ಇತ್ತೀಚಿನ ಸುದ್ದಿ
ಅಯೋಧ್ಯೆಯಲ್ಲಿ ರಾಮಲಲ್ಲಾನಾಗಿ ಬೆಳಗಿದ ಕರ್ನಾಟಕದ ಶಿಲೆ: ಮೈಸೂರು ಹಾರೋಹಳ್ಳಿಯಲ್ಲಿ ಭೂಮಿಪೂಜೆ; ಮಂದಿರ ನಿರ್ಮಾಣದ ಸಂಕಲ್ಪ
22/01/2024, 13:46

ಭೀಮಣ್ಣ ಪೂಜಾರಿ ಶಿರನಾಳ ಮೈಸೂರು
info.reporterkarnataka@gmail.com
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಇಂದು ಪ್ರಾಣ ಪ್ರತಿಷ್ಠೆ ಮಾಡಲಾದ ಶ್ರೀರಾಮಲಲ್ಲಾ ವಿಗ್ರಹಕ್ಕೆ ಶಿಲೆಯನ್ನು ಒದಗಿಸಿದ ಮೈಸೂರಿನ ಹಾರೋಹಳ್ಳಿಯಲ್ಲಿ ಇಂದು ಭೂಮಿ ಪೂಜೆ ನಡೆಸಲಾಯಿತು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಗುಜ್ಜೇಗೌಡನಪುರ ಗ್ರಾಮದ ವ್ಯಾಪ್ತಿಯಲ್ಲಿ ಹಾರೋಹಳ್ಳಿ ಪ್ರದೇಶವಿದೆ. ಈ ಹಾರೋಹಳ್ಳಿ ಪ್ರದೇಶದ ಎಚ್. ರಾಮದಾಸ ಎಂಬ ಸಾಮಾನ್ಯ ರೈತನ ಜಮೀನಿನಲ್ಲಿ ದೊರೆತ ಶಿಲೆಯಿಂದ ರಾಮಲಲ್ಲಾನ ವಿಗ್ರಹ ಮೂಡಿ ಬಂದಿದೆ. ವ್ಯವಸಾಯಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಾಮದಾಸ ಅವರು ತನ್ನ ಜಮೀನಿನಿಂದ ಈ ಶಿಲೆಯನ್ನು ತೆಗೆಸಿದ್ದರು. ಇಂದು ಆ ಶಿಲೆ ಇಡೀ ಜಗತ್ತೇ ನೋಡಬಲ್ಲ ರಾಮಲಲ್ಲಾನಾಗಿ ಎದ್ದು ನಿಂತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ವೇಳೆಯಲ್ಲಿ ಇಲ್ಲಿ ಭೂಮಿ ಪೂಜೆ ನಡೆಸಲಾಗಿದೆ. ಇಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಸಂಕಲ್ಪವನ್ನು ರಾಮದಾಸರು ತಿಳಿಸಿದ್ದಾರೆ.