1:46 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

30 ವರ್ಷಗಳ ಹಿಂದಿನ ಸಹಪಾಠಿಗೆ ಬಣಕಲ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು: ವಾಟ್ಸಾಪ್ ಗ್ರೂಪ್ ರಚಿಸಿ ಕಾರ್ಯಪ್ರವೃತ್ತಿ

24/02/2024, 10:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್ ಪ್ರೌಢಶಾಲೆಯ 1989-90 ಬ್ಯಾಚಿನ ವಿದ್ಯಾರ್ಥಿಗಳು ಸೊಂಟದ ಬಲ ಕಳೆದುಕೊಂಡು ಮೂಲೆಗುಂಪಾಗಿರುವ ಸಹಪಾಠಿ ಅಚ್ಯುತ ಪೂಜಾರಿ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಸೈಯದ್ ನವೀದ್ ಮಾತನಾಡಿ’ ಬಣಕಲ್ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿಗಳಾದ ನಾವು ನಮ್ಮ ಸ್ನೇಹಿತ ಸ್ಟ್ಯಾನಿ ಲೋಬೊ ಮುಖಾಂತರ ಮೂವತ್ತಮೂರು ವರ್ಷದ ನಂತರ ವಾಟ್ಸಾಪ್ ಗ್ರೂಪ್ ರಚಿಸಿ ಸ್ನೇಹಿತರ ಯೋಗಕ್ಷೇಮ ವಿಚಾರಿಸುತ್ತಿದ್ದೇವು. ಡಿಸೆಂಬರ್ ತಿಂಗಳಿನಲ್ಲಿ ಈ ಗ್ರೂಪ್ ರಚಿಸಿ ಕಷ್ಟದಲ್ಲಿರುವ ನಮ್ಮ ಸಹಪಾಠಿಗಳಿಗೆ ನೆರವಾಗುವ ಉದ್ದೇಶದಿಂದ ಈ ಗ್ರೂಪ್ ರಚಿಸಲಾಯಿತು’ಎಂದರು. ಸಹಪಾಠಿ ವಸಂತ್ ಎಸ್. ಪೂಜಾರಿ ಮಾತನಾಡಿ’ ನಮ್ಮ ಸಹಪಾಠಿ ಅಚ್ಯುತ ಪೂಜಾರಿ 28 ವರ್ಷದಿಂದ ಸೊಂಟದ ಬಲ ಕಳೆದು ಕೊಂಡು ದುಡಿಯಲಾಗದೇ ಮನೆಯ ಹಾಸಿಗೆ ಹಿಡಿದಿದ್ದರು. ಅವರ ಅಣ್ಣ ಅತ್ತಿಗೆ ಮಗನಂತೆ ಅವರ ಸೇವೆ ಮಾಡುತ್ತಿದ್ದಾರೆ ಎಂದು ವಿಷಯ ಕೇಳಿ ನಮಗೆ ಸಂತೋಷವಾಯಿತು. ಆದರೂ ಸ್ನೇಹಿತರ ಸಹಕಾರದಿಂದ ನಮ್ಮ ತಂಡದಿಂದ 1ಲಕ್ಷ 20 ಸಾವಿರ ಹಣವನ್ನು ಅಚ್ಯುತ ಪೂಜಾರಿ ಅವರಿಗೆ ಚೆಕ್ ಮೂಲಕ ನಾವು ವಿತರಿಸಿದೆವು. ಅಚ್ಯುತ ನಮ್ಮೆಲ್ಲರ ಸಹಪಾಠಿಗಳ ಗುರುತು ಹಚ್ಚಿ ಆನಂದ ಬಾಷ್ಪ ಸುರಿಸಿದರು. ಅವರ ಅಣ್ಣ ಅತ್ತಿಗೆಯವರ ಕಣ್ಣುಗಳು ಕೂಡ ತೇವವಾದವು. ಇದರಿಂದ ಬೇರೆ ವಿದ್ಯಾರ್ಥಿಗಳು ಕೂಡ ಶಾಲೆ ಸ್ನೇಹಿತರನ್ನು ಮರೆಯದೇ ಇತರರಿಗೂ ಇಂತಹ ಕಾರ್ಯಗಳು ಮಾದರಿಯಾಗಬೇಕು ಎಂಬುದು ನಮ್ಮ ತಂಡದ ಮೂಲ ಉದ್ದೇಶವಾಗಿದೆ’ಎಂದರು.ಈ ಸಂದರ್ಭದಲ್ಲಿ ಸ್ನೇಹಿತ ಸಹಪಾಠಿಗಳಾದ ಸ್ಟ್ಯಾನಿ ಲೋಬೊ,ಅಬ್ದುಲ್ ಸಲಾಂ, ಬಿ.ಜಿ.ಪ್ರಕಾಶ್, ವಿನಯ ಪ್ರಭು, ಮುನೀರ್,ಅನಿಲ್ ಮೊಂತೆರೊ, ನಾರಾಯಣ್,ಸುಕೇಶ್,ಬಿ.ಎಸ್.ಕಲ್ಲೇಶ್, ಎಸ್.ಎನ್.ರವಿ, ಸುವರ್ಣಲತ,ಕೆ.ಎಲ್.ರಘು, ರಿಯಾಜುದ್ದೀನ್,ಶಾರದಾ,ಟಿ.ಎಸ್.ಗಣೇಶ್,ಟಿ.ಎಸ್. ಪ್ರಸನ್ನ,ಗಣೇಶ್ ಸಬ್ಬೇನಹಳ್ಳಿ,ಹರೀಶ್ ಸುಭಾಷನಗರ, ಬಿ.ಸಿ.ಉಮೇಶ್,ಎಂ.ಎಸ್.ಪ್ರವೀಣ್, ಆಲ್ವಿನ್ ತೋಮಸ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು