3:35 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಉರ್ವ ವೇಲ್ಸ್ ಪೇಟೆ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಪುನರ್ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ

09/07/2024, 17:56

ಮಂಗಳೂರು(reporterkarnataka.com): ತುಳುನಾಡಿನಲ್ಲಿ ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳು ಕಾರಣಿಕ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಧಾರ್ಮಿಕ ಆಚರಣೆಗಳು ನಿರಂಂತರವಾಗಿ ಮುಂದುವರಿಯಬೇಕು. ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧವಾಗುತ್ತಿರುವ ಉರ್ವ ವೇಲ್ಸ್ ಪೇಟೆ‌ ಶ್ರೀ ಬಬ್ಬುಸ್ವಾಮಿ‌ ಕ್ಷೇತ್ರದ ಕಾರ್ಯಗಳಿಗೆ‌ ತನ್ನಿಂದಾದ ಅಗತ್ಯ ನೆರವು ಒದಗಿಸಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಅವರು ಸೋಮವಾರ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಉರ್ವ ವೇಲ್ಸ್ ಪೇಟೆ ಇಲ್ಲಿನ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ದೈವ ದೇವರ ಕೆಲಸ ಮಾಡುವುದೆಂದರೆ ಅದೊಂದು ಪುಣ್ಯದ ಕೆಲಸ. ಶಾಸಕನಾಗಿ ನನಗೂ ಹಲವು ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಕೂಡ ವೇಲ್ಸ್ ಪೇಟೆಯ ಬಬ್ಬುಸ್ವಾಮಿ‌ ಕ್ಷೇತ್ರದ ಅಭಿವೃದ್ಧಿಗೆ ನೆರವು ದೊರೆಯುವಂತಾಗಲಿ ಎಂದವರು ಹೇಳಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ‌ ಶುಭ ಹಾರೈಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಕ್ಷೇತ್ರದ ಗುರಿಕಾರ ಬಾಲಕೃಷ್ಣ ಯು.ಎಸ್‌. ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೋರೇಟರ್ ಗಳಾದ ಗಣೇಶ್ ಕುಲಾಲ್, ಕಿರಣ್ ಕುಮಾರ್ ಕೋಡಿಕಲ್, ಮನೊಜ್ ಕೋಡಿಕಲ್, ಸುರೇಖಾ ಶ್ರೀನಿವಾಸ್, ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೋಡಿಯಾಲ್ ಬೈಲ್, ಉರ್ವ ಮಾರಿಯಮ್ಮ ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಕೋಡಿಕಲ್ ಚಾಮುಂಡೇಶ್ವರಿ ಕ್ಷೇತ್ರದ ಪ್ರಮುಖರಾದ ದೀಪಕ್, ಪ್ರಮುಖರಾದ ಬಾಬಾ ಅಲಂಕಾರ್‌,ರಾಧಾಕೃಷ್ಣ ಅಶೋಕನಗರ, ಕೃಷ್ಣ ಅಡಿಗ, ರವಿ ಕಾಪಿಕಾಡ್, ಅಮಿತಕಲಾ, ಸುಧಾಕರ ಆಳ್ವ, ಅರುಣ್ ಉರ್ವ, ಭುಜಂಗ ಶ್ರೀಯಾನ್, ರಮಾನಾಥ ಶೆಟ್ಟಿ, ವಿಠೋಬಾ ನೆಲ್ಲಿಪಾಡಿ, ಉದ್ಯಮಿ ದೀಪಕ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಜೊತೆ ಕಾರ್ಯದರ್ಶಿ ರಘುವೀರ್ ಬಾಬು ಗುಡ್ಡೆ ಸ್ವಾಗತಿಸಿದರು. ರಘುವೀರ್ ಕದ್ರಿ ವಂದಿಸಿದರು. ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು