ಇತ್ತೀಚಿನ ಸುದ್ದಿ
ನಾಗರ ಪಂಚಮಿ ನಾಡಿಗೆ ದೊಡ್ಡದು: ನಾಡಿನಾದ್ಯಂತ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇಲ್ಲದೆ ಸರಳವಾಗಿ ಅಚರಣೆ
13/08/2021, 10:57
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ರಾಜ್ಯಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ಭಯ ಭಕ್ತಿಯಿಂದ ಆಚರಿಸಲಾಯಿತು. ಹೆಣ್ಣು ಮಕ್ಕಳ ಹಬ್ಬವೆಂದೇ ಖ್ಯಾತಿ ಪಡೆದ ಪಂಚಮಿ ಹಬ್ಬವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಉತ್ತರ ಕರ್ನಾಟಕ, ಈಶಾನ್ಯ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ನಾಗಬನ, ದೇಗುಲ, ಗುಡಿ-ಗೋಪುರಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇಲ್ಲದೆ ಕೇವಲ ಸಂಪ್ರದಾಯಕ್ಕಾಗಿ ಆಚರಿಸಲಾಯಿತು.
ಮಸ್ಕಿ ತಾಲೂಕು ಸೇರಿದಂತೆ ರಾಯಚೂರು
ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನೆಲೆಸಿತ್ತು. ಇಲ್ಲಿನ ಜನರು ಶ್ರಾವಣ ಮಾಸದ ನಿಮಿತ್ತ ನಾಗರಾಜನ ಪೂಜಿಸುತ್ತಾರೆ. ಒಂದು ವೇಳೆ ಪಂಚಮಿ ದಿನದಲ್ಲಿ ಹಾವುಗಳು ಕಂಡರೆ ಅವುಗಳಿಗೆ ಹಾಲು ಎರೆದು ಬರಮಾಡಿಕೊಳ್ಳುತ್ತಾರೆ.
ಶ್ರಾವಣ ಮಾಸದ ನಾಗರ ಪಂಚಮಿಯನ್ನು ಜನರು
ವಿಶೇಷವಾಗಿ ಅದ್ದೂರಿಯಿಂದ ಆಚರಿಸುತ್ತಾರೆ. ನಾಗಪ್ಪನಿಗೆ ವಿಶೇಷವಾಗಿ ಪೂಜೆ, ಅಲಂಕಾರ, ವಿವಿಧ ರೀತಿಯ ಅಭಿಷೇಕ ನಡೆಯುತ್ತದೆ. ಅಲ್ಲದೆ ನಾಗರ ಪಂಚಮಿ ಇಡಿ ನಾಡಿನಲ್ಲಿ ದೊಡ್ಡಬ್ಬವಾಗಿದೆ. ಹೆಣ್ಣು ಮಕ್ಕಳನ್ನು ಗಂಡನ ಮನೆಯಿಂದ ತವರಮನೆಗೆ ಕರೆದುಕೊಂಡು ಬಂದು ಅವರಿಗೆ ಸಿರಿ ಬಂಗಾರ ಉಡುಗರೇ ಕೊಡುವ ಪದ್ಧತಿ ಇದೆ.
ಹೆಣ್ಣು ಮಕ್ಕಳು ಜೋಕಾಲಿ ಹಾಡುವುದು ಗೆಳತಿಯರೆಲ್ಲ ಸೇರಿ ಹಬ್ಬ ಮಾಡುವುದು ವಿಶೇಷವಾಗಿ ಉತ್ತರ ಕರ್ನಾಟಕ, ಈಶಾನ್ಯ ಕರ್ನಾಟಕದ ಭಾಗದಲ್ಲಿ ನಾವು ಕಾಣುತ್ತೇವೆ.