ಇತ್ತೀಚಿನ ಸುದ್ದಿ
ಬಂಡಾಜೆ ಫಾಲ್ಸ್ ಗೆ 200ಕ್ಕೂ ಅಧಿಕ ಪ್ರವಾಸಿಗರಿಗೆ ಟಿಕೆಟ್ ಇಲ್ಲದೆ ಪ್ರವೇಶ: ಸರಕಾರದ ಹಣ ಫೋನ್ ಪೇ ಮೂಲಕ ಯುವತಿಗೆ ಖಾತೆಗೆ; ಡಿಆರ್ ಎಫ್ ಓ ಅಮಾನತು
27/08/2024, 13:11
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಣಿಝರಿ ಜಲಪಾತ,ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಪಾಲ್ಸ್ ಪ್ರವೇಶಕ್ಕೆ ಅವಕಾಶ ನೀಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಸರಕಾರದ ಬೊಕ್ಕಸ ಸೇರಬೇಕಾದ ಹಣ ಫೋನ್ ಪೇ ಮೂಲಕ ಯುವತಿಯೊಬ್ಬಳ ಖಾತೆಗೆ ಜಮೆಯಾಗಿರುವುದು ಪತ್ತೆಯಾಗಿದೆ.
ಸದ್ಯದ ಮಟ್ಟಿಗೆ ಸರಕಾರದ 9 ಸಾವಿರ ಹಣ ಯುವತಿಯ ಖಾತೆಗೆ ಜಮಾವಾಗಿದೆ. ಪ್ರಕರಣ ಸಂಬಂಧ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತು ಮಾಡಲಾಗಿದೆ. ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಲಾಗಿದೆ. ಇಲಾಖೆಯಿಂದ ಲಕ್ಷಗಟ್ಟಲೇ ಹಣ ಯುವತಿಯ ಖಾತೆಗೆ ಜಮಾವಾಗಿರೋ ಅನುಮಾನವಿದೆ.
ಬಂಡಾಜೆ ಫಾಲ್ಸ್ ಬಳಿ 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಪಾಲ್ಸ್ ಪ್ರವೇಶ ಪಡೆದಿದ್ದರು.
ಮದ್ಯ ಚೆಕ್ ಮಾಡಲು ಹೋಗಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
ಜೂನ್ ತಿಂಗಳ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ.
ನಕಲಿ ಆನ್ ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಮೋಸ ಮಾಡಿರೋ ಬಗ್ಗೆ ಇಲಾಖೆಗೆ ಅನುಮಾನ ಉಂಟಾಗಿದೆ.
ಕೊಪ್ಪ ಡಿಎಫ್ ಓ ಉಪೇಂದ್ರ ಪ್ರತಾಪ್ ಸಿಂಗ್ ಅವರು ಕಳಸ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತು ಮಾಡಿದ್ದಾರೆ.