5:51 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೂಡ್ಲಿಗಿಯಲ್ಲಿ ವಿಶ್ವ ರೈತರ ದಿನಾಚರಣೆ; ಕೃಷಿ ಮಾಡುವವರ ಸಂಖ್ಯೆ ಗಣನೀಯ ಇಳಿಕೆಗೆ ಆತಂಕ; ರೈತರಿಗೆ ಸನ್ಮಾನ

25/12/2023, 15:26

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ, ಕೃಷಿ ಇಲಾಖೆ ಹಾಗೂ ರೈತರಿಂದ ವಿಶ್ವ ರೈತರ ದಿನಾಚರಣೆಯನ್ನು ಆಚರಿಸಲಾಯಿತು. ಕೃಷಿ ಸಮಾಜದ ಪ್ರದಾನ ಕಾರ್ಯದರ್ಶಿ ಎಮ್.ಬಸವರಾಜ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮುಖಂಡ ಕೆಕೆ ಹಟ್ಟಿ ದೇವರಮನಿ ಮಹೇಶ, ಕಾಯಕಲ್ಪ ರೈತ ಉತ್ಪಾದಕರ ಸಂಘದ ಸಿ.ಇ ಒ.ನಾಗರಾಜ್ ಮಾತನಾಡಿದರು.ಕೃಷಿ ಇಲಾಖೆಯು ಸಹಾಯಕ ನಿರ್ದೆಶಕರಾದ ಸುನೀಲ್ ಕುಮಾರ ಪ್ರಾಸ್ತಾವಿಕ ಮಾತನಾಡಿದರು. ಅಧಿಕಾರಿ ಶ್ರವಣ ಕುಮಾರ್ ನಿರೂಪಿಸಿದರು, ನೀಲಾ ನಾಯ್ಕ್ ಸ್ವಾಗತಿಸಿದರು. ಕೃಷಿ ಕ್ಷೇತ್ರದಲ್ಲಿ ವಿವಿಧ ರೀತಿಯ ಗಣನೀಯ ಸಾಧನೆ ಗೈದ, ರೈತರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಹಿರಿಯ ವಕೀಲರು ಹಾಗೂ ನೋಟರಿ ಸಿದ್ದಪ್ಪ, ಪ್ರಗತಿಪರ ರೈತರಾದ ಬಣವಿಕಲ್ಲು ಎರ್ರಿಸ್ವಾಮಿ, ಶಾಂತನಹಳ್ಳಿ ಎಂ.ಜಿ.
ಸಿದ್ದನಗೌಡ,ಬೊಮ್ಮಯ್ಯ, ಹನುಮಂತಪ್ಪ,ನಾಗರಾಜ,ಬಸವರಾಜಪ್ಪ. ಭರ್ಮಪ್ಪ, ಒಂಟಿಪಾಲಪ್ಪ, ಗುರುಬಸವರಾಜ,ಹೆಗ್ಗಪ್ಪ, ರೈತ ಮುಖಂಡ ಜಂಗಮ ಸೋವೆನಹಳ್ಳಿ ನಂದಿ ಜಂಬಣ್ಣ. ರೈತ ಮಹಿಳೆಯರಾದ ಹೊಸಹಳ್ಳಿ ನೇತ್ರಾವತಿ, ಪೂಜಾರಹಳ್ಳಿ ಈಶ್ವರಮ್ಮ, ಸೇರಿದಂತೆ ಅನೇಕ ರೈತ ಮುಖಂಡರು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ, ರೈತರು ಕೃಷಿ ಇಲಾಖಾ ಸಿಬ್ಬಂದಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು