1:52 PM Saturday18 - July 2026
ಬ್ರೇಕಿಂಗ್ ನ್ಯೂಸ್
ಬಂಟ್ವಾಳ, ಬಾದಾಮಿ ಸಹಿತ ರಾಜ್ಯದ 4 ರೈಲು ನಿಲ್ದಾಣಗಳಿಗೆ ನ್ಯೂ ಲುಕ್: ಏರ್‌ಪೋರ್ಟ್… ಕೊಡಗಿನಲ್ಲಿ ಅಕ್ರಮ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಗುಂಡೇಟು: ಮಾಲು ಸಮೇತ ಇಬ್ಬರು… ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ… ಬೆಂಗಳೂರಿನಲ್ಲಿ ಘೋರ ದುರಂತ: ಹೋಟೆಲ್ ಲಿಫ್ಟ್ ನಲ್ಲಿ ತಲೆ ಸಿಲುಕಿ ಧಾರವಾಡ ಯುವಕ… ಮೂಡಿಗೆರೆ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಚಿಕ್ಕಮಗಳೂರಿನಲ್ಲಿ ಭಿನ್ನಮತೀಯರ ಸಭೆ; ಶಾಸಕಿ ನಯನಾ… ಬಿಎಂಟಿಸಿ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ!: ನೋಡೋಕೆ ಸೈಲೆಂಟು, ಮಾಡಿದ… ಧರ್ಮಸ್ಥಳ ಪ್ರಕರಣ: ಎಸ್ ಐಟಿಯಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ

ಇತ್ತೀಚಿನ ಸುದ್ದಿ

ಕೊರೊನಾ ಅರ್ಭಟ: 1250 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ; 3 ತಿಂಗಳು ಸಾಲ ಕಂತು ವಿನಾಯಿತಿ

19/05/2021, 14:01

ಬೆಂಗಳೂರು(reporterkarnataka news): ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟದ ಹಿನ್ನೆಲೆಯಲ್ಲಿ ಜನರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 1250 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಸಂಪುಟದ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಯಡಿಯೂರಪ್ಪ ಅವರು 

ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. 

ಜನರು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕ ಬಾರದೆಂಬ ನಿಟ್ಟಿನಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಹಿಂದೆ ಆರ್ಥಿಕ ಫ್ಯಾಕೇಜ್ ಘೋಷಣೆ ಮಾಡಿದೆ. ಇದೀಗ ಮತ್ತೆ ಸರಕಾರ 1250 ಕೋಟಿಗೂ ಅಧಿಕ ವೆಚ್ಚದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಹೂವು ಬೆಳೆಗಾರರಿಗೆ ಪ್ರತೀ ಹೆಕ್ಟೇರ್ ಗೆ 10 ಸಾವಿರ ಸಹಾಯಧನ ನೀಡಲಾಗುತ್ತಿದ್ದು, 20 ಸಾವಿರ ರೈತರಿಗೆ ಸಹಾಯವಾಗಲಿದೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದ ನಷ್ಟಕ್ಕೆ ಸಂಬಂಧಿಸಿದಂತೆ ಪ್ರತೀ ಹೆಕ್ಟೇರ್ ಗೆ 10 ಸಾವಿರ ರೂಪಾಯಿ, ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3000 ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದಾರೆ.

ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂಪಾಯಿ, ಅಸಂಘಟಿತ ಕಾರ್ಮಿಕ ರಿಗೆ ತಲಾ 2000 ರೂಪಾಯಿ, ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ರೂಪಾಯಿ ಸಹಾಯಧನ, ಕಲಾವಿದರು, ತಲಾತಂಡಗಳಿಗೆ 3 ಸಾವಿರ ರೂಪಾಯಿ, ರೈತರಿಗೆ ಸಾಲ ಹಾಗೂ ಸ್ವಸಹಾಯ ಸಂಘಗಳಿಂದ ಪಡೆದ ಸಾಲಗಳ ಮರುಪಾವತಿ ಕಂತುಗಳ ಪಾವತಿಯನ್ನು ಜುಲೈ ಅಂತ್ಯದ ವರೆಗೆ ವಿನಾಯಿತಿ ನೀಡಲಾಗಿದೆ. ಅಲ್ಲದೇ ಮೂರು ತಿಂಗಳ ಸಾಲದ ಅವಧಿಯ ಬಡ್ಡಿಯನ್ನು ಸರಕಾರವೇ ಭರಿಸಲಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ಆಹಾರ ಸಾಮಗ್ರಿ ಗಳನ್ನು ವಿತರಿಸಲಾಗುತ್ತಿದೆ. ಆಹಾರದ ಕೊರತೆಯಿಂದ ಬಳಲ ಬಾರದೆಂಬ ನಿಟ್ಟಿನಲ್ಲಿ 6 ಲಕ್ಷ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾಯ ಒದಗಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯತಿ ಮಟ್ಟದ ಟಾಸ್ಕ್ ಪೋರ್ಸ್ ಗೆ ಸ್ಥಳೀಯ ಸಂಘ ಸಂಸ್ಥೆಗಳ ನೆರವು ಪಡೆಯಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು