8:06 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಅಭಿ ಎನ್. ನಿರ್ದೇಶನದ ‘ಕ್ರಷ್’ ಕನ್ನಡ ಚಲನಚಿತ್ರ ಫೆ.2ರಂದು ರಾಜ್ಯಾದ್ಯಂತ ತೆರೆಗೆ

29/01/2024, 19:56

ಮಂಗಳೂರು(reporterkarnataka.com): ಸ್ಮೈಲಿYB ಕ್ರಿಯೇಷನ್ಸ್ ಬೆಂಗಳೂರು ಬ್ಯಾನರ್ ನಲ್ಲಿ ನಿರ್ಮಾಪಕರಾದ ಎಸ್. ಚಂದ್ರಮೋಹನ್ ನಿರ್ಮಾಣದ ‘ಕ್ರಷ್’ ಕನ್ನಡ ಚಲನಚಿತ್ರ ಫೆ.2ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ನಗರದಲ್ಲಿ ಭಾನುವಾರ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಅಭಿ ಎನ್. ಅವರು, ಇದೇ ಮೊದಲ ಬಾರಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಸಿನಿ ಪ್ರಿಯರಿಗೆ ಖಂಡಿತಾ ಈ ಚಿತ್ರ ಇಷ್ಟವಾಗಲಿದೆ ಎಂದರು.
ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು, ಸಕಲೇಶಪುರ ಮತ್ತು ಮಂಗಳೂರಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಡೆದಿದೆ. ಅತ್ಯುತ್ತಮ ಕಥಾ ಹಂದರವನ್ನು ಕ್ರಷ್ ಒಳಗೊಂಡಿದೆ. ಉತ್ತಮ ಹಾಡುಗಳೂ ಕೂಡ ಇದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದವರು ತಿಳಿಸಿದರು.


ನಿರ್ಮಾಪಕ ಎಸ್.ಚಂದ್ರಮೋಹನ್ ಅವರು ಮಾತನಾಡಿ, ಇದೊಂದು ತಂದೆ ಮಗ ಮತ್ತು ತಾಯಿ ಮಗಳ ಬಾಂಧವ್ಯದ ಕಥಾಹಂದರವನ್ನು ಹೊಂದಿದ್ದು ಯುವ ಜನಾಂಗವನ್ನು ಆಕರ್ಷಿಸುವ ಸಾಕಷ್ಟು ಅಂಶಗಳನ್ನು ಸಿನಿಮಾ ಹೊಂದಿದೆ ಎಂದರು.
ಈ ಹಿಂದೆ ರಂಗ್ ಬಿರಂಗಿ ಮತ್ತು ಇದೇ ಅಂತರಂಗ ಶುದ್ಧಿ ಎಂಬ ಎರಡು ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ಪಂಚಾಕ್ಷರಿ ನಾಯಕನಟನಾಗಿ ನಟಿಸಿದ್ದು ಉತ್ತರ ಕರ್ನಾಟಕದ ಬೆಡಗಿ ಪ್ರತಿಭಾ ಸೊಪ್ಪಿಮಠ ನಾಯಕಿಯಾಗಿ ನಟಿಸಿದ್ದಾರೆ. ಅನುಭವ ಸಿನಿಮಾ ಖ್ಯಾತಿಯ ಅಭಿನಯರವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಹೆಸರಾಂತ ಪೋಷಕ ನಟ ಮಂಜುನಾಥ್ ಹೆಗ್ಗಡೆ, ಮಂಗಳೂರಿನ ವಿನೀತ್, ಸುಧೀರ್ ರಾಜ್ ಉರ್ವ, ಸಂತೋಷ್ ಕೊಲ್ಯ ರಂತಹ ಖ್ಯಾತ ನಟರು ಈ ಸಿನಿಮಾದ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಿ.ಎಸ್.ಸತೀಶ್ ಛಾಯಾಗ್ರಹಣ, ಸಂಕಲನಕಾರರಾಗಿ ಪವನ್, ವಿನೀತ್ ರಾಜ್ ಮೆನನ್ ರವರ ಸುಮಧುರ ಸಂಗೀತವಿದ್ದು, ಯು. ವಿ.ಅನುತ್ತಮ್ ಮತ್ತು ಅಭಿ .ಎನ್. ಸಾಹಿತ್ಯ ರಚಿಸಿದ್ದಾರೆ.
‘ಕ್ರಷ್ ’ ಹಾಡುಬಿಡುಗಡೆ ಸಂದರ್ಭ ನಟರಾದ ಸಂತೋಷ್ ಕೊಲ್ಯ, ಸಮರ್ಥ್, ನಟಿ ದಿವ್ಯಶ್ರೀ ಕಾವೂರು, ಸಹ ನಿರ್ದೇಶಕ ಜೈಚಂದ್ರ, ಗೀತೆ ರಚನೆಕಾರ ಅನುತ್ತಮ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು