ಇತ್ತೀಚಿನ ಸುದ್ದಿ
ಉಳ್ಳಾಲ ಜುಮ್ಮಾ ಮಸೀದಿ ಮತ್ತು ಶೆರೀಫುಲ್ ಮದನಿ ದರ್ಗಾ, ಅಳೇಕಲ ಅಚ್ಚೇ ಸಾಹೇಬ್ ದರ್ಗಾಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ
02/04/2024, 21:09

ಉಳ್ಳಾಲ(reporterkarnataka.com): ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಉಳ್ಳಾಲ ಜುಮ್ಮಾ ಮಸೀದಿ ಮತ್ತು ಶೆರೀಫುಲ್ ಮದನಿ ದರ್ಗಾ, ಅಳೇಕಲ ಅಚ್ಚೇ ಸಾಹೇಬ್ ದರ್ಗಾಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳ್ಯಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ಪುರಸಭೆ ಸದಸ್ಯರಾದ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ಕುಂಪಲ, ಉಳ್ಳಾಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಮುಸ್ತಫಾ, ಉಸ್ಮಾನ್ ಕಲ್ಲಾಪು, ರಶೀದ್ ಕೋಡಿ, ಅದ್ದಾಂ ಉಳ್ಳಾಲ್, ಶಾಹೀಲ್ ಮಂಚಿಲ, ಅಳೇಕಲ ಅಚ್ಚೇ ಸಾಹೇಬ್ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಹಾಜಿ, ಉಪಾಧ್ಯಕ್ಷ ಫಾರೂಕ್, ಅಶ್ರಫ್ ಎಂ.ಎ.ಕೆ., ಯು.ಕೆ. ರಿಯಾಜ್, ಸಮದ್ ಮೊದಲಾದವರು ಉಪಸ್ಥಿತರಿದ್ದರು.