ಇತ್ತೀಚಿನ ಸುದ್ದಿ
ಕೂಡ್ಲಿಗಿ: ಬಾಣದ ವಂಶಸ್ಥ ಕುಟುಂಬದವರಿಂದ ಶ್ರೀಊರಮ್ಮದೇವಿಗೆ ಶ್ರಾವಣ ಪರ್ವ ಪ್ರಸಾದ ಸೇವೆ
13/08/2024, 21:24
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಗೆ, ಶ್ರಾವಣ ಮಾಸದ ಮಂಗಳವಾರ ಪ್ರಯುಕ್ತ ಪ್ರಸಾದ ಪರ್ವ ಜರುಗಿತು.
ಪಟ್ಟಣದ 16ನೇ ವಾರ್ಡ್ ನಿವಾಸಿಗಳಾದ ವಾಲ್ಮೀಕಿ ಸಮುದಾಯದ” ಬಾಣದ ಮನೆತನದ” ಕುಟುಂಬಸ್ಥರಿಂದ, ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ ನಡೆಯಿತು. ಶ್ರೀಊರಮ್ಮ ದೇವಿಗೆ ಶ್ರಾವಣ ಪರ್ವ ವಿಶೇಷ ಪೂಜೆ, ಪರ್ವ ಪ್ರಸಾದ ಸೇವೆ ನೆರವೇರಿಸಲಾಯಿತು. ಬಾಣದ ವಂಶಸ್ಥ ಕುಟುಂಬದವರು, ಹಲವು ವರ್ಷಗಳಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಪರ್ವ ಪ್ರಸಾದ ಸೇವೆ ಜರುಗಿಸುತ್ತಾರೆ. ವಾಲ್ಮೀಕಿ ಸಮುದಾಯದ ಬಾಣದ ವಂಸ್ಥರ ಕುಟುಂಬದವರು ಸಾಮೂಹಿಕವಾಗಿ ಸಹಭಾಗಿತ್ವದೊಂದಿಗೆ, ಪ್ರತಿ ವರ್ಷದ ಶ್ರಾವಣ ಮಾಸದ ಮಂಗಳವಾರದಂದು. ಶ್ರೀಊರಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಪರ್ವ ಪ್ರಸಾದ ಸೇವೆ ನೆರವೇರಿಸುತ್ತಿದ್ದಾರೆ, ಅಂತೆಯೇ ಇಂದು ಶ್ರವಣ ಮಾಸದ ಮಂಗಳವಾರದಂದು ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ. ವಿಶೇಷ ಪರ್ವ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು, ಪ್ರಸಾದ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರು ಸೇರಿದಂತೆ. ಸುತ್ತ ಮತ್ತಲಿನ ಕೆಲವು ಗ್ರಾಮಗಳಲ್ಲಿನ ನೂರಾರು ಭಕ್ತರು, ನಾಗರೀಕರು ಹಿರಿಯರು ಮಹಿಳೆಯರು ಮಕ್ಕಳು. ಶ್ರೀಊರಮ್ಮ ದೇವಿಯ ದರ್ಶನ ಪಡೆದು ನಂತರ, ದೇವಸ್ಥಾನದ ಆವರಣದಲ್ಲಿನ ಪರ್ವದಲ್ಲಿ ಭಾಗವಿಹಿಸಿ ಪ್ರಸಾದ ಸ್ವೀಕರಿಸಿದರು. ಬಾಣದ ಮನೆತನದ ಕುಟುಂಬಸ್ಥರು ಎಲ್ಲಾ ಹಿರಿಯರು, ಅವರ ನೆಂಟರು ಬಂಧು ಬಳಗ ಸ್ನೇಹಿತರು ಹಿತೈಷಿಗಳು. ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ, ಪ್ರಸಾದ ಪರ್ವದಲ್ಲಿ ಸಕ್ತೀಯವಾಗಿ ಪಾಲ್ಗೊಂಡು, ಪರ್ವ ಪ್ರಸಾದ ಸೇವೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.