ಇತ್ತೀಚಿನ ಸುದ್ದಿ
ಸಿದ್ಧಿ ಸಮುದಾಯದ ನಾಯಕ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಡಿಯಾಗೋ ಇನ್ನಿಲ್ಲ
13/08/2021, 10:46
ಕಾರವಾರ(reporterkarnataka.com):
ಸಿದ್ಧಿ ಸಮುದಾಯದ ನಾಯಕ, ಹೋರಾಟಗಾರ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ ( ಹಳಿಯಾಳ ) ಡಿಯಾಗೋ ಬಸ್ತ್ಯಾವ್ ಸಿದ್ಧಿ ನಿಧನರಾಗಿದ್ದಾರೆ.
ಡಿಯಾಗೋ ಅವರು ತನ್ನ ಬದುಕಿನ ಪೂರ್ತಿ ಸಿದ್ಧಿ ಸಮುದಾಯದ ವಿಕಸನ, ಪಶ್ಚಿಮ ಘಟ್ಟ ಸಂರಕ್ಷಣೆ, ಸಮಾಜ ಸುಧಾರಣೆ ಬಗ್ಗೆ ಹೋರಾಟ ನಡೆಸಿದ್ದಾರೆ.
ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸದೇ ತನ್ನ ಸಮುದಾಯದ ಮತ್ತು ಸಮಾಜ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಚಿಂತಿಸುತ್ತಾ ಮತ್ತು ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಿ ಬಂದಿದ್ದಾರೆ. ಅವರು ಯಲ್ಲಾಪುರದಿಂದ ಆರಂಭಗೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಿದ್ದಾರೆ.
ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರು ಡಿಯಾಗೋ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅವರ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ. ಡಿಯಾಗೋ ಅವರು ಇತ್ತೀಚೆಗೆ ಅನಾರೋಗ್ಯಪೀಡಿತರಾದ ಬಳಿಕವೂ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಂದಿದ್ದಾರೆ.
ಡಿಯಾಗೋ ಅವರ ಸಾವಿನ ಸುದ್ದಿ ಕೇಳಿ ಸಹಿಸಲು ಬಹಳ ಕಷ್ಟವಾಯಿತು. ಅವರ ಹೋರಾಟದ ದಿನಗಳು, ಕೆಚ್ಚೆದಯ ಕ್ಷಣಗಳು , ಸಮುದಾಯದ ಏಳಿಗೆಯ ಬಗ್ಗೆ ಅವರು ತೆಗೆದುಕೊಂಡ ನಿರ್ಣಯಗಳು ನಮ್ಮನ್ನು ಯಾವಾಗಲೂ ಎಚ್ಚರಿಸುವಂತಿದೆ. ಅವರ ಕೊನೆಯ ಆಶೋತ್ತರಗಳನ್ನು ನೆರವೇರಿಸಲು ಪ್ರಯತ್ನ ಆಗಲೇ ಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದೆ ಇದೆ.
– ದಿನೇಶ್ ಹೊಳ್ಳ, ಪರಿಸರಪರ ಹೋರಾಟಗಾರ