8:03 AM Wednesday27 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ವಾಗ್ದಾಳಿ

26/03/2024, 16:54

ಮಂಗಳೂರು(reporterkarnataka.com):ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯ ಮಾತೇ ಇಲ್ಲವಾಗಿದೆ. ವಾಸ್ತವಿಕ ಅರ್ಥದಲ್ಲಿ ಕಾಂಗ್ರೆಸ್ ಮತ್ತು ಅಭಿವೃದ್ಧಿ ಎರಡೂ ವಿರೋಧ ಪದಗಳು ಎಂದು ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸರಕಾರ ಬಂದ ಮೇಲೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಹಣವನ್ನೆಲ್ಲ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ್ದಾರೆ. ಹೀಗಾಗಿ ಒಂದೇ ಒಂದು ಕಿಮೀ ರಸ್ತೆಗೂ ಹೊಸದಾಗಿ ಡಾಮರೀಕರಣ ಆಗಿಲ್ಲ, ಇಡೀ ರಾಜ್ಯ ಬರಗಾಲ ಎದುರಿಸುತ್ತಿದೆ. ಆದರೆ ಬರ ಪರಿಹಾರದ ಯೋಜನೆಗಳು ಯಾವುವೂ ಈ ಸರಕಾರದಲ್ಲಿ ಇಲ್ಲ. ಕೇಂದ್ರ ಸರಕಾರಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಕೊಟ್ಟು ನೆರವು ಪಡೆಯುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಆದರೆ ಅದರ ಬದಲು ಕೇಂದ್ರದ ವಿರುದ್ಧ ಕೇಸು ಹಾಕುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ನೋ ವಿಷನ್, ನೋ ಮಿಷನ್, ಓನ್ಲೀ ಕರಪ್ಷನ್‌ ಅನ್ನುವ ಮಂತ್ರ ಮಾತ್ರ ಗೊತ್ತಿದೆ. ಇದೊಂದು ರೈತ ವಿರೋಧಿ ಸರಕಾರವಾಗಿದ್ದು, ಕೇಂದ್ರ ಸರಕಾರದ ರೈತ ಸಮ್ಮಾನ ಯೋಜನೆಗೂ ಅಡ್ಡಗಾಲು ಹಾಕಿದೆ. ಹಿಂದೆ ಬಿಜೆಪಿ ಸರರಕಾರವಿದ್ದಾಗ ಕೇಂದ್ರ ಸರಕಾರ ನೀಡುವ 6,000 ರೂ.ಗಳಿಗೆ 4,000 ರರೂ.ಗಳನ್ನು ಸೇರಿಸಿ ಒಟ್ಟು 10,000 ರೂ.ಗಳನ್ನು ರೈತರ ಖಾತೆಗಳಿಗೆ ನೇರ ಪಾವತಿ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಬಂದ ಕೂಡಲೇ ರಾಜ್ಯ ಸರಕಾರ ನೀಡುವ ಹಣಕ್ಕೆ ಕತ್ತರಿ ಹಾಕಲಾಯಿತು. ಅಲ್ಲದೆ ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ ಎಂದು ದತ್ತಾತ್ರೇಯ ಟೀಕಿಸಿದರು.
ರಾಜ್ಯದ ಜನತೆ ನೀರಿಗಾಗಿ ಹಾಹಾಕಾರ ಮಾಡುತ್ತಿದ್ದಾರೆ. ತುರ್ತಾಗಿ ಬೋರ್‍‌ವೆಲ್ ಕೊರೆಸುವುದಕ್ಕೂ ಆಗದ ಪರಿಸ್ಥಿತಿಯನ್ನು ಈ ಸರಕಾರ ತಂದಿಟ್ಟಿದೆ. ಬೋರ್‍‌ವೆಲ್ ಕಂಪನಿಗಳ ಮೇಲೆ ನಿಯಂತ್ರಣವಿಲ್ಲ, ರೈತರಿಗೆ ನೀಡಲಾಗುತ್ತಿದ್ದ ಉಚಿತ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಈಗ ಇಲ್ಲ. ರೈತರು ಅದಕ್ಕಾಗಿ ಕನಿಷ್ಠ 1 ಲಕ್ಷ ರೂ ಹೂಡಿಕೆ ಮಾಡಬೇಕಿದೆ. ಎಪಿಎಂಸಿ ಕಾಯ್ದೆಗೂ ತಿದ್ದಿಪಡಿ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಇಂತಹ ಸರಕಾರವನ್ನು ರೈತ ವಿರೋಧಿ ಎನ್ನದೆ ಬೇರೆ ಏನೆಂದು ಕರೆಯಬೇಕು? ಎಂದು ಅವರು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಹಿಂದೂ ವಿರೋಧಿ ಸರಕಾರದಿಂದ ಅಲ್ಪಸಂಖ್ಯಾತರ ತುಷ್ಟೀಕರಣ ಪರಮಾವಧಿಗೆ ತಲುಪಿದೆ. ಅನ್ಯ ಧರ್ಮಗಳ ಪ್ರಾರ್ಥನಾ ಕೇಂದ್ರಗಳಿಗೆ ಇಲ್ಲದ ತೆರಿಗೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ಹಾಕಿದ್ದಾರೆ. ದೇವಾಲಯದ ಹಣವನ್ನು ದೋಚಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಬಳಸಲಾಗುತ್ತಿದೆ. ಕೋಟ್ಯಂತರ ಭಾರತೀಯರ ಐದು ಶತತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಈ ಕಾಂಗ್ರೆಸ್‌ಗೆ ಇನ್ನಿಲ್ಲದ ಹೊಟ್ಟೆಯುರಿ, ಆತಂಕ, ವಿರೋಧ. ಆದರೆ ಪ್ರಜಾಪ್ರಭುತ್ವದ ದೇಗುಲವೆನಿಸಿದ ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದವರ ವಿರುದ್ಧ ಯಾವುದೇ ಕ್ರಮವಿಲ್ಲ. ಇದು ಹಿಂದೂ ವಿರೋಧಿ ಮತ್ತು ದೇಶದ್ರೋಹಿಗಳ ಪರವಾದ ಸರಕಾರವಲ್ಲದೆ ಮತ್ತೇನು? ಎಂದು ದತ್ತಾತ್ರೇಯ ಅವರು ವಾಗ್ದಾಳಿ ನಡೆಸಿದರು.
ಮಾತೆತ್ತಿದರೆ ಸಂವಿಧಾನ, ದಲಿತೋದ್ಧಾರ ಎಂದೆಲ್ಲ ಹೇಳಿಕೊಳ್ಳುವ ಕಾಂಗ್ರೆಸಿಗರು ದಲಿತ ವಿರೋಧಿ ಸರಕಾರ ನಡೆಸುತ್ತಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ 11,500 ಕೋಟಿ ರೂ.ಗಳನ್ನು ಉಚಿತ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ.
*ಕೆಎಸ್ಸಾರ್ಟಿಸಿ ಸಂಕಷ್ಟದಲ್ಲಿ:*
ಲಾಭದಾಯಕವಾಗಿ ನಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಯನ್ನು ನಷ್ಟದ ಪ್ರಪಾತಕ್ಕೆ ತಳ್ಳಿದೆ. ಸಾಮಾನ್ಯವಾಗಿ 7 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಹಿಂತೆಗೆದುಕೊಂಡು ಹೊಸ ಬಸ್‌ಗಳನ್ನು ಚಲಾವಣೆಗೆ ಬಿಡುವುದು ಸುರಕ್ಷತೆಯ ಮಾನದಂಡದ ಪ್ರಕಾರ ಕೈಗೊಳ್ಳುವ ಕ್ರಮ. ಆದರೆ ಈ ಕಾಂಗ್ರೆಸ್ ಸರಕಾರ ಬಂದ ಬಳಿಕ ಉಚಿತ ಪ್ರಯಾಣದ ಗ್ಯಾರಂಟಿ ನೆಪದಲ್ಲಿ ಹೊಸ ಬಸ್‌ಗಳನ್ನು ಖರೀದಿಸಲಾಗದ ಸ್ಥಿತಿಗೆ ತಳ್ಳಿದೆ. ಇದೀಗ 20 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನೂ ಸಂಚಾರಕ್ಕೆ ಬಿಡಲಾಗುತ್ತಿದೆ. ಇಂತಹ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಯಾವ ಗ್ಯಾರಂಟಿ ಇದೆ? ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದ ಜಿಡಿಪಿ ಕೂಡ ತೀವ್ರವಾಗಿ ಕುಸಿತ ಕಂಡಿದೆ. ರಾಜ್ಯದ ಆಡಳಿತ ಇಗ ಐದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಗಿದೆ ಎಂದು ಅವರು ತಿಳಿಸಿದರು.
*ಮೋದಿ ಆಡಳಿತದಲ್ಲಿ ವಿಕಸಿತ ಭಾರತ:*
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ 10 ವರ್ಷಗಳಲ್ಲಿ ದೇಶವನ್ನು ಸಮಗ್ರವಾಗಿ ರೂಪಾಂತರಗೊಳಿಸಿದೆ. ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿ ಇಡೀ ಜಗತ್ತೇ ಭಾರತವನ್ನು ಬೆರಗಿನಿಂದ ನೋಡುವಂತೆ ಮಾಡಿದೆ. ಪ್ರಸ್ತುತ ಜಗತ್ತಿನಲ್ಲಿ ಭಾರತವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 2047ರ ವೇಳೆಗೆ ದೇಶವು ಸ್ವಾತಂತ್ರಯದ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ವಿಕಸಿತ ಭಾರತವಾಗಿ ಪರಿವರ್ತನೆ ಹೊಂದಲಿದೆ ಎಂದು ದತ್ತಾತ್ರೇಯ ಹೇಳಿದರು.
ಪ್ರಧಾನಿ ಮೋದಿಯವರು ದೇಶವಾಸಿಗಳಿಗೆ ನೀಡಿದ್ದ 222 ಭರವಸೆಗಳನ್ನು ಈಡೇರಿಸಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದಲ್ಲಿ ಅಭಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿದ್ದಾರೆ. ಅಲ್ಲೀಗ ಪ್ರವಾಸೋದ್ಯಮ ಗರಿಗೆದರುತ್ತಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾಗಿದೆ. ದೇಶದ ಸಂಸ್ಕೃತಿ, ಧಾರ್ಮಿಕ ಪರಂಪರೆಗಳ ಪುನರುತ್ತಾನವಾಗಿದೆ. ಬೋಯಿಂಗ್‌ನಿಂದ ತೊಡಗಿ ಸೆಮಿ ಕಂಡಕ್ಟರ್‍‌ ವರೆಗೆ ಭಾರತದಲ್ಲೇ ಉತ್ಪಾದಿಸುವ ಆತ್ಮನಿರ್ಭರತೆಗೆ ಒತ್ತು ನೀಡಲಾಗಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ಭಾರತವೀಗ ಜಗತ್ತಿನಲ್ಲೇ ಮುಂಚೂಣಿ ರಾಷ್ಟ್ರವಾಗಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯ ಮೂಲಕ ಜನತೆಯ ಅಮೂಲ್ಯ ಸಮಯ ಹಾಗೂ ಶ್ರಮದ ಉಳಿತಾಯವಾಗಿದೆ. ಭ್ರಷ್ಟಾಚಾರಕ್ಕೆ ಗಣನೀಯವಾಗಿ ಕಡಿವಾಣ ಹಾಕಲಾಗಿದೆ. ಹರ್‍‌ ಘರ್ ಜಲ್, ಆಯುಷ್ಮಾನ್ ಭಾರತ್‌, ಉಜ್ವಲಾದಂತಹ ಯೋಜನೆಗಳ ಮೂಲಕ ಜನರ ಜೀವನ ಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ.

ಮೋದಿ ಅವರ ಸರಕಾರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಗರಿಷ್ಠ ಮಹತ್ವ ನೀಡಲಾಗಿದೆ. ಹೊಸ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಿಸಲಾಗಿದೆ. ವಂದೇ ಭಾರತ್‌ನಂತಹ ವೇಗದ ರೈಲಿನ ಸೇವೆ ಆರಂಭಿಸಲಾಗಿದೆ ಎಂದು ದತ್ತಾತ್ರೇಯ ವಿವರವಾದ ಮಾಹಿತಿ ನೀಡಿದರು.
*ಸಂಘಟನಾತ್ಮಕವಾಗಿ ಬಿಜೆಪಿ ಬಲಿಷ್ಠ:*
ಭಾರತೀಯ ಜನತಾ ಪಕ್ಷವು ಸಂಘಟನಾತ್ಮಕವಾಗಿ ಅತ್ಯಂತ ಬಲಿಷ್ಠವಾಗಿದ್ದು, ದೇಶದ ಎಲ್ಲ ಜನವರ್ಗಗಳನ್ನು ತಲುಪಿದೆ. ಸಾಂಪ್ರದಾಯಿಕವಾದ ವಿವಿಧ ಘಟಕಗಳಲ್ಲದೆ, ವಿವಿಧ ಮೋರ್ಚಾಗಳು, 25 ಪ್ರಕೋಷ್ಠಗಳನ್ನು ರೂಪಿಸಿ ಸಬ್‌ಕಾ ಸಾಥ್‌, ಸಬ್‌ ಕಾ ವಿಕಾಸ್‌ ಧ್ಯೇಯದ ಸಾಧನೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಡಳಿತ ಪ್ರಕೋಷ್ಠದ ಸಹ ಸಂಚಾಲಕ ಕಿರಣ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಸನ್ನ ದರ್ಭೆ, ಶಾಂತಾರಾಮ್ ಶೆಟ್ಟಿ, ವೈದ್ಯಕೀಯ ಪ್ರಕೋಷ್ಠದ ರವಿ ಗಣೇಶ್ ಮೊಗ್ರ, ಸಹಕಾರಿ ಪ್ರಕೋಷ್ಠದ ಪ್ರಮುಖರಾದ ರಾಜಾರಾಂ ಭಟ್‌ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ, ಮಾಧ್ಯಮ ಸಹಸಂಚಾಲಕ ಕದ್ರಿ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.ಅಭಿವೃದ್ಧಿ ಮತ್ತು ಕಾಂಗ್ರೆಸ್- ಎರಡೂ ವಿರೋಧ ಪದಗಳು: ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ವಾಗ್ದಾಳಿ

ಮಂಗಳೂರು(reporterkarnataka.com):
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯ ಮಾತೇ ಇಲ್ಲವಾಗಿದೆ. ವಾಸ್ತವಿಕ ಅರ್ಥದಲ್ಲಿ ಕಾಂಗ್ರೆಸ್ ಮತ್ತು ಅಭಿವೃದ್ಧಿ ಎರಡೂ ವಿರೋಧ ಪದಗಳು ಎಂದು ಬಿಜೆಪಿ ರಾಜ್ಯ ಪ್ರಕೋಷ್ಠ ಸಂಚಾಲಕ ದತ್ತಾತ್ರೇಯ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಇಂದು (ಮಂಗಳವಾರ) ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸರಕಾರ ಬಂದ ಮೇಲೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಹಣವನ್ನೆಲ್ಲ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ್ದಾರೆ. ಹೀಗಾಗಿ ಒಂದೇ ಒಂದು ಕಿಮೀ ರಸ್ತೆಗೂ ಹೊಸದಾಗಿ ಡಾಮರೀಕರಣ ಆಗಿಲ್ಲ, ಇಡೀ ರಾಜ್ಯ ಬರಗಾಲ ಎದುರಿಸುತ್ತಿದೆ. ಆದರೆ ಬರ ಪರಿಹಾರದ ಯೋಜನೆಗಳು ಯಾವುವೂ ಈ ಸರಕಾರದಲ್ಲಿ ಇಲ್ಲ. ಕೇಂದ್ರ ಸರಕಾರಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಕೊಟ್ಟು ನೆರವು ಪಡೆಯುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಆದರೆ ಅದರ ಬದಲು ಕೇಂದ್ರದ ವಿರುದ್ಧ ಕೇಸು ಹಾಕುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ನೋ ವಿಷನ್, ನೋ ಮಿಷನ್, ಓನ್ಲೀ ಕರಪ್ಷನ್‌ ಅನ್ನುವ ಮಂತ್ರ ಮಾತ್ರ ಗೊತ್ತಿದೆ. ಇದೊಂದು ರೈತ ವಿರೋಧಿ ಸರಕಾರವಾಗಿದ್ದು, ಕೇಂದ್ರ ಸರಕಾರದ ರೈತ ಸಮ್ಮಾನ ಯೋಜನೆಗೂ ಅಡ್ಡಗಾಲು ಹಾಕಿದೆ. ಹಿಂದೆ ಬಿಜೆಪಿ ಸರರಕಾರವಿದ್ದಾಗ ಕೇಂದ್ರ ಸರಕಾರ ನೀಡುವ 6,000 ರೂ.ಗಳಿಗೆ 4,000 ರರೂ.ಗಳನ್ನು ಸೇರಿಸಿ ಒಟ್ಟು 10,000 ರೂ.ಗಳನ್ನು ರೈತರ ಖಾತೆಗಳಿಗೆ ನೇರ ಪಾವತಿ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಬಂದ ಕೂಡಲೇ ರಾಜ್ಯ ಸರಕಾರ ನೀಡುವ ಹಣಕ್ಕೆ ಕತ್ತರಿ ಹಾಕಲಾಯಿತು. ಅಲ್ಲದೆ ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನೂ ನೀಡುತ್ತಿಲ್ಲ ಎಂದು ದತ್ತಾತ್ರೇಯ ಟೀಕಿಸಿದರು.
ರಾಜ್ಯದ ಜನತೆ ನೀರಿಗಾಗಿ ಹಾಹಾಕಾರ ಮಾಡುತ್ತಿದ್ದಾರೆ. ತುರ್ತಾಗಿ ಬೋರ್‍‌ವೆಲ್ ಕೊರೆಸುವುದಕ್ಕೂ ಆಗದ ಪರಿಸ್ಥಿತಿಯನ್ನು ಈ ಸರಕಾರ ತಂದಿಟ್ಟಿದೆ. ಬೋರ್‍‌ವೆಲ್ ಕಂಪನಿಗಳ ಮೇಲೆ ನಿಯಂತ್ರಣವಿಲ್ಲ, ರೈತರಿಗೆ ನೀಡಲಾಗುತ್ತಿದ್ದ ಉಚಿತ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಈಗ ಇಲ್ಲ. ರೈತರು ಅದಕ್ಕಾಗಿ ಕನಿಷ್ಠ 1 ಲಕ್ಷ ರೂ ಹೂಡಿಕೆ ಮಾಡಬೇಕಿದೆ. ಎಪಿಎಂಸಿ ಕಾಯ್ದೆಗೂ ತಿದ್ದಿಪಡಿ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಇಂತಹ ಸರಕಾರವನ್ನು ರೈತ ವಿರೋಧಿ ಎನ್ನದೆ ಬೇರೆ ಏನೆಂದು ಕರೆಯಬೇಕು? ಎಂದು ಅವರು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಹಿಂದೂ ವಿರೋಧಿ ಸರಕಾರದಿಂದ ಅಲ್ಪಸಂಖ್ಯಾತರ ತುಷ್ಟೀಕರಣ ಪರಮಾವಧಿಗೆ ತಲುಪಿದೆ. ಅನ್ಯ ಧರ್ಮಗಳ ಪ್ರಾರ್ಥನಾ ಕೇಂದ್ರಗಳಿಗೆ ಇಲ್ಲದ ತೆರಿಗೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ಹಾಕಿದ್ದಾರೆ. ದೇವಾಲಯದ ಹಣವನ್ನು ದೋಚಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಬಳಸಲಾಗುತ್ತಿದೆ. ಕೋಟ್ಯಂತರ ಭಾರತೀಯರ ಐದು ಶತತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಈ ಕಾಂಗ್ರೆಸ್‌ಗೆ ಇನ್ನಿಲ್ಲದ ಹೊಟ್ಟೆಯುರಿ, ಆತಂಕ, ವಿರೋಧ. ಆದರೆ ಪ್ರಜಾಪ್ರಭುತ್ವದ ದೇಗುಲವೆನಿಸಿದ ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದವರ ವಿರುದ್ಧ ಯಾವುದೇ ಕ್ರಮವಿಲ್ಲ. ಇದು ಹಿಂದೂ ವಿರೋಧಿ ಮತ್ತು ದೇಶದ್ರೋಹಿಗಳ ಪರವಾದ ಸರಕಾರವಲ್ಲದೆ ಮತ್ತೇನು? ಎಂದು ದತ್ತಾತ್ರೇಯ ಅವರು ವಾಗ್ದಾಳಿ ನಡೆಸಿದರು.
ಮಾತೆತ್ತಿದರೆ ಸಂವಿಧಾನ, ದಲಿತೋದ್ಧಾರ ಎಂದೆಲ್ಲ ಹೇಳಿಕೊಳ್ಳುವ ಕಾಂಗ್ರೆಸಿಗರು ದಲಿತ ವಿರೋಧಿ ಸರಕಾರ ನಡೆಸುತ್ತಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ 11,500 ಕೋಟಿ ರೂ.ಗಳನ್ನು ಉಚಿತ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ.
*ಕೆಎಸ್ಸಾರ್ಟಿಸಿ ಸಂಕಷ್ಟದಲ್ಲಿ:*
ಲಾಭದಾಯಕವಾಗಿ ನಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಸ್ಥೆಯನ್ನು ನಷ್ಟದ ಪ್ರಪಾತಕ್ಕೆ ತಳ್ಳಿದೆ. ಸಾಮಾನ್ಯವಾಗಿ 7 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ಹಿಂತೆಗೆದುಕೊಂಡು ಹೊಸ ಬಸ್‌ಗಳನ್ನು ಚಲಾವಣೆಗೆ ಬಿಡುವುದು ಸುರಕ್ಷತೆಯ ಮಾನದಂಡದ ಪ್ರಕಾರ ಕೈಗೊಳ್ಳುವ ಕ್ರಮ. ಆದರೆ ಈ ಕಾಂಗ್ರೆಸ್ ಸರಕಾರ ಬಂದ ಬಳಿಕ ಉಚಿತ ಪ್ರಯಾಣದ ಗ್ಯಾರಂಟಿ ನೆಪದಲ್ಲಿ ಹೊಸ ಬಸ್‌ಗಳನ್ನು ಖರೀದಿಸಲಾಗದ ಸ್ಥಿತಿಗೆ ತಳ್ಳಿದೆ. ಇದೀಗ 20 ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನೂ ಸಂಚಾರಕ್ಕೆ ಬಿಡಲಾಗುತ್ತಿದೆ. ಇಂತಹ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಯಾವ ಗ್ಯಾರಂಟಿ ಇದೆ? ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದ ಜಿಡಿಪಿ ಕೂಡ ತೀವ್ರವಾಗಿ ಕುಸಿತ ಕಂಡಿದೆ. ರಾಜ್ಯದ ಆಡಳಿತ ಇಗ ಐದು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಗಿದೆ ಎಂದು ಅವರು ತಿಳಿಸಿದರು.
*ಮೋದಿ ಆಡಳಿತದಲ್ಲಿ ವಿಕಸಿತ ಭಾರತ:*
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ 10 ವರ್ಷಗಳಲ್ಲಿ ದೇಶವನ್ನು ಸಮಗ್ರವಾಗಿ ರೂಪಾಂತರಗೊಳಿಸಿದೆ. ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿ ಇಡೀ ಜಗತ್ತೇ ಭಾರತವನ್ನು ಬೆರಗಿನಿಂದ ನೋಡುವಂತೆ ಮಾಡಿದೆ. ಪ್ರಸ್ತುತ ಜಗತ್ತಿನಲ್ಲಿ ಭಾರತವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 2047ರ ವೇಳೆಗೆ ದೇಶವು ಸ್ವಾತಂತ್ರಯದ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ವಿಕಸಿತ ಭಾರತವಾಗಿ ಪರಿವರ್ತನೆ ಹೊಂದಲಿದೆ ಎಂದು ದತ್ತಾತ್ರೇಯ ಹೇಳಿದರು.
ಪ್ರಧಾನಿ ಮೋದಿಯವರು ದೇಶವಾಸಿಗಳಿಗೆ ನೀಡಿದ್ದ 222 ಭರವಸೆಗಳನ್ನು ಈಡೇರಿಸಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರದಲ್ಲಿ ಅಭಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿದ್ದಾರೆ. ಅಲ್ಲೀಗ ಪ್ರವಾಸೋದ್ಯಮ ಗರಿಗೆದರುತ್ತಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾಗಿದೆ. ದೇಶದ ಸಂಸ್ಕೃತಿ, ಧಾರ್ಮಿಕ ಪರಂಪರೆಗಳ ಪುನರುತ್ತಾನವಾಗಿದೆ. ಬೋಯಿಂಗ್‌ನಿಂದ ತೊಡಗಿ ಸೆಮಿ ಕಂಡಕ್ಟರ್‍‌ ವರೆಗೆ ಭಾರತದಲ್ಲೇ ಉತ್ಪಾದಿಸುವ ಆತ್ಮನಿರ್ಭರತೆಗೆ ಒತ್ತು ನೀಡಲಾಗಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ಭಾರತವೀಗ ಜಗತ್ತಿನಲ್ಲೇ ಮುಂಚೂಣಿ ರಾಷ್ಟ್ರವಾಗಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯ ಮೂಲಕ ಜನತೆಯ ಅಮೂಲ್ಯ ಸಮಯ ಹಾಗೂ ಶ್ರಮದ ಉಳಿತಾಯವಾಗಿದೆ. ಭ್ರಷ್ಟಾಚಾರಕ್ಕೆ ಗಣನೀಯವಾಗಿ ಕಡಿವಾಣ ಹಾಕಲಾಗಿದೆ. ಹರ್‍‌ ಘರ್ ಜಲ್, ಆಯುಷ್ಮಾನ್ ಭಾರತ್‌, ಉಜ್ವಲಾದಂತಹ ಯೋಜನೆಗಳ ಮೂಲಕ ಜನರ ಜೀವನ ಮಟ್ಟ ಸುಧಾರಣೆಗೆ ಒತ್ತು ನೀಡಲಾಗಿದೆ.

ಮೋದಿ ಅವರ ಸರಕಾರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಗರಿಷ್ಠ ಮಹತ್ವ ನೀಡಲಾಗಿದೆ. ಹೊಸ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಿಸಲಾಗಿದೆ. ವಂದೇ ಭಾರತ್‌ನಂತಹ ವೇಗದ ರೈಲಿನ ಸೇವೆ ಆರಂಭಿಸಲಾಗಿದೆ ಎಂದು ದತ್ತಾತ್ರೇಯ ವಿವರವಾದ ಮಾಹಿತಿ ನೀಡಿದರು.
*ಸಂಘಟನಾತ್ಮಕವಾಗಿ ಬಿಜೆಪಿ ಬಲಿಷ್ಠ:*
ಭಾರತೀಯ ಜನತಾ ಪಕ್ಷವು ಸಂಘಟನಾತ್ಮಕವಾಗಿ ಅತ್ಯಂತ ಬಲಿಷ್ಠವಾಗಿದ್ದು, ದೇಶದ ಎಲ್ಲ ಜನವರ್ಗಗಳನ್ನು ತಲುಪಿದೆ. ಸಾಂಪ್ರದಾಯಿಕವಾದ ವಿವಿಧ ಘಟಕಗಳಲ್ಲದೆ, ವಿವಿಧ ಮೋರ್ಚಾಗಳು, 25 ಪ್ರಕೋಷ್ಠಗಳನ್ನು ರೂಪಿಸಿ ಸಬ್‌ಕಾ ಸಾಥ್‌, ಸಬ್‌ ಕಾ ವಿಕಾಸ್‌ ಧ್ಯೇಯದ ಸಾಧನೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಡಳಿತ ಪ್ರಕೋಷ್ಠದ ಸಹ ಸಂಚಾಲಕ ಕಿರಣ್ ಕುಮಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಸನ್ನ ದರ್ಭೆ, ಶಾಂತಾರಾಮ್ ಶೆಟ್ಟಿ, ವೈದ್ಯಕೀಯ ಪ್ರಕೋಷ್ಠದ ರವಿ ಗಣೇಶ್ ಮೊಗ್ರ, ಸಹಕಾರಿ ಪ್ರಕೋಷ್ಠದ ಪ್ರಮುಖರಾದ ರಾಜಾರಾಂ ಭಟ್‌ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ, ಮಾಧ್ಯಮ ಸಹಸಂಚಾಲಕ ಕದ್ರಿ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು