಾ. ಕೃಷ್ಣರಾಜ್ ಎಚ್.ಆರ್. ಉಪಸ್ಥಿತರಿದ್ದರು. ಸಂಸ್ಥೆಯ ಚೇರ್‌ಮೆನ್ ಡಾ. ಅಲಿ ಕುಂಬ್ಳೆ ಸ್ವಾಗತಿಸಿದರು. ಮೆಡಿಕಲ್ ಆಂಕಾಲಜಿ ವಿಭಾಗದ ಡಾ. ರಮಾನಾಥ ಶೆಣೈ ವಂದಿಸಿದರು. ಕ್ವಾಲಿಟಿ ಮ್ಯಾನೇಜರ್ ನಿಧಿ ಶಾ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು