9:55 AM Sunday18 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಸ್ನೇಹಾಲಯದಲ್ಲಿ ಮೊಹರಂ ಉಡುಗೊರೆ: 6 ವರ್ಷಗಳ ನಂತರ ಹೃದಯ ಸ್ಪರ್ಶಿ ಪುನರ್ಮಿಲನ

20/07/2024, 16:05

ಮಂಗಳೂರು(reporterkarnataka.com):ಜುಲೈ 18, 2024 ರಂದು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರವು ಒಂದು ಹೃದಯ ಸ್ಪರ್ಶಿಸುವ ಪುನರ್ಮಿಲನವನ್ನು ಆಚರಿಸಿತು. ನವೆಂಬರ್ 9, 2019 ರಂದು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಿಂದ ಮಾನಸಿಕ ಅಸ್ವಸ್ಥ ಯುವಕನನ್ನು ಕೇಂದ್ರವು ರಕ್ಷಿಸಿ ಸ್ನೇಹಾಲಯದಲ್ಲಿ ಸೇರಿಸಲಾಗಿತ್ತು. ದಾಖಲಾತಿಯ ಸಮಯದಲ್ಲಿ ಆತನ ಮಾನಸಿಕವಾಗಿ ಅತೀ ರೇಗಾಟದ ಸ್ಥಿತಿಯಲ್ಲಿ ಇದ್ದುದರಿಂದ ಅವನ ಗುರುತನ್ನು ತಿಳಿಯಲು ಸಾಧ್ಯವಾಗದೆ, ಅವನಿಗೆ ಬಬ್ಲು ಎಂದು ಹೆಸರಿಸಲಾಯಿತು. ಸ್ನೇಹಾಲಯದಲ್ಲಿ ಆತನಿಗೆ ಉತ್ತಮ ಆರೈಕೆಯನ್ನು ನೀಡಲಾಯಿತು.
ಅಧಿಕೃತ ದಾಖಲೆಗಳನ್ನು ಪಡೆಯುವ ಪ್ರಯತ್ನದಲ್ಲಿ, ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್‌ಗಾಗಿ ಬಬ್ಲು ಅವರ ಅರ್ಜಿಯನ್ನು ಸಲ್ಲಿಸಿದಾಗ ಆರಂಭದಲ್ಲಿ ಆಧಾರ್ ಸೇವಾ ಕೇಂದ್ರವು ಅದನ್ನು ತಿರಸ್ಕರಿಸಿತು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವರ ಹಳೆಯ ಆಧಾರ್ ವಿವರಗಳನ್ನು ಪರಿಶೀಲಿಸಿದಾಗ ಬಬ್ಲೂ ರವರ ನಿಜವಾದ ಗುರುತು ವಿವರಗಳನ್ನು ಪಡೆಯಲು ಸಾಧ್ಯವಾಯಿತು. ಅವರ ನಿಜವಾದ ಹೆಸರು ದಾವಲ್ಸಾಬ್ ದಾರುಬಾಯಿ ಎಂಬ ಮಾಹಿತಿ ದೊರಕಿತು. ಆಧಾರ್ ಕಾರ್ಡ್‌ನಲ್ಲಿರುವ ಸಂಪರ್ಕ ಸಂಖ್ಯೆ ಬ್ಲಾಕ್ ಆಗಿದ್ದರೂ ಹುಬ್ಬಳ್ಳಿ ಠಾಣೆ ಪೊಲೀಸರು ಆತನ ತಂದೆಯ ಸಂಪರ್ಕ ಸಂಖ್ಯೆ ಪಡೆಯಲು ಸಹಕರಿಸಿದರು ಹಾಗೂ ಆತನ ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.

6 ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ದಾವಲ್ಸಾಬ್‌ನ ಕುಟುಂಬವನ್ನು ಸಂಪರ್ಕಿಸಿದಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ವೀಡಿಯೊ ಕರೆಯು ಅವರ ಗುರುತನ್ನು ದೃಢಪಡಿಸಿತು ಹಾಗೂ ಪುಣ್ಯ ಮೊಹರಂ ದಿನದಂದು ಈ ಪ್ರಕ್ರಿಯೆ ಒಂದು ಭಾವನಾತ್ಮಕ ಪುನರ್ಮಿಲನಕ್ಕೆ ಕಾರಣವಾಯಿತು. ದಾವಲಸಾಬ್ ಅವರ ಪೋಷಕರು ಸ್ನೇಹಾಲಯ ತಂಡದ ಅವರ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಗೆ ಅಪಾರ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಈ ಕಥೆಯು ಸಹಾನುಭೂತಿ ಮತ್ತು ಪರಿಶ್ರಮದ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಸ್ನೇಹಾಲಯದ ಪ್ರಯತ್ನಗಳು ಕಳೆದುಹೋದ ಮಗನನ್ನು ಅವನ ಕುಟುಂಬಕ್ಕೆ ಹಿಂದಿರುಗಿಸುತ್ತದೆ, ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಬದ್ಧತೆಯನ್ನು ಸಾಕಾರಗೊಳಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು