4:48 AM Monday20 - May 2024
ಬ್ರೇಕಿಂಗ್ ನ್ಯೂಸ್
ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;…

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿಯಲ್ಲಿ ಜಟಿಲಗೊಳ್ಳುತ್ತಿರುವ ಟ್ರಾಫಿಕ್ ಸಮಸ್ಯೆ: ಪರಿಸ್ಥಿತಿಯನ್ನು ಬಿಗಡಾಯಿಸಿದ ಹೊಸ ಪ್ರಯೋಗಗಳು

16/04/2024, 13:20

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಒಂದು. 80ರ ದಶಕದ ಬಳಿಕ ಮಂಗಳೂರಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಗರ ಕೇಂದ್ರದ ಸುತ್ತಮುತ್ತಲಿನ 5 ಕಿಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸ್ಫೋಟಗೊಂಡಿದೆ. ಈ ಸ್ಫೋಟಕ್ಕೆ ಇಲ್ಲಿನ ಮೂಲಭೂತ ಸೌಲಭ್ಯಗಳು ಸಾಕಾಗದೆ ನಗರ ನಲುಗುತ್ತಿದೆ. ಇವುಗಳ ಪೈಕಿ ಟ್ರಾಫಿಕ್ ಸಮಸ್ಯೆಯೂ ಒಂದಾಗಿದೆ.
ಮಂಗಳೂರಿನ ಟ್ರಾಫಿಕ್ ಸಮಸ್ಯೆಗೆ ದಶಕಗಳ ಇತಿಹಾಸವಿದೆ. ಇಲ್ಲಿನ ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿಗಳು ಬದಲಾದಗಳೆಲ್ಲ ಟ್ರಾಫಿಕ್ ವ್ಯವಸ್ಥೆಯ ಅಪ್ ಡೇಟ್ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಂದು ಸಕ್ಸಸ್ ಆಗುತ್ತದೆ. ಇನ್ನೂ ಕೆಲವು ಅಪ್ ಡೇಟ್ ಗಳು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.
80ರ ದಶಕದಲ್ಲಿ ಮಂಗಳೂರಿನಲ್ಲಿ ಅಭಿವೃದ್ದಿ ಶೆಕೆ ಆರಂಭವಾದಾಗಲೇ ಅದರ ಸೂಕ್ಷತೆಯನ್ನು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನಾ ಅವರು ಗ್ರಹಿಸಿದ್ದರು. ಇದರ ಪರಿಣಾಮವಾಗಿ ಹಂಪನಕಟ್ಟೆಯಲ್ಲಿ ಗುಬ್ಬಚ್ಚಿ ಗೂಡು ತರಹ ಇದ್ದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ಬಿಜೈಗೆ ಹಾಗೂ ಸರ್ವಿಸ್ ಬಸ್ ನಿಲ್ದಾಣವನ್ನು ಸ್ಟೇಟ್ ಬ್ಯಾಂಕ್ ಬಳಿಯ ಹಾಕಿ ಗ್ರೌಂಡ್ ಗೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಿಸಿದ್ದರು. ಭರತ್ ಲಾಲ್ ಮೀನಾ ನಂತರ ವರ್ಗಾವಣೆಯಾಗಿ ಹೋದರು. ಆದರೆ ನಂತರ ಅಧಿಕಾರಕ್ಕೆ ಬಂದ ಇಲ್ಲಿನ ಶಾಸಕರು, ಸ್ಥಳೀಯಾಡಳಿತ ಖಾಸಗಿ ಸರ್ವಿಸ್ ಬಸ್ ನಿಲ್ದಾಣವನ್ನು ಮರೆತೇ ಬಿಟ್ಟರು. ಸುಮಾರು 4 ದಶಕಗಳಿಂದ ಈ ಸರ್ವಿಸ್ ಬಸ್ ನಿಲ್ದಾಣ ತಾತ್ಕಾಲಿಕ ನೆಲೆಯಲ್ಲಿ ಹಾಕಿ ಗ್ರೌಂಡ್ ನಲ್ಲಿ ಖಾಯಂ ಆಗಿ ನಿಂತಿದೆ. ಇಲ್ಲಿಂದಲೇ ಎಲ್ಲ ಟ್ರಾಫಿಕ್ ಸಮಸ್ಯೆ ಶುರುವಾಗಲಾರಂಭಿಸಿದೆ.


ಸ್ಟೇಟ್ ಬ್ಯಾಂಕ್ ಸುತ್ತಮುತ್ತಲಿನ ಪ್ರದೇಶ ಮಂಗಳೂರಿನ‌ ಹೃದಯ ಇದ್ದಂತೆ. ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಕಮಿಷನರ್ ಕಚೇರಿ, ಐಜಿ ಕಚೇರಿ, ಎಸ್ ಪಿ ಕಚೇರಿ, ಆರ್ ಟಿಒ ಆಫೀಸ್, ಅರಣ್ಯ, ಕೃಷಿ ಇಲಾಖೆ ಕಚೇರಿ, ಅಂಗಡಿ- ಮುಂಗಟ್ಟು, ವ್ಯಾಪಾರ- ವಹಿವಾಟು, ಮೀನು ಮಾರ್ಕೆಟ್ ಎಲ್ಲ ಇಲ್ಲೇ ಇರುವುದು. ಈ ಕಾರಣದಿಂದಲೇ ಇಡೀ ದ.ಕ. ಜಿಲ್ಲೆ ಹಾಗೂ ಹೊರಗಿನಿಂದ ಬಂದ ಮಂದಿ ಮಂಗಳೂರಿಗೆ ಬಂದರೆ ಸ್ಟೇಟ್ ಬ್ಯಾಂಕ್ ಪ್ರದೇಶಕ್ಕೆ ಕಾಲಿಡದೆ ವಾಪಸ್ ಹೋಗುವುದೇ ಇಲ್ಲ. ಇದರಿಂದಾಗಿ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಪ್ರದೇಶದಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆದರೆ,ಇದನ್ನು ಸರಿಯಾಗಿ ಅರಿತುಕೊಳ್ಳುವಲ್ಲಿ ವಿಮಾನದಲ್ಲಿ ಸುತ್ತುವ ಇಲ್ಲಿನ ಶಾಸಕರು, ಜನಪ್ರತಿನಿಧಿಗಳು, ಸ್ಥಳೀಯಾಡಳಿತ ವಿಫಲವಾಗಿವೆ.
ಮಂಗಳೂರಿನಲ್ಲಿ ಟ್ರಾಫಿಕ್ ಕುರಿತು ಹಲವು ಪ್ರಯೋಗಗಳು ನಡೆಯುತ್ತಲೇ ಬಂದಿದೆ. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಉದಯ ನಾಯಕ್ ಅವರು ಎಸಿಪಿಯಾಗಿದ್ದಾಗ ನಡೆಸಿದ ಪ್ರಯೋಗ ಸಾಕಷ್ಟು ಯಶಸ್ವಿ ಯಾಗಿತ್ತು. ಆದರೆ ನಂತರ ಅದನ್ನು ಬದಲಾಯಿಸಲಾಯಿತು. ಇದೀಗ ಲೇಡಿಗೋಷನ್ ಹಾಸ್ಪಿಟಲ್ ಬಳಿಯ ಸಿಟಿ ಬಸ್ ಸ್ಟಾಂಡ್ ಹತ್ತಿರ ನೋ ಪಾರ್ಕಿಂಗ್ ಮಾಡಲಾಗಿದೆ. ವಾಹನಗಳು ಪಾರ್ಕಿಂಗ್ ಮಾಡದಂತೆ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಟೇಪ್ ಗಳನ್ನು ಅಂಗಡಿ ಮುಗ್ಗಟ್ಟುಗಳ ಮುಂದೆ ಅಳವಡಿಸಿದ್ದಾರೆ.


ತಾಜ್ ಸೈಕಲ್, ಮೆಡಿಕಲ್ ಶಾಪ್ ಇತ್ಯಾದಿ ಅಂಗಡಿಗಳ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಟೇಪ್ ಎಳೆಯಲಾಗಿದೆ. ಇಲ್ಲೇ ಎದುರುಗಡೆ ಟೌನ್ ಹಾಲ್ ಬದಿಯಲ್ಲೂ ಮಿಲ್ಕ್ ಪಾರ್ಲರ್, ಹೂವು ಮಾರುವ ಜಾಗದ ಎದರುಗಡೆಯಲ್ಲೂ ನೋ ಪಾರ್ಕಿಂಗ್ ಮಾಡಿ ಟೇಪ್ ಎಳೆಯಲಾಗಿದೆ. ಹಾಗಾದರೆ,
ಈ ಅಂಗಡಿಗಳ ಗ್ರಾಹಕರು ಪಾರ್ಕಿಂಗ್ ಎಲ್ಲಿ ಮಾಡಬೇಕು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಬವವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಪಾರ್ಕಿಂಗ್ ವ್ಯವಸ್ಥೆ ಈ ಜಾಗದಲ್ಲಿದೆ. ವಾಣಿಜ್ಯ ಕಟ್ಟಡಗಳ ತಳಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯ ಮಾಡಿದರೆ ಹೆಚ್ಚಿನ ಸಮಸ್ಯೆ ಪರಿಹಾರಗೊಳ್ಳುತ್ತದೆ.
ಗಮನಿಸಬೇಕಾದ ಅಂಶವೆಂದರೆ, ಆರ್ ಟಿಒ ಬದಿಯ ಸುಸಜ್ಜಿತ ರಸ್ತೆಯನ್ನು ವನ್ ವೇ ಮಾಡಿದ ಬಳಿಕ ಲೇಡಿಗೋಶನ್ ಎದುರಿನ ರಸ್ತೆಯಲ್ಲಿ ವಾಹನಗಳ ನಿಬಿಡತೆ ಹೆಚ್ಚಾಗಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ. ಇನ್ನೂ ಅವಕಾಶವಿದೆ, ಆರ್ ಟಿಒ ರಸ್ತೆಯನ್ನು ಟು ವೇ ಮಾಡಿ ಸರಾಗ ಸಂಚಾರಕ್ಕೆ ಅವಕಾಶ ನೀಡಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು