3:29 AM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ:  7 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಗದ್ಗುರು ಶ್ರೀ ಭಾರತೀತೀರ್ಥ ಸಭಾಭವನ ಉದ್ಘಾಟನೆ

26/08/2021, 10:52

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಮಾನವ ವಿರೋಧಿ ನಿಲುವು ಹೊಂದಿರುವ ಯಾವುದೇ ಧರ್ಮವನ್ನು, ಧರ್ಮವೆಂದು ಕರೆಯಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಶಂಕರ ಮಠದ ಸಮೀಪ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಗದ್ಗುರು ಶ್ರೀ ಭಾರತೀತೀರ್ಥ ಸಭಾಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂ ಧರ್ಮ ನಂಬಿಕೆಗಳ ಹುತ್ತ, ಕುಲಗಳ ಬೆಟ್ಟ. ಶಾಂತಿ ಬೋಧನೆ ಯಾವುದೇ ಧರ್ಮದ ಮುಖ್ಯ ಉದ್ದೇಶ ಎಂದು ಹೇಳಿದರು. 

‘ನನಗೆ ಮುಖ್ಯ ಮಂತ್ರಿಯಾಗಬೇಕು, ಇನ್ನೇನೋ ಆಗಬೇಕು ಎಂಬ ಆಸೆ ಇಲ್ಲ. ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿದ ನಾನು, ಕ್ಷೇತ್ರದ ಎಲ್ಲ ಸಮುದಾಯದ ಜನರ ಆಶೀರ್ವಾದಿಂದ ಈಗಾಗಿರುವುದೇ ಸಾಕು. ಆದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದಂತೆ ಎರಡು ನೀರಿನ ಯೋಜನೆಗಳು ಅಪೂರ್ಣವಾಗಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮಾತ್ರ ಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ಧರ್ಮದ ಮೂಲ ಉದ್ದೇಶ ಪರೋಪಕಾರ. ಸಮಾಜದಲ್ಲಿ ಒಳ್ಳೆಯದನ್ನು ಬೆಳೆಸುವುದೇ ಧರ್ಮ. ಹಂಚಿಕೊಂಡು ಬಾಳುವುದನ್ನು ಕಲಿತಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣದಲು ಸಾಧ್ಯವಾಗುತ್ತದೆ. ಧರ್ಮಪುರಿ ನರೇಂದ್ರ ಸೋಮಯಾಜಿ, ಆರ್.ಎಸ್.ಪ್ರಕಾಶ್, ಜಿ.ಕೃಷ್ಣ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ ವ್ಯಕ್ತಿಗಳನ್ನು ಸ್ಮರಿಸಿದರು. ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.

ವೆಲ್ಲಾಲ ಸತ್ಯನಾರಾಯಣ ಸಾಸ್ತ್ರಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್,ವೈ. ಆರ್. ಶಿವಪ್ರಕಾಶ್, ದಿಂಬಾಲ ಅಶೋಕ್, ಎನ್.ಬಿ.ಬ್ಯಾಟಪ್ಪ, ಡಿ.ಸತ್ಯಮೂರ್ತಿ, ಕೆ.ದಿವಾಕರ್, ಟಿ.ಎಸ್.ಮಾಯಾ ಬಾಲಚಂದ್ರ, ಮಂಗಳ ಸತ್ಯಮೂರ್ತಿ, ಎಲ್.ಕೆ.ಶ್ರೀನಿವಾಸಮೂರ್ತಿ, ಜಿ.ಗೋವಿಂದಗೌಡ, ಸುಬ್ರಮಣಿ, ಶಿವಶಂಕರ್, ಕಾಣಿ ಪಾಕಂ ಸ್ವಾಮಿ ಗಣೇಶ್, ಜೆ.ಕೆ.ಮಂಜುನಾಥ್, ಶ್ರೀನಿವಾಸ್, ಎಸ್ ವೇಣುಗೋಪಾಲ್, ಎಸ್ಆಶಾ, ಸುಧೀಂದ್ರ, ಸತೀಶ್ ಶಾಸ್ತ್ರಿ ಎನ್ ಅರುಣ್ ಕುಮಾರ್ ಶರ್ಮ,ದಿವಾಕರ್

ಸುಧಾಕರ್, ಜನತಾ ಕ್ಯಾಂಟೀನ್ ಮಂಜು ರಾಘವೇಂದ್ರಭವನ್ ಶ್ರೀ ನಿವಾಸ್,ಚಂದ್ರಶೇಖರ್, ಕೆ.ರಾಘವೇಂದ್ರ ಗುರುರಾಜರಾವ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು