3:19 PM Monday13 - January 2025
ಬ್ರೇಕಿಂಗ್ ನ್ಯೂಸ್
ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ… ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ 5 ವರ್ಷಗಳಲ್ಲಿ 50,000 ಕೋಟಿ ಹೂಡಿಕೆ… ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ

ಇತ್ತೀಚಿನ ಸುದ್ದಿ

ದ.ಕ ಜಿಲ್ಲೆಯನ್ನು ಕಾಂಗ್ರೆಸ್ ಮಲಪ್ಪುರಂ ಮಾಡಲು ಹೊರಟಿದೆ: ಹರಿಕೃಷ್ಣ ಬಂಟ್ವಾಳ್ ಆರೋಪ

21/04/2024, 22:03

ಮಂಗಳೂರು(reporterkarnataka.com):ಕಳೆದ 33 ವರ್ಷಗಳಿಂದ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆ ಎತ್ತಲು ಇಲ್ಲಿನ ಮತದಾರರು ಬಿಟ್ಟಿಲ್ಲ. 33 ವರ್ಷಗಳಿಂದ ಬಿಜೆಪಿಯ ಅಭ್ಯರ್ಥಿಗಳು ಬಹುಮತದಿಂದ ಗೆಲುವು ಸಾಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆ ಕೆಲಸವನ್ನು ತುಳುನಾಡಿನ ಈ ಮಣ್ಣು, ಹಿಂದೂ ಬಾಂಧವರು ಮಾಡಿದ್ದಾರೆ. ಈ ಬಾರಿ ಚುನಾವಣೆ ತುಳುನಾಡಿಗೆ ಸವಾಲಿನ ಪ್ರಶ್ನೆಯಾಗಿದೆ. ಈಗಾಗಲೇ ತುಳುನಾಡು ಹಿಂದುತ್ವದ ನೆಲ, ಭದ್ರನೆಲ ಎಂದು ಕಾಂಗ್ರೆಸ್‌ನವರೇ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಈಗ ಹಿಂದುತ್ವದ ಕೋಟೆಯನ್ನು ಯಾವ ರೀತಿ ಒಡೆಯಬಹುದು, ಬಿರುರಕು ಹುಟ್ಟಿಸಬಹುದು ಎಂಬ ಬಗ್ಗೆ ತಂತ್ರಗಾರಿಕೆ ಮಾಡಿದೆ ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ ನಡೆಸಿರುವ ತಂತ್ರಗಾರಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಪತ್ರಿಕಾಗೋಷ್ಠಿಯ ಉದ್ದಕ್ಕೂ ತೀಕ್ಷ್ಣ ವಾಗ್ದಾಳಿ ನಡೆಸಿದರು. ಅವರು ಮಾತುಗಳ ಹೈಲೈಟ್ಸ್‌ ಇಲ್ಲಿದೆ:

* ಈ ಬಾರಿ ಯಾವತ್ತೂ ಇರದಂತಹ ಒಪ್ಪಂದಗಳು ಕಾಂಗ್ರೆಸ್ ಜತೆ ನಡೆದಿದೆ. ಇದು ರಹಸ್ಯವಾಗಿ ನಡೆದಿದೆ. ರಾಹುಲ್ ಗಾಂಧಿ ಜತೆ ಮುಸ್ಲಿಂ ಲೀಗ್ ಮತ್ತು ಎಸ್‌ಡಿಪಿಐ ಒಪ್ಪಂದ. ಇಡೀ ಕರ್ನಾಟದ ಹೆಬ್ಬಾಗಿಲು ಆಗಿರುವ ಹಿಂದುತ್ವದ ಶಕ್ತಿಯನ್ನು ದೇಶಕ್ಕೆ ತೋರಿಸಿರುವ ತುಳುನಾಡು ಕೋಟಿ ಚೆನ್ನಯರಂತಹ ಅದ್ಭುತ ಶಕ್ತಿಯ ನಾಡು., ಜಾತಿ ಮತ ಭಾಷೆಯನ್ನು ಮೀರಿ ನಿಂತ ತುಳುನಾಡು.

* ಹಿಂದುತ್ವದ ಅಲೆ ಇರುವ ಈ ಜಿಲ್ಲೆಯನ್ನು ಒಡೆಯುವ ತಂತ್ರ ಹೆಣೆದಿದೆ ಕಾಂಗ್ರೆಸ್. ಅದು ಕಾಂಗ್ರೆಸ್‌, ನಿಷೇಧಿತ ಪಿಎಫ್‌ಐನ ರಾಜಕೀಯ ಅಂಗ ಎಸ್‌ಡಿಪಿಐ ಮತ್ತು ಮುಸ್ಲಿಂ ಲೀಗ್ ಸೇರಿ ಈ ತಂತ್ರ ಮಾಡಿವೆ. ಕೇರಳದಲ್ಲಿ ಮಲಪ್ಪುರಂ ಯಾವ ರೀತಿ ಮುಸ್ಲಿಂ ಲೀಗಿನ ಜಿಲ್ಲೆ ಕಟ್ಟಿದ್ದಾರೆ, ಅಂತಹ ಒಂದು ಜಿಲ್ಲೆಯನ್ನು ಕರ್ನಾಟಕದಲ್ಲಿ ಕಟ್ಟಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ದುಕೊಂಡಿದ್ದಾರೆ.

* ಕರ್ನಾಟಕದ ಮಲಪ್ಪುರಂ ದ.ಕ. ಆಗಬೇಕು ಎನ್ನುವುದು ಕಾಂಗ್ರೆಸ್‌ನ ಷಡ್ಯಂತ್ರ. ಅದಕ್ಕಾಗಿ ಇಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರನ್ನು ಮೊದಲು ಒಡೆಯಬೇಕು, ಹಿಂದೂ ಬಿಲ್ಲವರು ಹಿಂದೂ ಕುಲಾಲರು, ಹಿಂದೂ ಬಂಟರು, ಮೊಗವೃಇರರು ಈರೀತಿ ಎಲ್ಲರ ಮಧ್ಯೆ ಒಂದು ಬಿರುಕು ಹುಟ್ಟಿಸಬೇಕು ಎಂದು ಕಾಂಗ್ರೆಸ್ ತಂತ್ರ ಹೆಣೆದಿದೆ. ಆ ಮೂಲಕ ಮುಸ್ಲಿಂ ಪ್ರಾಬಲ್ಯ ಮೆರೆಯ ಬೇಕು ಎನ್ನುವ ತಂತ್ರ.

* ರಾಹುಲ್ ಗಾಂಧಿ ಸ್ಪರ್ಧಿಸುವುದು ಕೇರಳದ ವಯನಾಡಿನಲ್ಲಿ. ಪಯನೀರ್ ಪತ್ರಿಕೆ ಅಲ್ಲಿನ ರಹಸ್ಯ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್ ಬೆಂಬಲ ನೀಡಬೇಕಾದರೆ ನಮ್ಮ ಎರಡು ವಿಚಾರಗಳನ್ನು ಒಪ್ಪಬೇಕು ಎಂದು ಷರತ್ತು ಹಾಕಿತು. ಅದು ಏನೆಂದರೆ., ಮೊದಲನೆಯದು, ವಯನಾಡಿನಲ್ಲಿ ಯಾವ ಸಂದರ್ಭದಲ್ಲೂ ಕಾಂಗ್ರೆಸ್‌ನ ಧ್ವಜವನ್ನು ಹಾರಿಸಬಾರದು. ಚಿಹ್ನೆಯನ್ನು ಜೇಬಲ್ಲಿಟ್ಟುಕೊಳ್ಳಿ, ಆದರೆ ಕಣ್ಣಿಗೆ ಕಾನುವಂತೆ ಪ್ರದರ್ಶಿಸಬಾರದು.

* ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಂದು ಪ್ರಶ್ನೆ ಎತ್ತಿದ್ದರು. ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಸ್ಪರ್ಧಿಸುವ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವಾಗ ಒಂದೇ ಒಂದು ಕಾಂಗ್ರೆ ಧ್ವಜ ಹಾರಲಿಲ್ಲ ಏಕೆ? ಅದರ ರಹಸ್ಯವೇನು? ಉದ್ದೇಶವೇನು ಎಂಬ ಪ್ರಶ್ನೆ ವಿಜಯನ್ ಎತ್ತಿದ್ದಾರೆ. ಅದನ್ನು ಪತ್ರಿಕೆಗಳು ವರದಿ ಮಾಡಿವೆ.

ರಾಹುಲ್ ಗಾಂಧಿ ವಯನಾಡಿನಲ್ಲಿ ಕಾಂಗ್ರೆಸ್ ಧ್ವಜವನ್ನು ಬಳಸಿಲ್ಲ ಏಕೆ? ಉತ್ತರ ಇಲ್ಲಿದೆ ನೋಡಿ:

* ಈ ದೇಶವನ್ನು 60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್‌ಗೆ ತನ್ನ ಪಕ್ಷದ ಧ್ವಜವನ್ನು ನಾಮಪತ್ರ ಸಲ್ಲಿಕೆ ಸಂದರ್ಭ ಹಾರಿಸಬಾರದು ಎಂಬ ಮುಸ್ಲಿಂ ಲೀಗ್‌ನ ಧಮಕಿಗೆ ರಾಹುಲ್ ಗಾಂಧಿ ಬಾಲಮುದುರಿ ಕುಳಿತಿದ್ದಾರೆ. ಉತ್ತರ ಭಾರತದ ಯಾವುದೇ ರಾಜ್ಯದಲ್ಲಿ ರಾಹುಲ್ ಗಾಂಧಿಗೆ ಗೆಲ್ಲುವ ಅವಕಾಶವೇ ಇಲ್ಲ. ಅಮೇಠಿಯಿಂದ ಓಡಿ ಬಂದ ರಾಹುಲ್ ಗೆ ಕರ್ನಾಟಕದಲ್ಲೂ ಚುನಾವಣೆಗೆ ನಿಲ್ಲುವ ಧೈರ್ಯವಿಲ್ಲ. ತಮ್ಮ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಸುಮಾರು 70 % ಮುಸ್ಲಿಮರಿರುವ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದಕ್ಕೆ ಒಳ ಒಪ್ಪಂದ ಬೇರೆ. ಕೇರಳದ ಕಾಂಗ್ರೆಸ್‌ನ ಅಧ್ಯಕ್ಷ ಹಸನ್ ಅವರಿಗೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ- ಹೌದು, ನಾವು ಪಕ್ಷದ ಧ್ವಜ ಬಳಸಬಾರದು ಆದರೆ ಪಕ್ಷದ ಚಿಹ್ನೆಯನ್ನು ಕಿಸೆಯಲ್ಲಿ ಇಟ್ಟುಕೊಂಡು ಹೋಗಬಹುದು ಅಷ್ಟು ಮಾತ್ರ ನಾನು ಹೇಳಬಲ್ಲೆ ಎಂದು ಉತ್ತರಿಸುತ್ತಾರೆ. ಕರ್ನಾಟಕದಲ್ಲಿ ಈ ಅವಕಾಶ ಮಾಡಿಕೊಡಬೇಕು ಎಂಬುದು ರಾಹುಲ್ ಗಾಂಧಿ ಮತ್ತು ಮುಸ್ಲಿಂ ಲೀಗ್ ಮಾಡಿಕೊಂಡ ಒಪ್ಪಂದ. ಇವತ್ತು ನಾವೆಲ್ಲ ನೋಡುತ್ತಿದ್ದೇವೆ.

* ದಕ್ಷಿಣ ಕನ್ನಡ ಜಿಲ್ಲೆ ಎಂದರೆ ತುಳವರ ಒಗ್ಗಟ್ಟಿನ ಜಿಲ್ಲೆ. ಅದರಲ್ಲಿ ಬಂಟರು, ಬಿಲ್ಲವರು, ಮೊಗವೀರರು, ಕುಲಾಲರು, ಗಾಣಿಗರು, ದೇವಾಡಿಗರು, ಪರಿಶಿಷ್ಟ ಜಾತಿ ವರ್ಗದವರು, ವಿಶ್ವಕರ್ಮರು, ಬ್ರಾಹ್ಮಣರು, ಕೊಂಕಣಿಗರು ಎಲ್ಲರೂ ತುಳುನಾಡಿನಲ್ಲಿ ಇದ್ದಾರೆ. ಇದು ಹಿಂದುತ್ವದ ಬಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

* ಚುನಾವಣೆ ಕಾವು ಪ್ರಾರಂಭ ಆಗುವ ಮೊದಲು ಸಿದ್ದರಾಮಯ್ಯ ಕಟು ಟೀಕಾಕಾರ ಬಿ.ಕೆ. ಹರಿಪ್ರಸಾದ್ ಒಂದು ಹೇಳಿಕೆ ನೀಡಿದರು- ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರ ಕೋಟೆಯನ್ನು ನಾನು ಪುಡಿ ಪುಡಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು. ಅದು ಎಲ್ಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಅದೇ ವ್ಯಕ್ತಿ ಪಾಕಿಸ್ತಾನ ನಮ್ಮ ಶತ್ರುವಲ್ಲ, ಅದು ಬಿಜೆಪಿಗೆ ಮಾತ್ರ ಶತ್ರು, ಕಾಂಗ್ರೆಸ್‌ಗೆ ಅಲ್ಲ ಎಂದಿದ್ದರು.

* ಇದನ್ನು ತುಳುನಾಡಿನ ಎಲ್ಲ ಮತದಾರರು ಅತ್ಯಂತ ಗಂಭೀರವಾಗಿ ಗಮನಿಸಬೇಕು. ಅದೇ ಹೊತ್ತಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಏನೆಂದರೆ- ಹಿಂದೂಗಳು ನಮ್ಮ ದೇಶಕ್ಕೆ ಬೆದರಿಕೆ ಎಂದು. ಅದಕ್ಕೆ ಪೂರಕವಾಗಿ ಡಿಎಂಕೆಯ ನಾಯಕಿ ಕನಿಮೊಳಿ ಹೇಳಿಕೆ- ಚೀನಾ ನಮ್ಮ ಶತ್ರುವಲ್ಲ. ಹೀಗೆ ಹೇಳಬೇಕಾದರೆ ಎಂತಹ ರಹಸ್ಯವಾದ ರಾಜಕೀಯ ವ್ಯೂಹವನ್ನು ಇವರು ರಚಿಸಿಕೊಂಡಿದ್ದಾರೆ ಎಂಬುದನ್ನು ಈ ನಾಡಿನ ಪ್ರಜ್ಞಾವಂತ ಮತದಾರರೆಲ್ಲ ಗಮನಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು