9:45 AM Tuesday10 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ಚಳ್ಳಕೆರೆ ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ:   ಮನಸೂರೆಗೊಂಡ ಮಕ್ಕಳ ಕಾರ್ಯಕ್ರಮ ವೈವಿಧ್ಯ

07/03/2024, 11:54

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ ಚಳ್ಳಕೆರೆಯ ಯಾದವ ವಿದ್ಯಾರ್ಥಿ ಹಾಸ್ಟೇಲ್ ನಲ್ಲಿ ನಡೆಯಿತು.
ಶಾಲೆಯ ಶಿಕ್ಷಕ ನಾಗೇಶ್ ಅವರು ಮಾತನಾಡಿ, ಈ ಸಂಸ್ಥೆ ಮಕ್ಕಳಿಗೆ ಸಿಗುವ ಒಳ್ಳೆಯ ಸಂಸ್ಕಾರ, ಬೋಧನೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಎಲ್ಲಾ ಶಾಲೆಗಳಲ್ಲಿ ನಾನು ನೋಡಿದ ಹಾಗೇ ಮಕ್ಕಳನ್ನು ಪ್ರೀತಿಯಿಂದ ಶಿಕ್ಷಕರು ನೋಡಿಕೊಳ್ಳುವುದು. ಅವರು ಕಲಿಸುವ ರೀತಿ ಮಂತ್ರ ಪಠನೆ, ಮಕ್ಕಳ ಮಾತುಗರಿಕೆ, ಈ ಶಾಲೆಯ ಬೋಧನೆಯನ್ನು ಎತ್ತಿ ಹಿಡಿಯುತ್ತದೆ ಎಂದರು. ಮಕ್ಕಳು ಸಹ ಅಷ್ಟೇ ವೇಗವಾಗಿ ಕಲಿಯುತ್ತಿರುವುದು ಎಲ್ಲಾ ಪೋಷಕರಿಗೆ ಸಂತಸ ತರುತ್ತದೆ ಎಂದರು.


ಚಿಗುರು ಈ ಕಿಡ್ಸ್ ಪ್ರಿ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ಜಡೆಕುಂಟೆ ಎನ್.ಚಿಕ್ಕಣ್ಣ ಮಾತನಾಡಿ, ನಮ್ಮ ಸಂಸ್ಥೆ 8 ವರ್ಷ ದಿಂದ ನೆಡೆಸಿಕೊಂಡು ಬರುತ್ತಿದ್ದು, ಉತ್ತಮ ಶಿಕ್ಷಕರ ವೃಂದ ಹೊಂದಿದೆ. ಮಕ್ಕಳಿಗೆ ಉತ್ತಮ ಆಚಾರ ವಿಚಾರ ಮತ್ತು ಬೋಧನೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿಯೇ ನಮ್ಮ ಸಂಸ್ಥೆ ಹೆಸರನ್ನು ನಮ್ಮ ಶಾಲೆಯ ಮಕ್ಕಳೇ ಈ ಶಾಲೆಗೆ ಕೀರ್ತಿ ತರುತ್ತಿದ್ದಾರೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಹರೀಶ್, ಶಿಕ್ಷಕರಾದ ನಾಗೇಶ್ , ಐಎಂಐ ಟಿಐ ಕಾಲೇಜು ಕಾರ್ಯದರ್ಶಿ ಸಯ್ಯದ್ ಅಹಮ್ಮದ್, ಸಂಸ್ಥೆಯ ಅಧ್ಯಕ್ಷರು ಎನ್. ಚಿಕ್ಕಣ್ಣ ಜಯಮ್ಮ, ಕಾರ್ಯದರ್ಶಿ ಶಶಿಕುಮಾರ್,
ಮುಖ್ಯಶಿಕ್ಷಕಿ ಸ್ಫೂರ್ತಿ ಎಸ್, ಪುಷ್ಪಾ, ಶಾಂತಾ, ಸಾವಿತ್ರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು